ಕನ್ನಡಪ್ರಭ ವಾರ್ತೆ ನಾಪೋಕ್ಲು
ಕೋಕೇರಿ ಗ್ರಾಮದ ಚೇನಂಡ ಕುಟುಂಬಸ್ಥರ ಐನ್ ಮನೆಯಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಶಾಸಕರ ಭೇಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಕೊಡಗಿನಲ್ಲಿ ಪ್ರತಿ ವರ್ಷವೂ ಹಾಕಿ ನಮ್ಮೆಯನ್ನು ಯಶಸ್ವಿಯಾಗಿ ಆಯೋಜಿಸಲಾಗುತ್ತಿದೆ. ಪ್ರಸಕ್ತ ವರ್ಷ ನಾಪೋಕ್ಲುವಿನಲ್ಲಿ ಆಯೋಜಿಸಲಾಗಿರುವ ಚೇನಂಡ ಕಪ್ ಹಾಕಿ ಟೂರ್ನಿಯು ಈ ಹಿಂದೆ ಜರುಗಿದ ಹಾಕಿ ಉತ್ಸವಕ್ಕಿಂತಲೂ ಹೆಚ್ಚಿನ ಯಶಸ್ವಿಯನ್ನು ಕಾಣಲಿ. ಜನಪ್ರತಿನಿಧಿಯಾಗಿ ತಾನು ಕೊಡವ ಹಾಕಿ ನಮ್ಮೆಯ ಯಶಸ್ಸಿಗೆ ಸರ್ವ ರೀತಿಯ ಸಹಕಾರವನ್ನು ನೀಡುತ್ತೇನೆ ಎಂದು ಹಾಕಿ ನಮ್ಮೆಯ ಪೂರ್ವಸಿದ್ಧತೆಯ ಬಗ್ಗೆ ಸಮಾಲೋಚಿಸಿ ಶುಭ ಹಾರೈಸಿದರು.
ಹಾಕಿ ಉತ್ಸವ ಸಮಿತಿ ಅಧ್ಯಕ್ಷ ಕಂಬನ್ನಿ ಕರುಂಬಯ್ಯ ಅವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಜೇನಂಡ ಕುಟುಂಬದ ಅಧ್ಯಕ್ಷ ಚಿಟ್ಟಿ ಅಪ್ಪಯ್ಯ, ಕ್ರಿಕೆಟ್ ನಮ್ಮೆ ಅಧ್ಯಕ್ಷ ಸಿ. ಕೆ. ಅಯ್ಯಪ್ಪ , ಕ್ರೀಡಾ ಅಕಾಡೆಮಿ ಕಾರ್ಯದರ್ಶಿ ಮಧುಮಾದಯ್ಯ , ಒಲಂಪಿಯನ್, ಚೆಪ್ಪುಡಿರ ಪೂಣಚ್ಚ , ಈ ಹಿಂದೆ ಆಯೋಜಿಸಿದ ಹಾಕಿ ಉತ್ಸವದ ಪರವಾಗಿ ಉಪಸ್ಥಿತರಿದ್ದ ಕುಂಡ್ಯೋಳಂಡ ವಿಶು ಪೂವಯ್ಯ, ಅಪ್ಪಚೆಟ್ಟೋಳಂಡ ರವಿ , ಜೇನಂಡ ಜಪ್ಪು ದೇವಯ್ಯ, ಅಕಾಡೆಮಿ ನಿರ್ದೇಶಕ ಕುಲ್ಲೇಟಿರ ಅರುಣ್ ಬೇಬಾ, ಖಜಾಂಜಿ ದೀಪಕ್ ಚಂಗಪ್ಪ ಗಣ್ಯರು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮ ಮುನ್ನ ತಳಿಯಕ್ಕಿ ಬೊಳಕ್ , ದುಡಿಕೊಟ್ ಪಾಟ್ನೊಂದಿಗೆ ಶಾಸಕರನ್ನು ಗೌರವಯುತವಾಗಿ ಬರಮಾಡಿಕೊಂಡು ಕೈ ಮಡ ಹಾಗೂ ಐನ್ ಮನೆಗೆ ಆಗಮಿಸಿ ಪ್ರಾರ್ಥನೆ ಸಲ್ಲಿಸಲಾಯಿತು. ಸಭಾ ಕಾರ್ಯಕ್ರಮದಲ್ಲಿ ಕರುಂಬಯ್ಯ ಸ್ವಾಗತಿಸಿದರು. ಮನಸ್ವಿ ಪ್ರಾರ್ಥಿಸಿ ಚೇನಂಡ ಕ್ರೀಡಾಕೂಟದ ವಾಕ್ತರ ಸುರೇಶ್ ನಾಣಯ್ಯ ವಂದಿಸಿದರು.