ಹೊಸಪೇಟೆ: ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಜಿಲ್ಲಾಸ್ಪತ್ರೆಗೆ ಕೆಕೆಆರ್‌ಡಿಬಿ ಕಾರ್ಯದರ್ಶಿ ನಳಿನ್ ಅತುಲ್ ಶನಿವಾರ ಭೇಟಿ ನೀಡಿ, ಪಿಡಬ್ಲುಡಿ ನಿರ್ಮಿಸುತ್ತಿರುವ ರಸ್ತೆ ಗುಣಮಟ್ಟ ಪರಿಶೀಲಿಸಿ ಅಧಿಕಾರಿಗಳ ವಿರುದ್ಧ ಗರಂ ಆದರು.ಇಲ್ಲಿನ ನೂರು ಹಾಸಿಗೆಗಳ ಸಾರ್ವಜನಿಕರ ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ಜಿಲ್ಲಾಸ್ಪತ್ರೆ ಆವರಣದಲ್ಲಿ ರಸ್ತೆ ಗುಣಮಟ್ಟವನ್ನು ಪರಿಶೀಲಿಸಿದರು. ಈ ವೇಳೆ ರಸ್ತೆ ಅಗೆಸಿ ತಾವೇ ಸ್ಕೇಲ್ ಹಿಡಿದು, ರಸ್ತೆ ನಿರ್ಮಾಣ ಸಮರ್ಪಕವಾಗಿಲ್ಲ. ಇದನ್ನು ಸರಿಪಡಿಸಿ ಎಂದು ಸ್ಥಳದಲ್ಲಿದ್ದ ಪಿಡಬ್ಲುಡಿ ಇಇ ದೇವದಾಸ್‌ಗೆ ಸೂಚಿಸಿದರು.
ಬಳಿಕ ಜಿಲ್ಲಾಸ್ಪತ್ರೆ ಕಟ್ಟದಲ್ಲಿ ಓಟಿ ಸೇರಿದಂತೆ ಇತರೆ ಸೌಕರ್ಯಗಳನ್ನು ಪರಿಶೀಲಿಸಿದ ಅವರು, ಜತೆಗಿದ್ದ ಜಿಪಂ, ಸಿಇಒ ಅಕ್ರಂ ಷಾ ಅವರಿಂದ ಮಾಹಿತಿ ಪಡೆದರು. ಆಸ್ಪತ್ರೆ ಆರಂಭಕ್ಕೆ ಬೇಕಾದ ಅಗತ್ಯ ವೈದ್ಯಕೀಯ ಉಪಕರಣಗಳು ಸೇರಿದಂತೆ ಇತರೆ ಮಾಹಿತಿಗಳನ್ನು ಡಿಎಚ್‌ಒ ಡಾ.ಎಲ್.ಆರ್.ಶಂಕರನಾಯ್ಕ ಅವರಿಂದ ಪಡೆದುಕೊಂಡ ಅವರು, ವೈದ್ಯಕೀಯ ಉಪಕರಣಗಳಿಗೆ ಸಂಬಂಧಿಸಿದ ಪ್ರಸ್ತಾವವನ್ನು ಮತ್ತೊಮ್ಮೆ ಕಳಿಸಲು ತಿಳಿಸಿದರು.
ಹೊಸಪೇಟೆ ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಜಿಲ್ಲಾಸ್ಪತ್ರೆಗೆ ಕೆಕೆಆರ್‌ಡಿಬಿ ಕಾರ್ಯದರ್ಶಿ ನಳಿನ್ ಅತುಲ್ ಅವರು ಶನಿವಾರ ಭೇಟಿ ನೀಡಿದರು.