ನಾಲ್ವಡಿ ಕೃಷ್ಣರಾಜ ಒಡೆಯರ್ ಆರ್ಥಿಕ ತಜ್ಞ: ಲಿಂಗಯ್ಯ ಬಿ. ಹಿರೇಮಠ

KannadaprabhaNewsNetwork |  
Published : Jun 05, 2025, 01:19 AM IST
ಹಾವೇರಿಯ ಸರ್ಕಾರಿ ನೌಕರರ ಭವನದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಜನ್ಮದಿನ ಆಚರಿಸಲಾಯಿತು. | Kannada Prabha

ಸಾರಾಂಶ

ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಅಭಿವೃದ್ಧಿ ಕಾರ್ಯಗಳನ್ನು ಗಮನಿಸಿದ ಮಹಾತ್ಮ ಗಾಂಧಿಯವರು ಅವರಿಗೆ ರಾಜರ್ಷಿ ಬಿರುದು ನೀಡಿ ಗೌರವಿಸಿದ್ದರು.

ಹಾವೇರಿ: ಕನ್ನಡ ನಾಡು ನುಡಿಯ ಬಗ್ಗೆ ಅಪಾರ ಅಭಿಮಾನ ಹೊಂದಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಆರ್ಥಿಕ ತಜ್ಞರೂ ಆಗಿದ್ದರು. ಈ ಹಿನ್ನೆಲೆಯಲ್ಲಿ ಔದ್ಯೋಗಿಕ ಬೆಳವಣಿಗೆಗೆ ಕಾರಣರಾದರು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಲಿಂಗಯ್ಯ ಬಿ. ಹಿರೇಮಠ ತಿಳಿಸಿದರು.ನಗರದ ಸರ್ಕಾರಿ ನೌಕರರ ಭವನದಲ್ಲಿ ಜರುಗಿದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 141ನೇ ಜಯಂತಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಒಡೆಯರ್ ನಮ್ಮ ಭಾಷೆ ಮತ್ತು ಭಾಷಿಕರ ಬಗ್ಗೆ ಸದಾ ಕಾಳಜಿ ಹೊಂದಿದ್ದರು. ಅದೇ ಕಾರಣದಿಂದಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಆರಂಭಕ್ಕೆ ಕಾರಣೀಕರ್ತರಾದರು. ಅವರ ವ್ಯಕ್ತಿತ್ವ ನಮಗೆ ಮಾದರಿ ಎಂದರು.ಸಾಹಿತಿ ಸಿ.ಎಸ್. ಮರಳಿಹಳ್ಳಿ ಮಾತನಾಡಿ, ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಅಭಿವೃದ್ಧಿ ಕಾರ್ಯಗಳನ್ನು ಗಮನಿಸಿದ ಮಹಾತ್ಮ ಗಾಂಧಿಯವರು ಅವರಿಗೆ ರಾಜರ್ಷಿ ಬಿರುದು ನೀಡಿ ಗೌರವಿಸಿದ್ದರು. ನಾಡಿನ ಸರ್ವಾಂಗೀಣ ಅಭಿವೃದ್ಧಿಗೆ ನೀರಾವರಿ ಯೋಜನೆ ಮತ್ತು ಶೈಕ್ಷಣಿಕ ಕಾಳಜಿ ತೋರಿದರು. ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸಿದ ಅವರ ನಡೆ ಅನುಕರಣೀಯ ಎಂದರು.ಡಾ. ವಿ.ಪಿ. ದ್ಯಾಮಣ್ಣವರ, ಎಸ್.ಎನ್. ದೊಡ್ಡಗೌಡ್ರ, ಎಸ್.ಆರ್. ಹಿರೇಮಠ, ಹನುಮಂತಗೌಡ ಗೊಲ್ಲರ, ಈರಣ್ಣ ಬೆಳವಡಿ, ಜಿ.ಎಂ. ಓಂಕಾರಣ್ಣನವರ, ಶೈಲಜಾ ಕೋರಿಶೆಟ್ಟರ, ಜುಬೇದಾ ನಾಯಕ್ ಇದ್ದರು. ಅರಳಿಕಟ್ಟಿ ಗೂಳಪ್ಪ ನಿರೂಪಿಸಿದರು. ಕೃಷ್ಣರಾಜ ಒಡೆಯರ ಅವರು ಪ್ರಭಾವಶಾಲಿ ಆಡಳಿತಗಾರ

ರಟ್ಟೀಹಳ್ಳಿ: ಕೃಷ್ಣರಾಜ ಒಡೆಯರ ಅವರ ಆಳ್ವಿಕೆ ಕಾಲವನ್ನು ಸುವರ್ಣಯುಗ ಮತ್ತು ಅವರ ಪ್ರಭಾವಶಾಲಿ ಆಡಳಿತಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದು ನಮ್ಮೆಲ್ಲರಿಗೂ ಹೆಮ್ಮೆ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸಂತೋಷ ಚಂದ್ರಕೇರ ತಿಳಿಸಿದರು.

ಪಟ್ಟಣ ಪಂಚಾಯಿತಿ ಆವರಣದಲ್ಲಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.ರಾಜಕುಮಾರ ಹೇಂದ್ರೆ, ಮಲ್ಲನಗೌಡ ಪಿ., ಮಂಜು ಸುಣಗಾರ, ವಿನುತಾ, ವೀರೇಶ ದ್ಯಾವಕ್ಕಳವರ, ಬಸಣ್ಣ ಕವಲೆತ್ತು, ಮಂಜಪ್ಪ ಚಲವಾದಿ, ರವಿ ಹರಜನ, ಗುತ್ತೆಪ್ಪ ಮಾದರ, ಕುಮಾರ ಬೆಳಕೇರಿ ಮುಂತಾದವರು ಇದ್ದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ