ದುರ್ಗದ ಯಾವುದಾದರೂ ರಸ್ತೆಗೆ ಶ್ರೀಶೈಲ ಆರಾಧ್ಯರ ಹೆಸರಿಡಿ: ಶಿವಲಿಂಗಾನಂದ ಶ್ರೀ

KannadaprabhaNewsNetwork |  
Published : Feb 06, 2024, 01:33 AM IST
ಚಿತ್ರದುರ್ಗ ಎರಡನೇ ಪುಟದ ಬಾಟಂ   | Kannada Prabha

ಸಾರಾಂಶ

ನಗರದ ಬಾಪೂಜಿ ವಿದ್ಯಾಸಂಸ್ಥೆ ಆವರಣದಲ್ಲಿ ಸೋಮವಾರ ಅಗಲಿದ ಶ್ರೀಶೈಲ ಆರಾಧ್ಯ ಹಾಗೂ ಕೆ.ಎಂ.ತಿಪ್ಪೇಸ್ವಾಮಿ ಅವರ ಸ್ಮರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕನ್ನಡಪ್ರಭವಾರ್ತೆ ಚಿತ್ರದುರ್ಗ

ಚಿತ್ರದುರ್ಗದ ಯಾವುದಾದರೊಂದು ರಸ್ತೆಗೆ ಅಗಲಿದ ಸಾಹಿತಿ, ವಾಗ್ಮಿ , ಸಂಶೋದಕ ಶ್ರೀಶೈಲ ಆರಾಧ್ಯರ ಹೆಸರು ನಾಮಕರಣ ಮಾಡಬೇಕೆಂದು ಕಬೀರಾನಂದ ಆಶ್ರಮದ ಶಿವಲಿಂಗಾನಂದ ಸ್ವಾಮೀಜಿ ಹೇಳಿದರು.

ನಗರದ ಬಾಪೂಜಿ ವಿದ್ಯಾಸಂಸ್ಥೆ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಶ್ರೀಶೈಲ ಆರಾಧ್ಯ ಹಾಗೂ ಕೆ.ಎಂ.ತಿಪ್ಪೇಸ್ವಾಮಿ ಅವರ ಸ್ಮರಣೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಕೆಲವರು ಇದ್ದಾಗ ಸತ್ತಂತೆ ಬದುಕುತ್ತಾರೆ. ಮತ್ತೆ ಕೆಲವರು ಸತ್ತ ಮೇಲೋ ಇದ್ದಂತೆ ಬದುಕುತ್ತಾರೆ. ಆರಾಧ್ಯರು ಎರಡನೇ ಗುಂಪಿಗೆ ಸೇರಿದವರೆಂದು ಬಣ್ಣಿಸಿದರು.

ಕಬೀರಾನಂದ ಮಠಕ್ಕೂ, ಆರಾಧ್ಯರಿಗೂ ಉತ್ತಮವಾದ ಒಡನಾಟ ಇತ್ತು. ಅವರಲ್ಲಿನ ಆಳವಾದ ಪಾಂಡಿತ್ಯ, ಮಾತಿ ಶೈಲಿ ಎಂತಹವರ ಬೆರಗು ಗೊಳಿಸುತ್ತಿತ್ತು. ಇದ್ದಲ್ಲದೆ ಜ್ಯೋತಿಷ್ಯದ ಬಗ್ಗೆಯೂ ಅಪಾರವಾದ ಜ್ಞಾನ ಹೊಂದಿದವರಾಗಿದ್ದರು. ಅವರಲ್ಲಿನ ಅಂತರ್ಗತವಾಗಿದ್ದು, ಕಲಿಸುವಿಕೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಆರಾಧ್ಯರು ನಮ್ಮನ್ನು ಬಿಟ್ಟು ಬಹು ಬೇಗ ವಿಧಿವಶರಾದರು. ಕಾಲ ಎಲ್ಲವನ್ನು ಮಾಡುತ್ತಾ ಹೋಗುತ್ತದೆ. ಇದನ್ನು ತಡೆಯುವ ಶಕ್ತಿ ಯಾರಿಗೂ ಇಲ್ಲವಾಗಿದೆ. ಸಾವು ಹೇಗೆ ಎಂಬುದನ್ನು ಭಗವಂತ ತಿಳಿಸುವುದಿಲ್ಲ, ಆದರೆ ಸಮಯ ಮುಗಿದಾಗ ಮಾತ್ರ ಯಾರನ್ನು ಬಿಡುವುದಿಲ್ಲ ಕರೆದ್ಯೊಯುತ್ತಾನೆ ಎಂದರು.

ನುಡಿ ನಮನ ಸಲ್ಲಿಸಿ ಮಾತನಾಡಿದ ಖ್ಯಾತ ಇತಿಹಾಸ ಸಂಶೋಧಕ ಡಾ.ಬಿ.ರಾಜಶೇಖರಪ್ಪ, ಶ್ರೀಶೈಲ ಆರಾಧ್ಯರದು ಮರೆಯಲಾಗದ ವ್ಯಕ್ತಿತ್ವ. ಪ್ರಾಧ್ಯಾಪಕ ರಾಗಿ, ಇತಿಹಾಸ ಸಂಶೋಧಕರಾಗಿ, ಸಾಹಿತಿಗಳಾಗಿ ಬಹುಮುಖಿಯಾಗಿದ್ದರು. ಹಲವಾರು ಕ್ಷೇತ್ರಗಳಲ್ಲಿ ಕೆಲಸ ಮಾಡಿ ಜನತೆಯ ಮನಸ್ಸನ್ನು ಗೆದ್ದಿದ್ದರು. ಚಿತ್ರ ದುರ್ಗದಲ್ಲಿ ತಿರುಗಾಟ ನಡೆಸಿ ಇತಿಹಾಸ ಸಂಶೋಧನೆ ಮಾಡಿ ಪುಸ್ತಕಗಳನ್ನು ಬರೆದಿದ್ದಾರೆ. ಬ್ರಹ್ಮಗಿರಿಯ ಗುಹಾ ಚಿತ್ರಗಳ ಬಗ್ಗೆ ಆಪಾರವಾದ ಆಸಕ್ತಿಯನ್ನು ಹೊಂದಿದ್ದು ಅದರ ಮೇಲೆ ಸಂಶೋಧನೆಯನ್ನು ಮಾಡಿದ್ದಾರೆ ಎಂದರು.

ಮದಕರಿನಾಯಕ ಸಾಂಸ್ಕೃತಿಕ ಕೇಂದ್ರ ಅಧ್ಯಕ್ಷ ಡಿ.ಗೋಪಾಲಸ್ವಾಮಿ ನಾಯಕ ಮಾತನಾಡಿ, ಆರಾಧ್ಯರು ಸದಾ ಜನಸ್ನೇಹಿಯಾಗಿದ್ದರು. ಯಾವುದಾದರೊಂದು ಕೆಲಸ ಕೈಗೆತ್ತಿಕೊಂಡರು ಅದು ಮುಗಿಯುವ ತನಕ ವಿರಮಿಸುತ್ತಿರಲಿಲ್ಲ. ಯಾವೊತ್ತು ಸನ್ಮಾನ, ಪ್ರಶಸ್ತಿಗಳ ಹಿಂದೆ ಹೋದವರಲ್ಲ.ಲಾಭಿಗಳ ಮಾಡಲಿಲ್ಲ. ತಮ ಗಿಂತ ಸಣ್ಣವರಿಗೆ ಪ್ರಶಸ್ತಿ ಬಂದರೂ ತಲೆ ಕೆಡಿಸಿಕೊಂಡವರಲ್ಲ. ಮಗಳ ಸಾವಿನಿಂದ ಆರಾಧ್ಯರವರು ಸ್ವಲ್ಪ ಮೆತ್ತಗೆ ಆದರು ಎಂದು ಹೇಳಿದರು.ಹಿರಿಯ ಪತ್ರಕರ್ತ ಶ.ಮಂಜುನಾಥ್ ಮಾತನಾಡಿ, ಸುದ್ದಿಗಿಡುಗ ಪತ್ರಿಕೆಯ ಸಂಪಾದಕರಾದ ಶ.ಮಂಜುನಾಥ್, ಚಿತ್ರದುರ್ಗದಲ್ಲಿ ಹಲವಾರು ಕನ್ನಡ ಸಾಹಿತ್ಯ ಸಮ್ಮೇಳನಗಳು ನಡೆದರೂ ಆರಾಧ್ಯರವರಿಗೆ ಸಮ್ಮೇಳನ ಆಧ್ಯಕ್ಷರಾಗುವ ಭಾಗ್ಯ ಒದಗಿ ಬರಲಿಲ್ಲ ಎನ್ನುವುದು ದುರಂತ ಎಂದರು. ಬಾಪೂಜಿ ವಿದ್ಯಾ ಸಂಸ್ಥೆ ಹಾಗೂ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ.ವಿರೇಶ್ ಅಧ್ಯಕ್ಷತೆ ವಹಿಸಿದ್ದರು. ಶ್ರೀಶೈಲ ಆರಾಧ್ಯರವರ ಪತ್ನಿ ಉಮಾ, ಮಗಳಾದ ರೋಹಿಣಿ, ಅಳಿಯಂದಿರಾದ ಶೈಲೇಂದ್ರ ನಾಗರಾಜ್, ಎಸ್.ನಿಜಲಿಂಗಪ್ಪ ಮೆಮೋರಿಯಲ್ ಟ್ರಸ್ಟ್ ನ ಟ್ರಿಸ್ಟಿ ಎಸ್.ಷಣ್ಮುಖಪ್ಪ, ನಿವೃತ್ತ ಶಿಕ್ಷಕ ನಾಗರಾಜ್ , ಶಾರದ ಬ್ರಾಸ್‍ಬ್ಯಾಂಡ್ ಮಾಲಿಕ ಎಸ್.ವಿ.ಗುರುಮೂರ್ತಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!