ಹೆಸರು ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸಲು ಒತ್ತಾಯ

KannadaprabhaNewsNetwork |  
Published : Aug 29, 2024, 12:46 AM IST
ಪೊಟೋ-ಪಟ್ಟಣದ ಕರವೇ ಕಾರ್ಯಕರ್ತರು ಹೆಸರು ಬೆಂಬಲ ಅಡಿಯಲ್ಲಿ ಖರೀದಿ ಕೇಂದ್ರ ಆರಂಭಿಸುವಂತೆ ತಹಸೀಲ್ದಾರ್ ಅವರಿಗೆ ಮನವಿ ನೀಡಿದರು.  | Kannada Prabha

ಸಾರಾಂಶ

ಮಾರುಕಟ್ಟೆಯಲ್ಲಿ ₹2500 ರಿಂದ ₹7 ಸಾವಿರಗಳಿಗೆ ಮಾರಾಟವಾಗುತ್ತಿದೆ, ಬೆಂಬಲ ಬೆಲೆ ಅಡಿಯಲ್ಲಿ ಹೆಸರು ಕಾಳು ಖರೀದಿ ಕೇಂದ್ರ ಆರಂಭಿಸಿದಲ್ಲಿ ರೈತರಿಗೆ ಅಲ್ಪಮಟ್ಟಿನ ಲಾಭ

ಲಕ್ಷ್ಮೇಶ್ವರ: ತಾಲೂಕಿನ ಅಧಿಕ ರೈತರು ಹೆಸರು ಬೆಳೆ ಬೆಳೆದಿದ್ದಾರೆ, ಮಾರುಕಟ್ಟೆಯಲ್ಲಿ ಹೆಸರು ಕಾಳು ಕಡಿಮೆ ಬೆಲೆಗೆ ಮಾರಾಟವಾಗುತ್ತಿದ್ದು. ಇದರಿಂದ ರೈತರಿಗೆ ಅನ್ಯಾಯವಾಗುತ್ತಿದೆ, ಆದ್ದರಿಂದ ಶೀಘ್ರದಲ್ಲಿ ಹೆಸರು ಕಾಳುಗಳನ್ನು ಬೆಂಬಲ ಬೆಲೆ ಅಡಿಯಲ್ಲಿ ಖರೀದಿ ಮಾಡಿ ರೈತರ ಜೀವ ಉಳಿಸುವ ಕಾರ್ಯ ಮಾಡಬೇಕು ಎಂದು ಕರವೇ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬಸವರಾಜ ಹೊಗೆಸೊಪ್ಪಿನ ಗ್ರೇಡ್ರ-2 ತಹಸೀಲ್ದಾರ್ ಮಂಜುನಾಥ ಅಮಾಸಿಗೆ ಮನವಿ ಸಲ್ಲಿಸಿದರು. ಪಟ್ಟಣದ ತಹಸೀಲ್ದಾರ ಕಚೇರಿ ಎದುರು ಕರ್ನಾಟಕ ರಕ್ಷಣಾ ವೇದಿಕೆಯ ಲಕ್ಷ್ಮೇಶ್ವರ ತಾಲೂಕು ಹಾಗೂ ನಗರ ಘಟಕದ ವತಿಯಿಂದ ಬುಧವಾರ ಪ್ರತಿಭಟನೆ ನಡೆಸಿ ಮಾತನಾಡಿದರು.

ಹೆಸರು ಬೆಳೆದ ರೈತರು ಕಡಿಮೆ ಬೆಲೆಗೆ ತಾವು ಬೆಳೆದ ಹೆಸರನ್ನು ಮಾರಾಟ ಮಾಡುತ್ತಿದ್ದಾರೆ, ಇದರಿಂದ ರೈತರಿಗೆ ಅನ್ಯಾಯವಾಗುತ್ತಿದೆ. ಒಂದು ಎಕರೆ ಹೆಸರು ಬೆಳೆಯಲು ಸುಮಾರು ₹5-6 ಸಾವಿರ ಖರ್ಚು ಮಾಡುತ್ತಿದ್ದು, ಆದರೆ ಒಂದು ಎಕರೆ ಪ್ರದೇಶದಲ್ಲಿ ಒಂದು ಅಥವಾ ಒಂದುವರೆ ಕ್ವಿಂಟಲ್ ಹೆಸರು ಕಾಳು ಬೆಳೆಯಲಾಗುತ್ತಿದ್ದು. ಮಾರುಕಟ್ಟೆಯಲ್ಲಿ ₹2500 ರಿಂದ ₹7 ಸಾವಿರಗಳಿಗೆ ಮಾರಾಟವಾಗುತ್ತಿದೆ, ಬೆಂಬಲ ಬೆಲೆ ಅಡಿಯಲ್ಲಿ ಹೆಸರು ಕಾಳು ಖರೀದಿ ಕೇಂದ್ರ ಆರಂಭಿಸಿದಲ್ಲಿ ರೈತರಿಗೆ ಅಲ್ಪಮಟ್ಟಿನ ಲಾಭವಾಗುತ್ತದೆ. ಆದ್ದರಿಂದ ಶೀಘ್ರದಲ್ಲಿ ರಾಜ್ಯ ಸರ್ಕಾರ ಬೆಂಬಲ ಬೆಲೆ ಅಡಿ ಹೆಸರು ಖರೀದಿ ಕೇಂದ್ರ ಆರಂಭಿಸಿರೈತರಿಗೆ ಅನುಕೂಲ ಮಾಡಿಕೊಡುವಂತೆ ಮನವಿ ಮಾಡಿದರು.

ಈ ವೇಳೆ ತಹಸೀಲ್ದಾರ್‌ ಅವರು, ಜಿಲ್ಲಾಧಿಕಾರಿಗಳ ಗಮನಕ್ಕೆ ತರುವದಾಗಿ ಹೇಳಿದರು.

ಪ್ರತಿಭಟನೆಯಲ್ಲಿ ಸಿ.ಎಫ್. ಗಡ್ಡದೇವರಮಠ, ಲೋಕೇಶ ಸುತಾರ, ಪ್ರಕಾಶ ಕೊಂಚಿಗೇರಿಮಠ, ಪ್ರವೀಣ ಗೌರಿ, ಶಂಕರಗೌಡ ಪಾಟೀಲ, ಕುಮಾರ ನರೇಗಲ್ಲ, ಪ್ರವೀಣ ಗುಡಗೇರಿ, ರಮೇಶ ಸುತಾರ, ಚಂದ್ರು ನೀರಲಗಿ, ಯಶವಂತ ಶಿರಹಟ್ಟಿ, ಕಿರಣ ಬೇಂದ್ರೆ, ಪ್ರವೀಣ ಕಣವಿ, ಪ್ರಮೋದ ಉಮಚಗಿ, ಶಿವಲೀಲಾ ಪುರದ, ಸೀಮವ್ವ ಪೂಜಾರ, ರೇಣುಕಾ ಮಲ್ಲೂರ, ಲಕ್ಷ್ಮವ್ವ ಮಳ್ಳಳ್ಳಿ, ಪ್ರಭಾವತಿ ಶೆಟ್ಟರ್‌, ಮಾಯವ್ವ ಮಲ್ಲಿಗವಾಡ ಸೇರಿದಂತೆ ಅನೇಕರು ಇದ್ದರು.

PREV

Recommended Stories

15 ವರ್ಷ ಮೇಲ್ಪಟ್ಟ ಸರ್ಕಾರಿ ವಾಹನ ಗುಜರಿಗೆ: ಆದೇಶ
ಹಾಸಿಗೆ, ದಿಂಬಿಗಾಗಿ ಮತ್ತೆ ಕೋರ್ಟಲ್ಲಿ ಅಂಗಲಾಚಿದ ಕೊಲೆ ಆರೋಪಿ ದರ್ಶನ್‌