ಮೂರು ದಿನಗಳ ಕಾಲ ನಂದಿ ಬಸವೇಶ್ವರ ಜಾತ್ರಾ ಮಹೋತ್ಸವ

KannadaprabhaNewsNetwork | Published : May 9, 2025 12:30 AM

ತಾಲೂಕಿನ ಬಳೂರ್ಗಿ ಗ್ರಾಮದಲ್ಲಿ ಮೂರು ದಿನಗಳ ಕಾಲ ಸಡಗರ ಸಂಭ್ರಮದ ನಂದಿ ಬಸವೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ನಂದಿ ಬಸವೇಶ್ವರ ಪಲ್ಲಕ್ಕಿ ಉತ್ಸವ, ನಂದಿಕೋಲು ಮೆರವಣಿಗೆ ಜರುಗಿತು

ಅಫಜಲ್ಪುರ: ತಾಲೂಕಿನ ಬಳೂರ್ಗಿ ಗ್ರಾಮದಲ್ಲಿ ಮೂರು ದಿನಗಳ ಕಾಲ ಸಡಗರ ಸಂಭ್ರಮದ ನಂದಿ ಬಸವೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ನಂದಿ ಬಸವೇಶ್ವರ ಪಲ್ಲಕ್ಕಿ ಉತ್ಸವ, ನಂದಿಕೋಲು ಮೆರವಣಿಗೆ ಜರುಗಿತು.ನಂದಿ ಬಸವೇಶ್ವರರ ಕಳಸ ಮೆರವಣಿಗೆ, ಪಲ್ಲಕ್ಕಿ ಉತ್ಸವ, ನಂದಿಕೋಲು ಮೆರವಣಿಗೆ, ಹುಲಿ–ಆನೆಗಳ ಮೆರವಣಿಗೆ ಮತ್ತು ತೊಟ್ಟಿಲು ಕಾರ್ಯಕ್ರಮ ಜರಗಿತು. ಬೆಳ್ಳಿಗ್ಗೆ 5ರಿಂದ ವಿವಿಧ ಪೂಜಾ ಕಾರ್ಯಗಳು ಜರುಗಿದವು. ರಾತ್ರಿ 8ರಿಂದ ಕಳಸ ಮೆರವಣಿಗೆ ಮಾಡಲಾಯಿತು. ಬಳಿಕ ಪುರವಂತರ ಸೇವೆ ಮಂಗಳಾರತಿ, ಮದ್ದು ಸುಡುವ ಕಾರ್ಯಕ್ರಮ ಜರುಗಿತು.

ಸಂಜೆ ನಂದಿಬಸವೇಶ್ವರ ತೊಟ್ಟಿಲೋತ್ಸವ ಜರುಗಿತು. ಮಕ್ಕಳಾಗದ ಮಹಿಳೆಯರು ತೊಟ್ಟಿಲು ಕೆಳಗೆ ಕುಳಿತು ಮಕ್ಕಳಿಗಾಗಿ ಬೇಡಿಕೊಂಡರು.

ನಂದಿ ಬಸವೇಶ್ವರನಿಗೆ ಅಭಿಷೇಕ ಕಾರ್ಯಕ್ರಮ ಶಿವಾನಂದ ಸ್ಥಾವರಮಠ, ರಮೇಶ ಪಾಟೀಲ, ಧರ್ಮಣ್ಣ ಹೌದಿ, ವೀರೇಶ ಪಾಟೀಲ, ಅರುಣ ಕಂಬಾರ, ನಾಗು ಪುಲಾರಿ, ಭೀಮಣ್ಣ ಪುಲಾರಿ, ಶಿವರುದ್ರ ಬಾಲಕುಂದಿ ಅವರು ನಡೆಸಿಕೊಟ್ಟರು. ಪುರವಂತರಾದ ಮೌನೇಶ ಪೋದ್ಧಾರ, ಗುರಣ್ಣ ಪೋದ್ಧಾರ ಪಲ್ಲಕ್ಕಿಯ ನೇತೃತ್ವ ವಹಿಸಿದ್ದರು.

ಕುಸ್ತಿ ಪಂದ್ಯಗಳು ಜರುಗಿದವು. ಬೆಳ್ಳಿಗ್ಗೆ 8 ಗಂಟೆಯಿಂದ ಮಹಾರಾಷ್ಟ್ರದ ಗುಗವಾಡ ಗ್ರಾಮದ ಶಾಂತಾಬಾಯಿ ಕುಂದ್ರಾಳ, ಜೇವರ್ಗಿ ತಾಲೂಕಿನ ಶರಣಬಸಪ್ಪ ನದಿ ಸಿನ್ನೂರು ಸಂಗಡಿಗರಿಂದ ಗೀಗೀ ಪದಗಳ ಹಾಡುಗಾರಿಕೆ ನಡೆಯಿತು. ಮೂರೂ ದಿನ ಅನ್ನಪ್ರಸಾದ ಏರ್ಪಡಿಸಲಾಗಿತ್ತು. ಜಾತ್ರಾ ಕಾರ್ಯಕ್ರಮವನ್ನು ಶಿಕ್ಷಕರಾದ ಅಣ್ಣಾರಾಯ ಪಾಟೀಲ, ಶಿವಶರಣಪ್ಪ ಕಗ್ಗೋಡ್ ಹಾಗೂ ಸಂಗಡಿಗರು ನಡೆಸಿಕೊಂಡು ಬಂದರು.

ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ಚನ್ನಬಸಪ್ಪ ಚಾಕುಂಡಿ, ಫಲಾಸಿಂಗ ರಾಠೋಡ್, ಅರವಿಂದ್ ದೊಡ್ಡಮನಿ, ಶ್ರೀಶೈಲ್ ಪಾಟೀಲ ಸುಭಾಷ್ ಗುತ್ತೇದಾರ, ಶರಣಪ್ಪ ದೊಡ್ಡಮನಿ, ಜಟ್ಟಪ್ಪ ಹರಳೆಕರ, ಶ್ರೀಮಂತ ಪಾಟೀಲ, ಗುರುಮಾಂತಯ್ಯ ಮಠಪತಿ, ಅಣವೀರಯ್ಯ ಮಠಪತಿ, ಗ್ರಾಮ ಪಂಚಾಯಿತಿ ಸದಸ್ಯರಾದ ರಾಜು ಹಡಪದ, ಸಿದ್ದರಾಮಯ್ಯ ಮಠಪತಿ, ಶರಣು ಕಲಶೆಟ್ಟಿ, ಗೌರಿಶಂಕರ್ ಸೊನ್ನ, ಶಾಂತಲಿಂಗ ಕಗ್ಗೋಡ, ಬಸವ ಸೋಮ ಜಾಳ , ಕಲ್ಯಾಣಿ ಚಲಗೇರಿ, ಶ್ರೀಶೈಲ ಚಲಗೇರಿ, ಮನೋಹರ ರಾಠೋಡ್, ಯಲ್ಲಾಲಿಂಗ ಪೂಜಾರಿ, ಶರಣಯ್ಯ ಸುರೇಶ ಮಠಪತಿ, ಪಿಂಟು ಶ್ರೀಮಂತ ವಾಡಿ, ಶ್ರೀಶೈಲ್ ಸೋಮಜಾಳ ಮತ್ತಿತರರು ಇದ್ದರು.