ನಂಜನಗೂಡು ತಾಲೂಕು ಮಟ್ಟದ ಅಂತರ ಇಲಾಖಾ ಸಮನ್ವಯ ಸಮಿತಿ ಸಭೆ

KannadaprabhaNewsNetwork |  
Published : Jun 27, 2025, 12:48 AM IST
57 | Kannada Prabha

ಸಾರಾಂಶ

ಕುಷ್ಠರೋಗ ಪತ್ತೆ ಆಂದೋಲನ, ಅನೀಮಿಯಾ ಮುಕ್ತ ಪೌಷ್ಟಿಕ ಕರ್ನಾಟಕ ಹಾಗೂ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮ. ಅತಿಸಾರ ಬೇಧಿ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮ ಸ್ಟಾಪ್ ಢಯೇರಿಯಾ ಕಾರ್ಯಕ್ರಮ, ರಾಷ್ಟ್ರೀಯ ಲಸಿಕಾ ಕಾರ್ಯಕ್ರಮ ಹಾಗೂ ಶಾಲಾ ಆರೋಗ್ಯ ಕಾರ್ಯಕ್ರಮದ ಬಗ್ಗೆ ಮಾಹಿತಿ.

ಕನ್ನಡಪ್ರಭ ವಾರ್ತೆ ನಂಜನಗೂಡು

ತಹಸೀಲ್ದಾರ್ ಶಿವಕುಮಾರ್ ಕಾಸ್ನೂರು ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದ ಅಂತರ ಇಲಾಖಾ ಸಮನ್ವಯ ಸಮಿತಿ ಸಭೆ ನಡೆಯಿತು.

ಸಭೆಯಲ್ಲಿ ತಾಲೂಕು ಆರೋಗ್ಯಾಧಿಕಾರಿ ಈಶ್ವರ್ ಬಿ. ಕನಾಟ್ಕಿ ಅವರು ಸಭೆಗೆ ಎಲ್ಲರನ್ನೂ ಸ್ವಾಗತಿಸಿ ಸಭಾ ಮಾರ್ಗಸೂಚಿ ಕುರಿತು ತಿಳಿಸಿದರು. ಹಾಗೂ ಸಭೆಯಲ್ಲಿ ಚರ್ಚಿಸಬೇಕಾದ ವಿಷಯಗಳ ಬಗ್ಗೆ ಹಾಗೂ ಕೊಟ್ಟಾ 2003ರ ಕಾಯಿದೆ, ಸಾಂಕ್ರಾಮಿಕ ರೋಗಗಳ ಬಗ್ಗೆ ಹಾಗೂ ಕೀಲ್ಕಾರಿ ಸೇವೆಗಳ ಬಗ್ಗೆ ತಿಳಿಸಿದರು.

ತಾಲೂಕು ಆರೋಗ್ಯಾಧಿಕಾರಿ ಕಚೇರಿಯ ಪ್ರಭಾರ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಸಜ್ಜನ್ ರಾವ್ ಬೋಬಡೆ ಅವರು ಕುಷ್ಠರೋಗ ಪತ್ತೆ ಆಂದೋಲನ, ಅನೀಮಿಯಾ ಮುಕ್ತ ಪೌಷ್ಟಿಕ ಕರ್ನಾಟಕ ಹಾಗೂ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮದ ಬಗ್ಗೆ ತಿಳಿಸಿದರು.

ತಾಲೂಕು ಆರೋಗ್ಯಾಧಿಕಾರಿ ಕಚೇರಿಯ ಪ್ರಭಾರ ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಿತ ಅಧಿಕಾರಿ ಗೌರಮ್ಮ ಅವರು ಅತಿಸಾರ ಬೇಧಿ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮ ಸ್ಟಾಪ್ ಢಯೇರಿಯಾ ಕಾರ್ಯಕ್ರಮ, ರಾಷ್ಟ್ರೀಯ ಲಸಿಕಾ ಕಾರ್ಯಕ್ರಮ ಹಾಗೂ ಶಾಲಾ ಆರೋಗ್ಯ ಕಾರ್ಯಕ್ರಮದ ಬಗ್ಗೆ ತಿಳಿಸಿದರು.

ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ರಶ್ಮಿ ಅವರು, ರಾಷ್ಟ್ರೀಯ ಮಾನಸಿಕ ಕಾರ್ಯಕ್ರಮದ ಬಗ್ಗೆ ಹಾಗೂ ಟೆಲಿ ಮಾನಸ್ ಬಗ್ಗೆ ತಿಳಿಸಿದರು. ಡಾ. ಮಂಜುಶ್ರೀ ಅವರು, ತಂಬಾಕು ಸೇವನೆಯ ಹಾಗೂ ಮಾದಕ ವಸ್ತುಗಳ ವ್ಯಸನದ ಬಗ್ಗೆ ದುಷ್ಪರಿಣಾಮಗಳ ಬಗ್ಗೆ ತಿಳಿಸಿದರು.

ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿ, ತಾಲೂಕು ಆರೋಗ್ಯಾಧಿಕಾರಿ ಕಚೇರಿಯ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಸಿ. ಯದುಗಿರೀಶ್ ಹಾಗೂ ಸಿಬ್ಬಂದಿ ಇದ್ದರು.

ಅಸ್ಪೃಶ್ಯರ ಮೇಲೆ ಅಮಾನವೀಯ ಕ್ರೌರ್ಯ ಮುಂದುವರೆದಿದೆ: ಪುರುಷೋತ್ತಮ

ಕನ್ನಡಪ್ರಭ ವಾರ್ತೆ ಮೈಸೂರು

ರಾಜ್ಯ ಮತ್ತು ದೇಶದಲ್ಲಿ ಅಸ್ಪೃಶ್ಯತೆ ಆಚರಣೆ ಇನ್ನೂ ಜೀವಂತವಾಗಿರುವುದನ್ನು ನೋಡಿದರೆ ಇಂತಹ ಘೋರ ಆಚರಣೆಗೆ ಕಠಿಣ ಶಿಕ್ಷೆ ಹಾಗೂ ಜಾತಿ ವಿನಾಶಕ್ಕೆ ಕೈ ಹಾಕಿದೆ. ಇದು ಧರ್ಮದ ಹೆಸರಿನಲ್ಲಿ ಇಂತಹ ಕ್ರೌರ್ಯಗಳನ್ನು ಪ್ರೋತ್ಸಾಹಿಸುವುದೇ ಆಗಿದೆ ಎಂದು ಮಾಜಿ ಮೇಯರ್‌ ಪುರುಷೋತ್ತಮ್‌ ಹೇಳಿದ್ದಾರೆ.

ದೇಶ ಈಗ ಚಂದ್ರಯಾನ, ಮಂಗಳಯಾನ ಕಾಳಘಟ್ಟದಲ್ಲಿ ನಾವು ಆಧುನಿಕ ಭಾರತದೆಡೆಗೆ ಕಾಲಿಟ್ಟಿದ್ದೇವೆ. ನಾವು ವಿಶ್ವಗುರು ಆಗುವ ಎಲ್ಲಾ ಅರ್ಹತೆ ಹೊಂದಿದೆ. ನಾವು ವಿವಿಧತೆಯಲ್ಲಿ ಏಕತೆಯನ್ನು ಹೊಂದಿದ್ದೇವೆ ಎಂದರು.

ಆದರೆ ಚಾಮರಾಜನಗರ ಜಿಲ್ಲೆ ಹೊಮ್ಮ ಗ್ರಾಮದಲ್ಲಿ ಬಿಸಿಯೂಟದ ಯೋಜನೆಯಲ್ಲಿ ಮುಖ್ಯ ಅಡುಗೆಗೆ ದಲಿತ ಮಹಿಳೆ ನೇಮಿಸಿದ ಕಾರಣದಿಂದ ಈ ಊರಿನಲ್ಲಿ ಇಡೀ ಗ್ರಾಮವೇ ತಮ್ಮ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಿರುವುದು ನಾಚಿಕೆಗೇಡಿನ ಸಂಗತಿ. ಅಂತೆಯೇ ಏರ್‌ಲೈನ್ಸ್‌ ನಲ್ಲಿ ಮುಖ್ಯ ವಿಮಾನ ಚಾಲಕನಿಗೆ ನೀನು ಚಪ್ಪಲಿ ಹೊಲೆಯುವುದಕ್ಕೆ ಲಾಯಕ್‌ ಎಂದು ನಿಂದಿಸಿ ನೀನು ಕಾವಲುಗಾರನಾಗಲು ಯೋಗ್ಯನಲ್ಲ ಎಂದು ದಲಿತ ವಿದ್ಯವಂತ ದಲಿತವರ್ಗದಲ್ಲಿ ನಾಚಿಕೆಗೇಡಿನ ಕೃತ್ಯ ನಡದಿದೆ ಎಂದರು.

ಒಡಿಸ್ಸಾದಲ್ಲಿ ದನದ ಸಾಗಣಿಕೆ ನೆಪವೊಡ್ಡಿ ಅರ್ಧ ತಲೆ ಬೋಳಿಸಿ ಒಂದು ಕಿ.ಮೀ. ಗೂ ಅಧಿಕ ದೂರದವರೆಗೆ ತೆವಳುವಂತೆ ಮಾಡಿರುವುದು ಇನ್ನೂ ಹೇಯ ಕೃತ್ಯ ಎಂದಿದ್ದಾರೆ.

PREV

Recommended Stories

ಮಹರ್ಷಿ ವಾಲ್ಮೀಕಿ ಕವಿಕುಲದ ಸಾರ್ವಭೌಮ: ಸಾಲವಾಡಗಿ
ಅಪಘಾತದಲ್ಲಿ ಪತ್ರಕರ್ತ ಕಾನಗೊಂಡ ಸಾವು