ನಾಪೋಕ್ಲು: ರಸ್ತೆ ಗುಂಡಿ ಮುಚ್ಚಿ ಆಟೋ ಚಾಲಕರ ಶ್ರಮದಾನ

KannadaprabhaNewsNetwork |  
Published : Jul 26, 2024, 01:33 AM IST
ನಾಪೋಕ್ಲು ಆಟೋ ಚಾಲಕರು 25-ಎನ್ಪಿ ಕೆ-2                                             ಸುಗು ಕುಮಾರ್. ಆಟೋ 5-ಎನ್ಪಿ ಕೆ-1.                                          ಪ್ರತೀಪ ಬಿ ಎಂ.  ಗ್ರಾಮ ಪಂಚಾಯತಿ ಸದಸ್ಯ ನಾಪೋಕ್ಲು ಚಾಲಕ ನಾಪೋಕ್ಲು. ವಾಹನ ಸಂಚಾರಕ್ಕೆ ದುಸ್ತರವಾದ ಅಪಾಯಕಾರಿ  ರಸ್ತೆ ಗುಂಡಿಗಳನ್ನು ಮುಚ್ಚುವುದರ ಮೂಲಕ ಗುರುವಾರ ಶ್ರಮದಾನಮಾಡಿದರು. | Kannada Prabha

ಸಾರಾಂಶ

ಹಳೆ ತಾಲೂಕಿನ ಶ್ರೀ ಪೊನ್ನು ಮುತ್ತಪ್ಪ ದೇವಾಲಯದ ಬಳಿ ರಸ್ತೆ ಹೊಂಡಗಳಾಗಿದ್ದು ವಾಹನ ಚಾಲಕರು ಸಮಸ್ಯೆ ಎದುರಿಸುವಂತಾಗಿದೆ. ಇಲ್ಲಿ ರಸ್ತೆ ಸಂಪೂರ್ಣ ಹಾಳಾಗಿದ್ದು ನಾಪೋಕ್ಲಿನ ಆಟೋ ಚಾಲಕರು ವಾಹನ ಸಂಚಾರಕ್ಕೆ ದುಸ್ತರವಾದ ಅಪಾಯಕಾರಿ ರಸ್ತೆ ಗುಂಡಿಗಳನ್ನು ಗುರುವಾರ ಶ್ರಮದಾನದ ಮೂಲಕ ಮುಚ್ಚಿದರು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಇಲ್ಲಿನ ಆಟೋ ಚಾಲಕರು ವಾಹನ ಸಂಚಾರಕ್ಕೆ ದುಸ್ತರವಾದ ಅಪಾಯಕಾರಿ ರಸ್ತೆ ಗುಂಡಿಗಳನ್ನು ಗುರುವಾರ ಶ್ರಮದಾನದ ಮೂಲಕ ಮುಚ್ಚಿದರು.ಇಲ್ಲಿಗೆ ಸಮೀಪದ ಹಳೆ ತಾಲೂಕಿನ ಶ್ರೀ ಪೊನ್ನು ಮುತ್ತಪ್ಪ ದೇವಾಲಯದ

ಬಳಿ ರಸ್ತೆ ಹೊಂಡಗಳಾಗಿದ್ದು ವಾಹನ ಚಾಲಕರು ಸಮಸ್ಯೆ ಎದುರಿಸುವಂತಾಗಿದೆ. ಇಲ್ಲಿ ರಸ್ತೆ ಸಂಪೂರ್ಣ ಹಾಳಾಗಿದ್ದು ರಸ್ತೆಯಲ್ಲಿ ಹೊಂಡಗಳಾಗಿವೆ. ಮಳೆ ನೀರು ರಸ್ತೆಯಲ್ಲಿ ಸರಾಗವಾಗಿ ಹರಿಯುತ್ತಿರುವುದರಿಂದಗಿ ರಸ್ತೆ ಯಾವುದು, ಗುಂಡಿ ಯಾವುದು ಎಂದು ಗೋಚರಿಸದ ಪರಿಸ್ಥಿತಿ ನಿರ್ಮಾಣವಾಗಿತ್ತು.

ಶಾಲಾ ಬಸ್‌ಗಳ ಸಹಿತ ಇತರ ಇತರ ವಾಹನಗಳು ಒಂದೇ ಬದಿದಲ್ಲಿ ಚಲಿಸುವಂಥಾಗಿ ಸವಾರರು ಸಮಸ್ಯೆ ಎದುರಿಸುತ್ತಿದ್ದಾರೆ. ರಸ್ತೆ ಸರಿಪಡಿಸುವಂತೆ ಈ ಹಿಂದೆ ಮಾಧ್ಯಮಗಳಲ್ಲಿ ವರದಿಗಳೂ ಪ್ರಕಟವಾಗಿದ್ದವು.

ಆದರೆ ಯಾವುದೇ ಸ್ಪಂದನೆ ದೊರಕದ ಕಾರಣ ಗುರುವಾರ ಆಟೋ ಚಾಲಕರು ಸ್ವಯಂ ಪ್ರೇರಿತರಾಗಿ ಜಲ್ಲಿ, ಕಲ್ಲುಗಳನ್ನು ತಂದು ರಸ್ತೆಹೊಂಡ ಮುಚ್ಚಿದರು.

ಆಟೋ ಚಾಲಕ ಸಂಘದ ಮಾಜಿ ಅಧ್ಯಕ್ಷ ರಜಾಕ್, ಆಟೋ ಚಾಲಕರಾದ ಸತೀಶ್, ಚೇತನ್ , ಕಿರಣ್, ವಿನು, ಬಿಪಿನ್, ವಿಜು ಮತ್ತಿತರರಿದ್ದರು.

----------------------------------

ರಸ್ತೆ ಹೊಂಡಗಳಿಂದ ವಾಹನ ಸಂಚಾರಕ್ಕೆ ಬಹಳ ಸಮಸ್ಯೆ ಉಂಟಾಗುತ್ತಿದೆ. ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಆಟೋ ಚಾಲಕರು ಶ್ರಮದಾನ ಮಾಡಿದ್ದಾರೆ. ಈ ಹಿಂದೆ ಗ್ರಾಮೀಣ ಜಲಜೀವನ್ ಮಿಷನ್ ವತಿಯಿಂದ ರಸ್ತೆಗಡಲಾಗಿ ಪೈಪ್ ಲೈನ್ ಅಳವಡಿಸಲಾಗಿದ್ದು ಸಮರ್ಪಕವಾಗಿ ಗುಂಡಿ ಮುಚ್ಚಿಲ್ಲ. ರಸ್ತೆಯಲ್ಲಿ ಗುಂಡಿಗಳಾಗಿದ್ದು ಕೆಸರು ನೀರು

ನಿಂತು ಚಾಲಕರು ತೀವ್ರ ಸಮಸ್ಯೆ ಎದುರಿಸುವಂತಾಗಿದೆ. ಸೂಕ್ತ ಚರಂಡಿಗಳಿಲ್ಲದೆ ರಸ್ತೆ ಮುಖಾಂತರ ನೀರು ತೋಡಿನಂತೆ ಹರಿಯುತ್ತಿದ್ದು ಹೆಚ್ಚಿನ ಅಪಾಯ ಆಗುವ ಮುನ್ನ ಸಮಸ್ಯೆ ಪರಿಹರಿಸಲು ಸಂಬಂಧಿಸಿದ ಇಲಾಖೆ ಕೂಡಲೆ ಸೂಕ್ತ ಕ್ರಮಕ್ಕೆ ಮುಂದಾಗಬೇಕು .

-ಪ್ರತೀಪ ಬಿ ಎಂ. ಗ್ರಾಮ ಪಂಚಾಯತಿ ಸದಸ್ಯ ನಾಪೋಕ್ಲು.

--------------------------------------

ಪ್ರತಿ ವರ್ಷವೂ ರಸ್ತೆ ದುರವಸ್ಥೆ ಜನರನ್ನು ಕಾಡುತ್ತಿದೆ. ಎಲ್ಲರೂ ನೋಡಿಕೊಂಡು ಹೋಗ್ತಾರೆ

ಹೊರತು ರಸ್ತೆ ಸರಿಪಡಿಸುವ ಗೋಜಿಗೆ ಯಾರು ಮುಂದಾಗುತ್ತಿಲ್ಲ. ನಮ್ಮ ಜೀವನ ಸಾಗಿಸಲು ದುಸ್ತರವಾಗಿದ್ದು ನಾವು ಕೆಲವು ಆಟೋ ಚಾಲಕರು ಮಾತ್ರ ಸೇರಿ ಸ್ವಯಂ ಪ್ರೇರಿತರವಾಗಿ ಶ್ರಮದಾನದ ಮೂಲಕ ರಸ್ತೆ ಹೊಂಡಗಳನ್ನು ಮುಚ್ಚುವ ಕಾರ್ಯ ಮಾಡಬೇಕಾಯಿತು.

-ಸುಗು ಕುಮಾರ್, ಆಟೋ ಚಾಲಕ ನಾಪೋಕ್ಲು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ನಗರದಲ್ಲಿ 2026ಕ್ಕೆ ಅದ್ಧೂರಿ ಸ್ವಾಗತ
ನಗುವ ಜಗದ ಅಳುವ ಬಯಸಿದ ಚಿರಕವಿ ಸಣಕಲ್ಲ