ಕನ್ನಡಪ್ರಭ ವಾರ್ತೆ ನಾಪೋಕ್ಲು
ನಾಪೋಕ್ಲು ಭಗವತಿ ಯುವಕ ಸಂಘದ ಆಶ್ರಯದಲ್ಲಿ ನಾಪೋಕ್ಲು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಆಟದ ಮೈದಾನದಲ್ಲಿ ಆಯೋಜಿಸಲಾಗಿದ್ದ ಕ್ರೀಡಾಕೂಟದ ಸಭೆಯ ಅಧ್ಯಕ್ಷತೆಯನ್ನು ಭಗವತಿ ಯುವಕ ಸಂಘದ ಅಧ್ಯಕ್ಷ ಕುಲ್ಲೇಟಿರ ದೇವಯ್ಯ ವಹಿಸಿದ್ದರು. ನಾಪೋಕ್ಲು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಕುಲ್ಲೇಟಿರ ಹೇಮಾ ಅರುಣ್ ಮಾತನಾಡಿ, ಕೃಷಿ ಕೆಲಸಗಳನ್ನು ಮುಗಿಸಿ ಆಟೋಟಗಳಲ್ಲಿ ಸಂಭ್ರಮಿಸುವುದು ಹಿಂದಿನಿಂದಲೂ ಆಚರಣೆಯಲ್ಲಿರುವ ಪದ್ಧತಿ. ಇದು ಪರಸ್ಪರ ಪ್ರೀತಿ ವಿಶ್ವಾಸಗಳಿಗೆ ಕಾರಣವಾಗಿದ್ದು ಕ್ರೀಡಾಕೂಟ ಉಳಿಸಿ, ಬೆಳೆಸುವ ಜವಾಬ್ದಾರಿ ನಮ್ಮೆಲ್ಲರದಾಗಿದೆ ಎಂದರು.
ನಿವೃತ್ತ ಜೆಸಿಒ ಕಂಗಾಂಡ ರೋಹನ್ ಈರಪ್ಪ, ಗ್ರಾಮ ಪಂಚಾಯತಿ ಸದಸ್ಯ ಪ್ರತೀಪ ಬಿ.ಎಂ., ಕುಲ್ಲೇಟಿರ ಅರುಣ್ ಬೇಬ, ಕಂಗಂಡ ಶಶಿ ಅರುಣ್, ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಅರೆಯಡ ಅಶೋಕ್, ಕೆಲೇಟಿರ ಅಶೋಕ, ಸ್ಥಾಪಕ ಅಧ್ಯಕ್ಷ ಶಿವಚಳಿಯಂಡ ಸಹದೇವ, ಸಂಘದ ಕಾರ್ಯದರ್ಶಿ ಶಿವಚಳಿಯಂಡ ಕಿಶೋರ್ ಬೋಪಣ್ಣ ಪಾಲ್ಗೊಂಡು ಆಟೋಟಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಿದರು.ಸಂಘದ ನಿರ್ದೇಶಕರು, ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು. ಬೊಪ್ಪಂಡ ವಿರಣ್, ಕಂಗಂಡ ಜಾಲಿ ಪೂವಪ್ಪ ನಿರೂಪಿಸಿದರು.