ಕನ್ನಡಪ್ರಭ ವಾರ್ತೆ ನಾಪೋಕ್ಲು
ಇಲ್ಲಿನ ಕೊಡವ ಸಮಾಜದ ಪೊಮ್ಮಕ್ಕಡ ಪರಿಷತ್ ವತಿಯಿಂದ ಭಾನುವಾರ ಕೊಡವ ಸಮಾಜದ ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿ ಸಭಾಂಗಣದಲ್ಲಿ ಆಯೋಜಿಸಿದ್ದ ಪೊಮ್ಮಕ್ಕಳ ನಾಳ್ ಕಾರ್ಯಕ್ರಮದಲ್ಲಿ ಮುಖ್ಯ
ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.ನಿವೃತ್ತ ಬ್ಯಾಂಕ್ ಉದ್ಯೋಗಿ ಮೂವೇರ ಮೀನ ಕಾರ್ಯಪ್ಪ ಮಾತನಾಡಿ,
ನಿರ್ವಹಣೆಯನ್ನು ಸರಿಯಾಗಿ ಮಾಡಿದರೆ ಸಮಾಜದ ಸುಧಾರಣೆ ಮಾಡಿದಂತೆ. ಕುಟುಂಬ ನಿರ್ವಹಣೆ ಜೊತೆಗೆ
ಮಕ್ಕಳಿಗೆ ಉತ್ತಮ ಶಿಕ್ಷಣ ಸಂಸ್ಕಾರ, ಸಂಸ್ಕೃತಿಯನ್ನು ನೀಡುವ ಜವಾಬ್ದಾರಿ ಮಹಿಳೆಯರದ್ದುಎಂದರು.
ರಾಷ್ಟ್ರ ಪ್ರಶಸ್ತಿ ವಿಜೇತೆ ಕೊಟ್ಟು ಕತ್ತಿರ ಯಶೋಧ ಪ್ರಕಾಶ್ ಮಾತನಾಡಿ, ಸಮಾಜದಲ್ಲಿಮಹಿಳೆಯರು ವಿವಿಧ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಅಂತಹ ಸವಾಲುಗಳನ್ನು ಮೆಟ್ಟಿ ನಿಂತು ಮಹಿಳೆಯರು ಸಾಧನೆ ಮಾಡಬೇಕಾಗಿದೆ ಎಂದು ಹೇಳಿದರು.
ಸಂಸಾರವನ್ನು ಸಮತೋಲನದಲ್ಲಿ ಸಾಗಿಸುವ ಜವಾಬ್ದಾರಿ ಮಹಿಳೆಯರದ್ದಾಗಿದೆ. ಸಮಾಜದಲ್ಲಿ ಹತ್ತು ಹಲವು ಸವಾಲುಗಳನ್ನು ಎದುರಿಸುತ್ತಿರುವ ಮಹಿಳೆಯರು ಅವುಗಳನ್ನು ಧನಾತ್ಮಕ ಮನೋಭಾವದಿಂದ ಸ್ವೀಕರಿಸಿ ಮುನ್ನಡೆಯಬೇಕು. ಮಕ್ಕಳ ಪಾಲನೆ, ಪೋಷಣೆ, ಜೊತೆಗೆ ಉತ್ತಮ ಸಂಸ್ಕೃತಿಯನ್ನು ಕಲಿಸುವ ಜವಾಬ್ದಾರಿ ಮಹಿಳೆಯರದ್ದಾಗಿದೆ. ಉದ್ಯೋಗದಲ್ಲಿರುವ ಮಹಿಳೆಯರು ಔದ್ಯೋಗಿಕ ರಂಗದಲ್ಲಿ ಮಾತ್ರವಲ್ಲದೆಸಾಂಸಾರಿಕವಾಗಿ ಜವಾಬ್ದಾರಿಯನ್ನು ಹೊತ್ತು ಸಮಾಜದ ಬೆಳವಣಿಗೆಗೆ
ಕಾರಣರಾಗಬೇಕು ಎಂದರು.ನಿವೃತ್ತ ಲೆಫ್ಟಿನೆಂಟ್ ಕರ್ನಲ್ ತೊತ್ಯಂಡ ಸಬಿತಾ ಮಾತನಾಡಿ, ಮಹಿಳೆಯರು
ಮಕ್ಕಳಿಗೆ ಸಂಸ್ಕೃತಿಯನ್ನು ಕಲಿಸಿ, ಯುವ ಸಮೂಹವನ್ನು ಎಚ್ಚರಿಕೆಯಿಂದಬೆಳೆಸಬೇಕು. ಮಕ್ಕಳಿಗೆ ಉತ್ತಮ ಕೌಶಲ್ಯಗಳನ್ನು ಕಲಿಸಬೇಕು. ಹೆಣ್ಣು
ಮಕ್ಕಳು ಹೆಚ್ಚು ಓದುತ್ತಾರೆ. ಅವರ ಓದಿನ ಬಗ್ಗೆ ಗಮನ ಹರಿಸಬೇಕು.ಗಂಡು ಮಕ್ಕಳ ಶಿಕ್ಷಣದತ್ತಲೂ ಗಮನಹರಿಸಬೇಕಾಗಿದೆ. ಇಂದು ಉದ್ಯೋಗ ಅನಿವಾರ್ಯವಾಗಿದ್ದು,
ಉತ್ತಮ ಶಿಕ್ಷಣದಿಂದ ಮಾತ್ರ ಉದ್ಯೋಗಾವಕಾಶ ಪಡೆದುಕೊಳ್ಳಲುಸಾಧ್ಯ ಎಂದು ಹೇಳಿದರು.
ನಾಫೋಕ್ಲು ಕೊಡವ ಸಮಾಜ ಪೊಮ್ಮಕಡ ಪರಿಷತ್ ಅಧ್ಯಕ್ಷೆ ಬಾಳೆಯಡನಿಶಾ ಮೇದಪ್ಪಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಷ್ಟ್ರ ನಿರ್ಮಾಣದಲ್ಲಿ
ಮಹಿಳೆಯರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಸಮಾಜದಲ್ಲಿ ಮಹಿಳೆಯರ ಸ್ಥಾನಮಾನದ ಸುಧಾರಣೆಗೆಹೆಚ್ಚಿನ ಒತ್ತು ನೀಡಬೇಕಾಗಿದೆ ಎಂದರು.
ರಾಷ್ಟ್ರಪ್ರಶಸ್ತಿ ವಿಜೇತ ಕೊಟ್ಟು ಕತ್ತಿರಯಶೋಧ ಪ್ರಕಾಶ್, ನಿವೃತ್ತ ಲೆಫ್ಟಿನೆಂಟ್
ಕರ್ನಲ್ ತೊತ್ಯಂಡ ಸಬಿತರನ್ನು ಪೊಮ್ಮಕ್ಕಡಪರಿಷತ್ ವತಿಯಿಂದ ಸನ್ಮಾನಿಸಲಾಯಿತು.
ಅರೆಯಡ ಸರಸು ಪೆಮ್ಮಯ್ಯ ಪ್ರಾರ್ಥಿಸಿ, ಕೋಟೆರ ಝಾನ್ಸಿ ವೇದಪ್ಪ ಸ್ವಾಗತಿಸಿದರು. ನಾಯಕಂಡ ಜೂಬಿ ತಿಮ್ಮಯ್ಯ. ಪೆಮ್ಮoಡ ಕೌಶಿ ದಿನೇಶ್, ಕಾಂಡಂಡ ಪ್ರತಿಜಾ ಅಚ್ಚಪ್ಪ, ಮುಕ್ಕಾಟಿರ ರೇಷ್ಮಾ ಮೋಹನ್ ಅತಿಥಿಗಳ ಪರಿಚಯ ಮಾಡಿದರು. ಬಿದ್ದಾಟಂಡಮಮತಾ ಚಿಣ್ಣಪ್ಪ, ಕದ್ದನಿಯoಡ ವಂದನ ಚಿಣ್ಣಪ್ಪ ಕಾರ್ಯಕ್ರಮ ನಿರೂಪಿಸಿದರು. ಕಲಿಯಂಡ ಗೀತಾ ಗಿರೀಶ್
ವಂದಿಸಿದರು.ಈ ಸಂದರ್ಭ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಇದಕ್ಕೂ ಮೊದಲು ಅತಿಥಿಗಳನ್ನು ಪೊಮ್ಮಕ್ಕಡ ಪರಿಷತ್ ತಂಡದಿಂದ ನೃತ್ಯದ
ಮೂಲಕ ಸ್ವಾಗತಿಸಲಾಯಿತು.ಕಾರ್ಯಕ್ರಮದಲ್ಲಿ ಕೊಡವ ಸಮಾಜದ ಅಧ್ಯಕ್ಷ ಮುಂಡಂಡ ಸಿ. ನಾಣಯ್ಯ, ಉಪಧ್ಯಕ್ಷ ಕರವoಡ ಲವ ನಾಣಯ್ಯ, ಕಾರ್ಯದರ್ಶಿ ಕುಲ್ಲಟಿರ ಅಜಿತ್, ಸದಸ್ಯರು ಹಾಗೂ ಪೊಮ್ಮಕ್ಕಡ
ಪರಿಷತ್ ನಿರ್ದೇಶಕಿಯರು, ಜನಾಂಗ ಬಾಂಧವರು ಉಪಸ್ಥಿತರಿದ್ದರು.