ನಾರಾಯಣ ಗುರುಗಳ ಜೀವನ, ಸಾಧನೆ ಎಲ್ಲಾ ವರ್ಗಕ್ಕೂ ಮಾರ್ಗದರ್ಶನ: ಟಿ.ಡಿ.ರಾಜೇಗೌಡ

KannadaprabhaNewsNetwork | Published : Aug 27, 2024 1:30 AM

ಸಾರಾಂಶ

ಕೊಪ್ಪ, ಸಮಾಜದ ಎಲ್ಲಾ ವರ್ಗಕ್ಕೂ ನಾರಾಯಣ ಗುರುಗಳ ಜೀವನ ಮತ್ತು ಸಾಧನೆ ಮಾರ್ಗದರ್ಶನವಿದ್ದಂತೆ ಎಂದು ಶೃಂಗೇರಿ ಕ್ಷೇತ್ರ ಶಾಸಕ ಹಾಗೂ ಕೆ.ಆರ್.ಡಿ.ಇ.ಎಲ್. ಅಧ್ಯಕ್ಷ ಟಿ.ಡಿ.ರಾಜೇಗೌಡ ಹೇಳಿದರು.

ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘದಿಂದ ನಾರಾಯಣಗುರು ಜಯಂತಿ, ಪ್ರತಿಭಾ ಪುರಸ್ಕಾರ

ಕನ್ನಡಪ್ರಭ ವಾರ್ತೆ, ಕೊಪ್ಪ

ಸಮಾಜದ ಎಲ್ಲಾ ವರ್ಗಕ್ಕೂ ನಾರಾಯಣ ಗುರುಗಳ ಜೀವನ ಮತ್ತು ಸಾಧನೆ ಮಾರ್ಗದರ್ಶನವಿದ್ದಂತೆ ಎಂದು ಶೃಂಗೇರಿ ಕ್ಷೇತ್ರ ಶಾಸಕ ಹಾಗೂ ಕೆ.ಆರ್.ಡಿ.ಇ.ಎಲ್. ಅಧ್ಯಕ್ಷ ಟಿ.ಡಿ.ರಾಜೇಗೌಡ ಹೇಳಿದರು.ಪಟ್ಟಣದ ಹೊರವಲಯದ ಎನ್.ಕೆ. ರಸ್ತೆಯ ನಾರಾಯಣಗುರು ನಗರದ ಬ್ರಹ್ಮಶ್ರೀ ನಾರಾಯಣಗುರು ಸಮುದಾಯ ಭವನದಲ್ಲಿ ಕೊಪ್ಪ ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘದಿಂದ ನಡೆದ ೧೭೦ನೇ ನಾರಾಯಣಗುರು ಜಯಂತಿ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿ, ಹಿಂದೆ ಕೇರಳದಲ್ಲಿ ಭಯಾನಕವಾಗಿದ್ದ ಅಸ್ಪೃಶ್ಯತೆ, ಅಂಧಶ್ರದ್ಧೆಯ ವಿರುದ್ಧ ಮೌನ ಕ್ರಾಂತಿಯನ್ನು ಸಂಘರ್ಷ ರಹಿತವಾಗಿ ಸಂಘಟಿಸಿ ಶೋಷಿತರ ಜೀವನ ಸುಧಾರಣೆಗೆ ಹೊಸ ಸೂತ್ರ ಹೆಣೆದವರು ಬ್ರಹ್ಮಶ್ರೀ ನಾರಾಯಣಗುರು. ಅವರ ಜೀವಿತಾವಧಿಯನ್ನು ಪೂರ್ಣವಾಗಿ ಸಮಾಜೋದ್ಧಾರಕ್ಕೆ ಸದ್ಭಳಕೆ ಮಾಡಿದ ಅವರ ವಿಚಾರಗಳು ನವಮನ್ವಂತರಕ್ಕೂ ಮಾದರಿ ಎಂದರು.ಕೊಪ್ಪ ನಾರಾಯಣಗುರು ಸೇವಾ ಸಮಾಜದ ಗೌರವಾಧ್ಯಕ್ಷ ಎಚ್.ಎಂ. ಸತೀಶ್ ಮಾತನಾಡಿ ಬಹುವರ್ಷದ ಬೇಡಿಕೆ ಮತ್ತು ಒತ್ತಾಯಗಳಿಗೆ ಸ್ಪಂದಿಸಿದ ೨೦೨೨-೨೩ರ ಸಾಲಿನಲ್ಲಿ ನಾರಾಯಣಗುರುಗಳ ನಿಗಮ ರಚನೆಯಾಗಿದೆ. ಆದರೆ ನಿಗಮಕ್ಕೆ ಬೇಕಾದ ವ್ಯವಸ್ಥೆ ಆಗಿಲ್ಲ. ನಮ್ಮ ಸಮುದಾಯದ ನಿಗಮಕ್ಕೂ ಅನುದಾನ ಕಲ್ಪಿಸುವ ಮೂಲಕ ಶಿಕ್ಷಣ, ಕೃಷಿ ಮತ್ತು ಇತರೆ ಸಾಲ ಸೌಲಭ್ಯಗಳಿಗೆ ಅನುಕೂಲ ಮಾಡಿ ಕೊಡಬೇಕು ಎಂದರು.ಸಂಘದ ಸಂಸ್ಥಾಪಕ ಶರತ್ ಡಿ. ಕಲ್ಲೆ, ತಾಲೂಕು ಅಧ್ಯಕ್ಷ ಪ್ರಕಾಶ್ ಮಾತನಾಡಿದರು. ಕಾರ್ಯಕ್ರಮದಲ್ಲಿ ೨೦೨೨-೨೩-೨೦೨೩-೨೪ನೇ ಸಾಲಿನ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಬಿಲ್ಲವ ಸಮುದಾಯದ ಶೇ.೭೦ಕ್ಕಿಂತ ಮೇಲೆ ಪಡೆದ ವಿದ್ಯಾರ್ಥಿಗಳು ಹಾಗೂ ತಾಲೂಕಿನಲ್ಲಿ ಇತರೆ ಜನಾಂಗದಿಂದ ಅತಿ ಹೆಚ್ಚು ಅಂಕ ಪಡೆದವರು ಸೇರಿದಂತೆ ಒಟ್ಟು ೧೬೦ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಯಿತು. ಸಮುದಾಯದ ಸಾಧಕರಾದ ಶೃತಿ, ಶಿಕ್ಷಕಿ ಆರತಿ ಟಿ.ಎಮ್, ನಾಗೇಶ್ ಅಮೀನ್, ಸಂಜೀವ ಪೂಜಾರಿ ಮುಂತಾದವರನ್ನು ಸನ್ಮಾನಿಸಿ ಗೌರವಿಸಲಾಯಿತು.ಉಪಾಧ್ಯಕ್ಷ ಸಂದೇಶ್ ಪೂಜಾರಿ, ಕಾರ್ಯದರ್ಶಿ ಎಚ್.ಎಸ್.ಜಗದೀಶ್, ದೇವಸ್ಥಾನ ಸಮಿತಿ ಸಂದರ್ಶ, ಸಾಗರ್ ಇತರೆ ಉಪ ಸಮಿತಿಗಳ ಅಧ್ಯಕ್ಷರು, ಸಂಘದ ಸದಸ್ಯರು ಕಾರ್ಯಕ್ರಮದಲ್ಲಿದ್ದರು.

Share this article