ನರೇಗಾ ಬದುಕು ಕಟ್ಟಿಕೊಳ್ಳಲು ಸಹಕಾರಿ

KannadaprabhaNewsNetwork |  
Published : Mar 29, 2024, 12:46 AM IST
ಸಭೆಯಲ್ಲಿ ಶಿವಯೋಗಿ ರಿತ್ತಿ ಮಾತನಾಡಿದರು. | Kannada Prabha

ಸಾರಾಂಶ

ಏ.1 ರಿಂದ ತಾಲೂಕಿನ ಎಲ್ಲ ಗ್ರಾಪಂಗಳಲ್ಲಿ ನರೇಗಾ ಕೆಲಸ ಆರಂಭವಾಗಲಿದ್ದು, ಹಾಗೆಯೇ ಜಕ್ಕಲಿ ಗ್ರಾಪಂನಲ್ಲಿಯೂ ಕೆಲಸ ಆರಂಭವಾಗುತ್ತದೆ. ಹೀಗಾಗಿ ತಾವೆಲ್ಲರೂ ನರೇಗಾ ಕೆಲಸಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೂಲಿಕಾರರನ್ನು ಸೇರಿಸುವದನ್ನು ಮಾಡಬೇಕು

ರೋಣ: ನರೇಗಾ ಯೋಜನೆ ಬೇಸಿಗೆ ದಿನಗಳಲ್ಲಿ ಬಡವರಿಗೆ ಆಸರೆ ಆಗುವುದರ ಜತೆಗೆ ಬದುಕು ಕಟ್ಟಿಕೊಡುತ್ತದೆ. ಈ ಹಿನ್ನೆಲೆ ತಾವು ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸಿದ್ದರೆ ಬಡವರು ಕೂಲಿ ಕೆಲಸ ಮಾಡಿ ತಮ್ಮ ಕುಟುಂಬವನ್ನು ಸದೃಢಪಡಿಸಿಕೊಳ್ಳುತ್ತಾರೆ ಎಂದು ಸಹಾಯಕ ನಿರ್ದೇಶಕ ಶಿವಯೋಗಿ ರಿತ್ತಿ ಹೇಳಿದರು.

ತಾಲೂಕಿನ ಜಕ್ಕಲಿ ಗ್ರಾಪಂದಲ್ಲಿ ಗುರುವಾರ ನಡೆದ ಕಾಯಕ ಬಂಧುಗಳ ಸಭೆಯಲ್ಲಿ ಮಾತನಾಡಿದ ಅವರು, ಕಾಯಕ ಬಂಧುಗಳು ಕರ್ತವ್ಯ ಹಾಗೂ ಹಕ್ಕುಗಳನ್ನು ಪ್ರತಿಯೊಬ್ಬರು ಪಾಲನೆ ಮಾಡಬೇಕು ಎಂದರು.

ಪ್ರತಿ ಒಂದು ಕೂಲಿಕಾರರ ಗುಂಪಿನಲ್ಲಿ ನಿಮ್ಮನ್ನು ಕಾಯಕ ಬಂಧು ಅಂತಾನೇ ಗುರುತಿಸಲಾಗುವದು. ಕಾಯಕ ಬಂಧುಗಳು ಕೆಲಸದ ಬೇಡಿಕೆಯನ್ನು ನಮೂನೆ-6 ಗ್ರಾಪಂಗೆ ಸಲ್ಲಿಸಬೇಕು. 15ದಿನಗಳೊಳಗೆ ಕೆಲಸ ದೊರಕುವಂತೆ ಮಾಡಬೇಕು ಮತ್ತು ಕೆಲಸದ ಸ್ಥಳದಲ್ಲಿ ಮಾರ್ಕಿಂಗ್ ಮಾಡಿ ಕೂಲಿಕಾರರಿಗೆ ಮಾಹಿತಿ ನೀಡುವದು. ಕೆಲಸದ ಸ್ಥಳದಲ್ಲಿ ಕೂಲಿಕಾರರಿಗೆ ನೆರಳು, ಕುಡಿವ ನೀರು, ಪ್ರಥಮ ಚಿಕಿತ್ಸೆ ಮುಂತಾದ ಸೌಲಭ್ಯವಿರುವಂತೆ ನೋಡಿಕೊಳ್ಳಬೇಕು. ಕಾಯಕ ಬಂಧುಗಳು ಅರೆ ಕುಶಲ ಕಾರ್ಮಿಕರೆಂದು ನರೇಗಾ ತಂತ್ರಾಂಶದಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಕೂಲಿಕಾರರ ಜಾಬ್‌ ಕಾರ್ಡಗಳಲ್ಲಿ ಇಂದ್ರಿಕರಿಸಬೇಕೆಂದು ತಿಳಿಸಿದರು.

ಏ.1 ರಿಂದ ತಾಲೂಕಿನ ಎಲ್ಲ ಗ್ರಾಪಂಗಳಲ್ಲಿ ನರೇಗಾ ಕೆಲಸ ಆರಂಭವಾಗಲಿದ್ದು, ಹಾಗೆಯೇ ಜಕ್ಕಲಿ ಗ್ರಾಪಂನಲ್ಲಿಯೂ ಕೆಲಸ ಆರಂಭವಾಗುತ್ತದೆ. ಹೀಗಾಗಿ ತಾವೆಲ್ಲರೂ ನರೇಗಾ ಕೆಲಸಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೂಲಿಕಾರರನ್ನು ಸೇರಿಸುವದನ್ನು ಮಾಡಬೇಕು ಎಂದರು.

ನರೇಗಾ ಕೂಲಿಕಾರರಿಗೆ ಬುಧವಾರದಿಂದ ಕೂಲಿ ಪರಿಷ್ಕರಿಣೆ ಆಗಿದ್ದು, ದಿನವೊಂದಕ್ಕೆ ಕೂಲಿ ಮೊತ್ತವನ್ನು ₹349ಗೆ ಹೆಚ್ಚಿಸಲಾಗಿದೆ. ಆದ್ದರಿಂದ ಕೂಲಿಕಾರರು ನರೇಗಾ ಯೋಜನೆಯಿಂದ ಬರುವ ಈ ಹಣವನ್ನು ಮುಂಗಾರಿನ ಕೃಷಿ ಬಿತ್ತನೆ ಕಾರ್ಯಕ್ಕೆ ಸದುಪಯೋಗ ಪಡಿಸಿಕೊಳ್ಳಲು ನೆರವಾಗುವುದು ಎಂದು ಹೇಳಿದರು. ಈ ವೇಳೆ ಕಾಯಕ ಬಂಧುಗಳು, ನರೇಗಾ ಹಾಗೂ ಗ್ರಾಪಂ ಸಿಬ್ಬಂದಿ ವರ್ಗದವರು ಇದ್ದರು.

PREV

Recommended Stories

3ನೇ ಮಹಡಿಯಿಂದ ಆಯತಪ್ಪಿಬಿದ್ದು ಪಿಯು ವಿದ್ಯಾರ್ಥಿನಿ ಸಾವು
ಜೈಲೊಳಗೆ ಡ್ರಗ್ಸ್ ಸಾಗಿಸಲುಯತ್ನ: ವಾರ್ಡನ್ ಬಂಧನ