ವ್ಯಕ್ತಿ ನಿರ್ಮಾಣದಿಂದ ರಾಷ್ಟ್ರ ನಿರ್ಮಾಣ ಸಾಧ್ಯ: ನಂದೀಶ್

KannadaprabhaNewsNetwork |  
Published : Oct 10, 2025, 01:00 AM IST
ರಾಷ್ಟ್ರೀಯ ಸ್ವಯಂ ಸೇವಕ ಸಂಘ ಶತಾಬ್ಬಿಯ ವಿಜಯದಶಮಿ ಉತ್ಸವ | Kannada Prabha

ಸಾರಾಂಶ

ತರೀಕೆರೆ, ವ್ಯಕ್ತಿ ನಿರ್ಮಾಣದಿಂದ ರಾಷ್ಟ್ರ ನಿರ್ಮಾಣ ಸಾಧ್ಯವಾಗುತ್ತದೆ ಎಂಬುದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸಂಸ್ಥಾಪಕರು, ಪರಮ ಪೂಜನೀಯ ಸರಸಂಘಚಾಲಕ್ ಡಾ.ಹೆಡೆಗೆವಾರ್ ಅವರ ಆಶಯವಾಗಿತ್ತು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ದಕ್ಷಿಣ ಸಹ ಪ್ರಾಂತ ಪ್ರಚಾರಕ್ ನಂದೀಶ್ ಹೇಳಿದ್ದಾರೆ.

- ರಾಷ್ಟ್ರೀಯ ಸ್ವಯಂ ಸೇವಕ ಸಂಘ ಶತಾಬ್ದಿಯ ವಿಜಯದಶಮಿ ಉತ್ಸವ

ಕನ್ನಡಪ್ರಭ ವಾರ್ತೆ, ತರೀಕೆರೆ

ವ್ಯಕ್ತಿ ನಿರ್ಮಾಣದಿಂದ ರಾಷ್ಟ್ರ ನಿರ್ಮಾಣ ಸಾಧ್ಯವಾಗುತ್ತದೆ ಎಂಬುದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸಂಸ್ಥಾಪಕರು, ಪರಮ ಪೂಜನೀಯ ಸರಸಂಘಚಾಲಕ್ ಡಾ.ಹೆಡೆಗೆವಾರ್ ಅವರ ಆಶಯವಾಗಿತ್ತು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ದಕ್ಷಿಣ ಸಹ ಪ್ರಾಂತ ಪ್ರಚಾರಕ್ ನಂದೀಶ್ ಹೇಳಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘ ತರೀಕೆರೆ ನಗರ ಘಟಕದಿಂದ ಪಟ್ಟಣದ ಅನ್ನಪೂರ್ಣ ಭವನದಲ್ಲಿ ನಡೆದ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಶತಾಬ್ಧಿ, ವಿಜಯದಶಮಿ ಉತ್ಸವದಲ್ಲಿ ಮಾತನಾಡಿದರು. 1925ರಲ್ಲಿ ಅಂದರೆ ನೂರು ವರ್ಷಗಳ ಹಿಂದೆ ವಿಜಯ ದಶಮಿಯಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಡಾ.ಹೆಡೆಗೆ ವಾರ್ ಸ್ಥಾಪಿಸಿದರು. ವಿಜಯದಶಮಿ ವಿಜಯದ ಸಂಕೇತ. ನಿರಂತರವಾಗಿ 2000 ವರ್ಷಗಳ ಕಾಲ ನಮ್ಮ ದೇಶದ ಮೇಲೆ ವಿದೇಶಿಯರ ಆಕ್ರಮಣ ಆಯಿತು, ಅದಕ್ಕೆಲ್ಲಾ ನಮ್ಮ ಪೂರ್ವಿಕರು ಉತ್ತರ ನೀಡಿದರು. ನಮ್ಮ ಪರಂಪರೆ ಸಂಪದ್ಬರಿತವಾದುದು. ಡಾ.ಹೆಡೆಗೆವಾರ್ ಸ್ವಾತಂತ್ರ್ಯ ಹೋರಾಟಗಾರರು, ಹಿಂದೂ ಸಂಘಟನೆಯಾಗಬೇಕು, ಸಂಘಟನೆ ಮಾಡಲು ಕಾರ್ಯಕರ್ತರು ಅಗತ್ಯ, ಸ್ವಯಂಸೇವಕರು ಸರ್ವವನ್ನು ತ್ಯಾಗ ಮಾಡಬೇಕು, ಒಂದು ಧ್ಯೇಯ, ಒಂದು ಜೀವನ, ವಿಶ್ವಾಸ ಮತ್ತು ಪ್ರಾಮಾಣಿಕತೆಯಿಂದ ಇರುವವರೆ ನಿಜವಾದ ಕಾರ್ಯಕರ್ತರು ಎಂದು ಹೇಳಿದರು.ನಮ್ಮ ಕಾರ್ಯವೇ ನಮ್ಮ ಉತ್ತರವಾಗಿರಬೇಕು. ದೇಶಾದ್ಯಂತ 83 ಸಾವಿರ ಸಂಘದ ಶಾಖೆಗಳಿದ್ದು, 15 ಲಕ್ಷ ಸ್ವಯಂ ಸೇವಕರು ನಿತ್ಯ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಜಯದಶಮಿ ಕೇವಲ ಸಂಭ್ರಮ ಅಲ್ಲ ಅದೊಂದು ಆತ್ಮಾವಲೋಕನ ಸಂಕಲ್ಪಗಳು ಸಾಕಾರವಾಗಬೇಕು, ಎಲ್ಲ ಕ್ಷೇತ್ರದಲ್ಲಿ ಭಾರತೀಯ ಚಿಂತನೆ ತರಬೇಕು. ಕಷ್ಟದಲ್ಲಿರುವವರಿಗೆ ನೆರವು ನೀಡಿ, ಹಿಂದೂ ಸಮಾಜವನ್ನು ಸಂರಕ್ಷಣೆ ಮಾಡಬೇಕು. ಕಲಿಯುಗದಲ್ಲಿ ಸಂಘಟನೆಗೆ ಹೆಚ್ಚು ಶಕ್ತಿ ಇರುತ್ತದೆ. ಸಂಘಟನೆ ನಿರಂತರ ಕಾರ್ಯವಾಗಿದೆ ಎಂದು ಹೇಳಿದರು.ಕನ್ನಡಶ್ರೀ ಬಿ.ಎಸ್.ಭಗವಾನ್ ವೈಯಕ್ತಿಕ ಗೀತೆ ಮತ್ತು ಅಣ್ಣಪ್ಪ ಅಮೃತವಚನ ಗೀತೆ ಹಾಡಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘ ತರೀಕೆರೆ ನಗರ ಶಾಖೆ ತಾಲೂಕು ಸಂಘ ಸಂಚಾಲಕ್ ಓಂಕಾರಪ್ಪ, ಮಾಜಿ ಶಾಸಕ ಡಿ.ಎಸ್.ಸುರೇಶ್, ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಟಿ.ಎಲ್.ರಮೇಶ್, ಮಂಜುನಾಥ್, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ಯಯಂಸೇವಕರು, ಮಾತೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

6ಕೆಟಿಆರ್.ಕೆ.4ಃ

ತರೀಕೆರೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ತರೀಕೆರೆ ನಗರದಿಂದ ನಡೆದ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಶತಾಬ್ಧಿಯ ವಿಜಯದಶಮಿ ಉತ್ಸವದಲ್ಲಿ ದಕ್ಷಿಣ ಸಹ ಪ್ರಾಂತ ಪ್ರಚಾರಕ್ ನಂದೀಶ್ ಮಾತನಾಡಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘ ತರೀಕೆರೆ ನಗರ ಶಾಖೆ ತಾಲೂಕು ಸಂಘ ಸಂಚಾಲಕ್ ಓಂಕಾರಪ್ಪ ಇದ್ದರು.

PREV

Recommended Stories

ಸಂಪುಟ ಪುನರ್‌ ರಚನೆ ಸುಳಿವು : ದಲಿತ ಸಚಿವರ ಸಭೆ!
ಶೂದ್ರ ಶ್ರೀನಿವಾಸ್‌ ಸೇರಿ ಐವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ