ಡಿಜೆ ಸೌಂಡ್‌ ಅಬ್ಬರ ತಣ್ಣಗಾಗಿಸಿದ ರಾಷ್ಟ್ರಗೀತೆ!

KannadaprabhaNewsNetwork |  
Published : Oct 22, 2026, 01:30 AM IST
ಪೋಟೋ: 21ಎಸ್‌ಎಂಜಿಕೆಪಿ01ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ 'ಜಗದ್ಗುರು ಶ್ರೀ ಮಧ್ವಾಚಾರ್ಯ ಜಯಂತಿ' ಕಾರ್ಯಕ್ರಮದಲ್ಲಿ ಶ್ರೀ ಮಧ್ವಾಚಾರ್ಯ ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪನಮನ ಸಲ್ಲಿಸಿದರು.  | Kannada Prabha

ಸಾರಾಂಶ

ಜಿಲ್ಲಾ ಕೇಂದ್ರದ ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಶ್ರೀ ದುರ್ಗಾ ಮಾತೆಯ ದಸರಾ ಶೋಭಾಯಾತ್ರೆ ಸಾಗುತ್ತಿದ್ದ ವೇಳೆ ಕೆಲ ಆಯ್ದ ಸ್ಥಳಗಳಲ್ಲಿ ಪೊಲೀಸ್ ಇಲಾಖೆ ವ್ಯಾಪಕ ಬಂದೋಬಸ್ತ್ ಕಲ್ಪಿಸಿತ್ತು. ಹಾಸಬಾವಿ ವೃತ್ತದ ಬಳಿ ಇರುವ ಮಸೀದಿ ಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತು. ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಇಲಾಖೆ ಎಲ್ಲ ಅಗತ್ಯ ಮುನ್ನೆಚ್ಚರಿಕೆ ವಹಿಸಿತ್ತು.

- ಹಾಸಬಾವಿ ವೃತ್ತದಲ್ಲಿ ಬನಾಯೇಂಗೆ ಮಂದಿರ್ ಹಾಡು ಹಾಕಲು ಪೊಲೀಸರ ಆಕ್ಷೇಪ

- - -

ಕನ್ನಡಪ್ರಭ ವಾರ್ತೆ ದಾವಣಗರೆ

ಜಿಲ್ಲಾ ಕೇಂದ್ರದ ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಶ್ರೀ ದುರ್ಗಾ ಮಾತೆಯ ದಸರಾ ಶೋಭಾಯಾತ್ರೆ ಸಾಗುತ್ತಿದ್ದ ವೇಳೆ ಕೆಲ ಆಯ್ದ ಸ್ಥಳಗಳಲ್ಲಿ ಪೊಲೀಸ್ ಇಲಾಖೆ ವ್ಯಾಪಕ ಬಂದೋಬಸ್ತ್ ಕಲ್ಪಿಸಿತ್ತು. ಹಾಸಬಾವಿ ವೃತ್ತದ ಬಳಿ ಇರುವ ಮಸೀದಿ ಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತು. ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಇಲಾಖೆ ಎಲ್ಲ ಅಗತ್ಯ ಮುನ್ನೆಚ್ಚರಿಕೆ ವಹಿಸಿತ್ತು.

ದಸರಾ ಶೋಭಾಯಾತ್ರೆಗೆ ಡಿಜೆ ಸೌಂಡ್ ಸಿಸ್ಟಂಗೆ ಅನುಮತಿ ನೀಡಿದ್ದರೆ, ಅದೇ ಡಿಜೆ ಸೌಂಡ್‌ ಸದ್ದಿಗೆ ಸ್ವತಃ ಮೆರವಣಿಗೆಯಲ್ಲಿದ್ದವರೇ ರೋಸಿ ಹೋಗಿದ್ದರು. ಇನ್ನು ಮೆರವಣಿಗೆ ಸಾಗುತ್ತಿದ್ದ ಹಾದಿಯುದ್ದಕ್ಕೂ ಜನರು ಕಿವಿಗಳನ್ನು ಮುಚ್ಚಿಕೊಂಡಿದ್ದರೆ, ಮಕ್ಕಳು, ವೃದ್ಧರು, ಗರ್ಭಿಣಿ, ಬಾಣಂತಿಯರು ಡಿಜೆ ಸೌಂಡ್ ಸಿಸ್ಟಂ ಸದ್ದು ಕಡಿಮೆ ಆಗುವವರೆಗೂ ಇನ್ನಿಲ್ಲದ ಯಾತನೆ ಅನುಭವಿಸಬೇಕಾಯಿತು. ಗಂಟೆಗಟ್ಟಲೇ ಮೆರವಣಿಗೆಯಲ್ಲಿ ಭದ್ರತೆ ಕಲ್ಪಿಸಿದ್ದ ಪೊಲೀಸ್ ಅಧಿಕಾರಿ, ಸಿಬ್ಬಂದಿಯಂತೂ ಕಿವಿಗಳನ್ನು ಮುಚ್ಚಿಕೊಂಡು ಕಾರ್ಯನಿರ್ವಹಿಸಿದರು.

ಶೋಭಾಯಾತ್ರೆ ವೇಳೆ ಬನಾಯೇಂಗೆ ಮಂದಿರ್ ಹಾಡಲು ಹಾಕಿದಾಗ ಪೊಲೀಸರು ಆ ಹಾಡನ್ನು ಹಾಕದಂತೆ ತಡೆಯೊಡ್ಡಿದರು. ಆದರೆ, ಹಿಂದು ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಬನಾಯೇಂಗೆ ಮಂದಿರ್‌ ಹಾಡನ್ನು ಹಾಕೇ ಹಾಕುತ್ತೇವೆಂದು ಪಟ್ಟು ಹಿಡಿದಿದ್ದರಿಂದ ಸುಮಾರು ಹೊತ್ತು ಬಿಗುವಿನ ಸ್ಥಿತಿ ನಿರ್ಮಾಣವಾಗಿತ್ತು. ಕೆಲ ಹೊತ್ತು ಡಿಜೆ ಸೌಂಡ್ಸ್‌ ಆಫ್‌ ಮಾಡಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು.

ಬನಾಯೇಂಗೇ ಮಂದಿರ್ ಹಾಡಿನ ವಿಚಾರದಲ್ಲಿ ಪೊಲೀಸ್ ಅಧಿಕಾರಿ, ಸಿಬ್ಬಂದಿ ಹಾಗೂ ಹಿಂದೂ ಕಾರ್ಯಕರ್ತರ ಮಧ್ಯೆ ವಾಗ್ವಾದ ನಡೆದು, ಎಲ್ಲವೂ ತಣ್ಣಗಾಯಿತು ಎನ್ನುವಷ್ಟರಲ್ಲಿಯೇ ಶೋಭಾಯಾತ್ರೆ ಅಲ್ಪಸಂಖ್ಯಾತರು ಹೆಚ್ಚಾಗಿ ವಾಸಿಸುತ್ತಿರುವ ಪ್ರದೇಶಕ್ಕೆ ಬರುತ್ತಿದ್ದಂತೆ ಮತ್ತೆ ಡಿಜೆ ಸೌಂಡ್‌ ಸದ್ದು ಹೆಚ್ಚಾಯಿತು. ಆಗ ಬುದ್ಧಿವಂತಿಕೆ ಪ್ರದರ್ಶಿಸಿದ ಪೊಲೀಸರು ಡಿಜೆಯಲ್ಲಿ ಏಕಾಏಕಿ ರಾಷ್ಟ್ರಗೀತೆ ಜನಗಣಮನ ಹಾಕಿಸಿದರು. ಇಡೀ ಮೆರವಣಿಗೆಯಲ್ಲಿದ್ದ ಅಬ್ಬರ, ಗದ್ದಲ ಕ್ಷಣ ಮಾತ್ರದಲ್ಲಿ ಮೌನಕ್ಕೆ ಶರಣಾಯಿತು. ಹಾಸಬಾವಿ ವೃತ್ತದಲ್ಲಿ ರಾಷ್ಟ್ರಗೀತೆ ಹಾಕಿಸಿದ ಪೊಲೀಸರು ಗಲಾಟೆ, ಗದ್ದಲ ತಡೆದರಲ್ಲದೇ, ಎಲ್ಲರೂ ಎದ್ದು ನಿಂತು ರಾಷ್ಟ್ರಗೀತೆ ಹಾಡುವಂತೆ ಹಾಗೂ ಕೇಳುವಂತೆ ಮಾಡಿದರು. ಅನಂತರ ವಾತಾವರಣ ತಿಳಿಗೊಂಡು, ರಾಷ್ಟ್ರಗೀತೆ ಮುಗಿಯುತ್ತಿದ್ದಂತೆಯೇ ಶೋಭಾಯಾತ್ರೆ ಮುಂದೆ ಸಾಗಿತು.

- - -

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಟುಂಬ ಸುಸೂತ್ರವಿರಲು ಸದಸ್ಯರಲ್ಲಿ ಬಾಂಧವ್ಯ ಮುಖ್ಯ
ಬಾಲಕೃಷ್ಣ ಸಚಿವರಾದ ಬಳಿಕ ಕ್ಷೇತ್ರಕ್ಕೆ ಹೆಚ್ಚು ಅನುದಾನ