ಕನ್ನಡಪ್ರಭ ವಾರ್ತೆ ನಾಲತವಾಡ
2021 ಫೆ.18 ರಂದು ಜನಿಸಿರುವು ಭಾಗ್ಯಶ್ರೀ, ಅನೇಕ ವಿಷಯಗಳಲ್ಲಿ ಪ್ರಾವೀಣ್ಯತೆ ಸಾಧಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಭಾರತದ ಸಂವಿಧಾನದ ಪ್ರಸ್ತಾವನೆಯನ್ನು ಶುದ್ಧವಾಗಿ ಪಠಣ ಮಾಡುವುದು, ಇಂಗ್ಲಿಷನಲ್ಲಿ ಸ್ವಾತಂತ್ರ್ಯ ದಿನಾಚರಣೆ ಭಾಷಣ, 30 ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು, ವಚನಗಳು, ಗಾದೆಮಾತುಗಳು, ಕನ್ನಡ ಮಾಸಗಳ ಹೆಸರುಗಳು, ಹೂವಿನ ಹೆಸರುಗಳು, ವಾರದ ದಿನಗಳು, ತಿಂಗಳುಗಳು, ರಾಷ್ಟ್ರಗೀತೆ, ಕರ್ನಾಟಕದ 31 ಜಿಲ್ಲೆಗಳ ಹೆಸರುಗಳು, ಶ್ಲೋಕಗಳು, ಕನ್ನಡ ಪದ್ಯಗಳು (ರೈಮ್ಸ್), ಜ್ಞಾನಪೀಠ ಪ್ರಶಸ್ತಿ ವಿಜೇತರ ಹೆಸರುಗಳು, ಅಕ್ಷರಮಾಲೆಯ ಓದು- ಬರವಣಿಗೆ ಹಾಗೂ 1ರಿಂದ 100ರವರೆಗೆ ಸಂಖ್ಯೆಗಳ ಪಠಣ ಸೇರಿದಂತೆ ಅನೇಕ ವಿಷಯಗಳಲ್ಲಿ ಬಾಲಕಿ ಅಪಾರ ಸಾಮರ್ಥ್ಯ ಪ್ರದರ್ಶಿಸಿದ್ದಾರೆ.