ಸಾಮಾಜಿಕ ಬದಲಾವಣೆ ತರಲು ಸ್ಕೌಟ್ಸ್, ಗೈಡ್ಸ್ ನಿಂದ ಮಾತ್ರ ಸಾಧ್ಯ: ಪಿ.ಜಿ,.ಆರ್. ಸಿಂಧ್ಯ

KannadaprabhaNewsNetwork |  
Published : Jan 31, 2026, 02:45 AM IST
ಸಮಾಜದಲ್ಲಿ ಬದಲಾವಣೆ ತರಲು ಸ್ಕೌಟ್ಸ್ ಮತ್ತು ಗೈಡ್ಸ್ ನಿಂದ ಮಾತ್ರ ಸಾಧ್ಯ - ಶ್ರೀ ಪಿ ಜಿ ಆರ್ ಸಿಂಧ್ಯ | Kannada Prabha

ಸಾರಾಂಶ

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರ ಸಂಸ್ಥೆ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಸಂಸ್ಥೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆ, ಸ್ಥಳೀಯ ಸಂಸ್ಥೆ ಮೂಡುಬಿದಿರೆ ಹಾಗೂ ಆಳ್ವಾಸ್ ಶಿಕ್ಷಣ ಸಂಸ್ಥೆ ಸಹಭಾಗಿತ್ವದಲ್ಲಿ ಜ. 22ರಿಂದ 26ವರೆಗೆ ಕನ್ನಡ ಭವನದಲ್ಲಿ ನಡೆದ ರಾಷ್ಟ್ರಮಟ್ಟದ ರಾಷ್ಟ್ರೀಯ ಭಾವೈಕ್ಯತಾ ಶಿಬಿರ-2026 ರ ಸಮಾರೋಪ ಸಮಾರಂಭ

ಮೂಡುಬಿದಿರೆ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರ ಸಂಸ್ಥೆ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಸಂಸ್ಥೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆ, ಸ್ಥಳೀಯ ಸಂಸ್ಥೆ ಮೂಡುಬಿದಿರೆ ಹಾಗೂ ಆಳ್ವಾಸ್ ಶಿಕ್ಷಣ ಸಂಸ್ಥೆ ಸಹಭಾಗಿತ್ವದಲ್ಲಿ ಜ. 22ರಿಂದ 26ವರೆಗೆ ಕನ್ನಡ ಭವನದಲ್ಲಿ ನಡೆದ ರಾಷ್ಟ್ರಮಟ್ಟದ ರಾಷ್ಟ್ರೀಯ ಭಾವೈಕ್ಯತಾ ಶಿಬಿರ-2026 ರ ಸಮಾರೋಪ ಸಮಾರಂಭ ಸೋಮವಾರ ನಡೆಯಿತು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯದ ಮುಖ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯ ಕಾರ್‍ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸೇವೆ ಎಂಬುದು ಫೋಟೋಗಳಿಗೆ ಸೀಮಿತವಾಗದೆ ಇನ್ನೊಬ್ಬರಿಗೆ ನೆರವಾಗಬೇಕು. ಬರಿ ಘೋಷ ವಾಕ್ಯದಿಂದ ಭಾರತ ವಿಕಸಿತಗೊಳ್ಳಲು ಸಾಧ್ಯವಿಲ್ಲ. ಸಮಾಜದಲ್ಲಿ ಬದಲಾವಣೆ ತರಲು ಸ್ಕೌಟ್ಸ್ ಮತ್ತು ಗೈಡ್ಸ್ ನಿಂದ ಮಾತ್ರ ಸಾಧ್ಯ ಎಂದು ಹೇಳಿದರು.

ಭಾರತ್ ಸ್ಕೌಟ್ ಮತ್ತು ಗೈಡ್ ರಾಷ್ಟ್ರೀಯ ಸಂಸ್ಥೆಯ ಮತ್ತು ಶಿಬಿರದ ನಾಯಕರಾಗಿರುವ ಬಬ್ಲು ಗೋಸ್ವಾಮಿ, ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆ ಕಾರ್‍ಯದರ್ಶಿ ಪ್ರತಿಮ್ ಕುಮಾರ್ ಕೆ.ಎಸ್., ದ.ಕ. ಜಿಲ್ಲಾ ಸಂಸ್ಥೆಯ ಕೋಶಾಧಿಕಾರಿ ನವೀನ್ ಚಂದ್ರ ಅಂಬೂರಿ, ಇಪಿಆರ್ ಐ ಸಂಸ್ಥೆಯ ಸಂಯೋಜಕ ಚೇತನ್ ಕುಮಾರ್, ಮಹೇಶ್, ಶಿಬಿರ ಸಹಾಯಕರಾದ ಬೆಂಗಳೂರು ಉತ್ತರದ ಜನಾರ್ದನ ಚಕ್ರವರ್ತಿ, ರಾಷ್ಟ್ರೀಯ ತರಬೇತುದಾರರಾದ ನಾರಾಯಣನ್, ಹಾಸನ ಜಿಲ್ಲಾ ಸಹಾಯಕ ಆಯುಕ್ತ ಡಾ. ನಾರಾಯಣ ಜಿ.ಡಿ., ದ.ಕ. ಜಿಲ್ಲೆಯ ದೀಪಿಕಾ, ಅಪೇಕ್ಷಾ ಭಂಡಾರಿ, ವಿಶ್ವತ್, ರಾಜ್ಯ ಸಹಾಯಕ ಸಂಘಟನಾ ಆಯುಕ್ತ ಭರತ್ ರಾಜ್ ಕೆ., ದಾವಣಗೆರೆಯ ನವೀನ್, ಚಿಕ್ಕಮಗಳೂರಿನ ಜಿ. ರಕ್ಷಿತ್ , ಶ್ರೀಕಾಂತ್ ಶರ್ಮ ರಾಜಸ್ಥಾನ, ಎ.ಎಸ್. ಭಾಟಿ ಹರಿಯಾಣ, ಮೂಡುಬಿದಿರೆ ಸ್ಥಳೀಯ ಸಂಸ್ಥೆಯ ಕಾರ್‍ಯದರ್ಶಿ ಸಂಧ್ಯಾ ಉಪಸ್ಥಿತರಿದ್ದರು.ರಾಷ್ಟ್ರದ 9 ರಾಜ್ಯಗಳಾದ ಕರ್ನಾಟಕದಿಂದ 237, ಈಸ್ಟನ್ ರೈಲ್ವೆಯಿಂದ 18, ಹರಿಯಾಣ 25, KVS 10, NVS 10, ಮಧ್ಯಪ್ರದೇಶ 16, ತಮಿಳುನಾಡು 10, ನಾರ್ತ್, ಸೆಂಟ್ರಲ್ ರೈಲ್ವೆ 13, ರಾಜಸ್ಥಾನ 06 ಒಟ್ಟು 345 ವಿದ್ಯಾರ್ಥಿಗಳು,15 ಶಿಬಿರ ಸಹಾಯಕರು, 12 ರೋವರ್ಸ್ ಸ್ವಯಂ ಸೇವಕರು 372 ಮಂದಿ ಭಾಗವಹಿಸಿದ್ದಾರೆ. ವಿವಿಧ ಸ್ವರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಿ ಗೌರವಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗಣರಾಜ್ಯೋತ್ಸವ, ಮಕ್ಕಳ ಪ್ರತಿಭಾ ಪ್ರದರ್ಶನ ಸಮಾರಂಭ
ದೊಡ್ಡಣ್ಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರಕ್ಕೆ ಎಂಟೆಕ್ ಬಾಬಾ ಭೇಟಿ