ರಾಷ್ಟ್ರೀಯ ಸ್ಪರ್ಧೆ, ಮುಂಡರಗಿ ಕ್ರೀಡಾಪಟುಗಳಿಗೆ ಬಹುಮಾನ

KannadaprabhaNewsNetwork |  
Published : Mar 22, 2025, 02:03 AM IST
ರಾಜಸ್ಥಾನದ ಜೈಪುರದಲ್ಲಿ ನಡೆದ ಸ್ಕ್ವಾಯ್ ನ್ಯಾಷನಲ್ ಸ್ಪರ್ಧೆಯಲ್ಲಿ ಮುಂಡರಗಿಯ ಮಂಜು ಡೈಮಂಡ್ ಮಿಕ್ಸ್ ಮಾರ್ಷಿಯಲ್ ಆರ್ಟ್ಸ್ ಅಕಾಡೆಮಿಯ 8 ಕ್ರೀಡಾಪಟುಗಳು ಪಾಲ್ಗೊಂಡು ಬಹುಮಾನ ಪಡೆದುಕೊಂಡಿದ್ದಾರೆ. | Kannada Prabha

ಸಾರಾಂಶ

ಸ್ಕ್ವಾಯ್ ಗೇಮ್ 25ನೇ ಸೀನಿಯರ್ ನ್ಯಾಷನಲ್ ಚಾಂಪಿಯನ್‌ಶಿಪ್ 2024-25 ಸ್ಪರ್ಧೆಯು ಮಾರ್ಚ್ 17ರಿಂದ ಮಾ.20ರ ವರೆಗೆ ರಾಜಸ್ಥಾನದ ಜೈಪುರ ನಗರದ ಆರ್ಯ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸ್ಕ್ವಾಯ್ ನ್ಯಾಷನಲ್ ಸ್ಪರ್ಧೆ ಜರುಗಿತು.

ಮುಂಡರಗಿ:ಸ್ಕ್ವಾಯ್ ಗೇಮ್ 25ನೇ ಸೀನಿಯರ್ ನ್ಯಾಷನಲ್ ಚಾಂಪಿಯನ್‌ಶಿಪ್ 2024-25 ಸ್ಪರ್ಧೆಯು ಮಾರ್ಚ್ 17ರಿಂದ ಮಾ.20ರ ವರೆಗೆ ರಾಜಸ್ಥಾನದ ಜೈಪುರ ನಗರದ ಆರ್ಯ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸ್ಕ್ವಾಯ್ ನ್ಯಾಷನಲ್ ಸ್ಪರ್ಧೆ ಜರುಗಿತು.

ಇದರಲ್ಲಿ ಮುಂಡರಗಿಯ ಮಂಜು ಡೈಮಂಡ್ ಮಿಕ್ಸ್ ಮಾರ್ಷಿಯಲ್ ಆರ್ಟ್ಸ್ ಅಕಾಡೆಮಿಯಿಂದ ಒಟ್ಟು 8 ಕ್ರೀಡಾಪಟುಗಳು ಭಾಗವಹಿಸಿ ವಿಜೇತರಾಗಿದ್ದಾರೆ.

ರಾಜೇಶ್ರೀ ಮಂಜು ಭಜಂತ್ರಿ ವೈಯಕ್ತಿಕ ಕವನ್ಕೆ ಸ್ಪರ್ಧೆಯಲ್ಲಿ ಬೆಳ್ಳಿ ಪದಕ, ಡಬಲ್ ಮಿಕ್ಸ್ ಹೇರೋದಲ್ಲಿ ಬೆಳ್ಳಿ ಪದಕ, ಗ್ರೂಪ್ ಏರೋದಲ್ಲಿ ಕಂಚು ಪದಕ ಪಡೆದಿದ್ದಾರೆ. ಸವಿತಾ ಕೆ.ಕೆ. ವೈಯಕ್ತಿಕ ಕವನಕೆಯಲ್ಲಿ ಕಂಚು ಪದಕ, ಡಬಲ್ ಮಿಕ್ಸ್ ಕವನ್ಕೆಯಲ್ಲಿ ಕಂಚು ಪದಕ, ಗ್ರೂಪ್ ಏರೋದಲ್ಲಿ ಕಂಚು ಪದಕ ಪಡೆದಿದ್ದಾರೆ. ಸ್ವಾತಿ ಕಡಾಕಡಿ ೧) ವೈಯಕ್ತಿಕ ಕವನ್ಕೆಯಲ್ಲಿ ಬಂಗಾರದ ಪದಕ, ಗ್ರೂಪ್ ಮಿಕ್ಸ್ ಇರೋದಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ. ಗ್ರೂಪ್ ಏರೋದಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ.

ಸುರೇಶ ಎಚ್.ಕೆ. ವೈಯಕ್ತಿಕ ಹೀರೊ ಬೆಳ್ಳಿ ಪದಕ, ಡಬಲ್ ಮಿಕ್ಸ್ ಏರೋ ಬೆಳ್ಳಿ ಪದಕ, ಗ್ರೂಪ್ ಏರೋ ಬೆಳ್ಳಿ ಪದಕ ಪಡೆದಿದ್ದಾನೆ. ಕೃಷ್ಣಪ್ರಸಾದಗೌಡ ಪಾಟೀಲ ವೈಯಕ್ತಿಕ ಕವನ್ಕೆಯಲ್ಲಿ ಬೆಳ್ಳಿ ಪದಕ, ಡಬಲ್ ಕವನ್ಕೆ ಕಂಚು ಮೆಡಲ್, ಗ್ರೂಪ್ ಏರೋದಲ್ಲಿ ಕಂಚು ಪದಕ ಪಡೆದಿದ್ದಾನೆ. ಶರತ ಅಮಾತಿ ವೈಯಕ್ತಿಕ ಕವನ್ಕೆ ಕಂಚು ಪದಕ, ಗ್ರೂಪ್ ಏರೋದಲ್ಲಿ ಕಂಚು ಪದಕ ಪಡೆದಿದ್ದಾನೆ. ಆಕಾಶ ಹಡಪದ ಮಿಕ್ಸ ಏರೋದಲ್ಲಿ ಬೆಳ್ಳಿ ಪದಕ ಪಡೆದಿದ್ದಾನೆ. ಅಭಿಷೇಕ ಭಜಂತ್ರಿ ವೈಯಕ್ತಿಕ ಕವನ್ಕೆಯಲ್ಲಿ ಕಂಚು ಪದಕ, ಗ್ರೂಪ್ ಏರೋದಲ್ಲಿ ಕಂಚು ಪಡೆದಿದ್ದಾನೆ. ಒಟ್ಟು ನಮ್ಮ ಮುಂಡರಗಿ ಕ್ರೀಡಾಪಟುಗಳು 1 ಬಂಗಾರ, 7 ಬೆಳ್ಳಿ, 11 ಕಂಚಿನ ಪದಕಗಳನ್ನು ಪಡೆದು ನಮ್ಮ ಕರ್ನಾಟಕ ರಾಜ್ಯದ ಕೀರ್ತಿಯನ್ನು ತಂದಿದ್ದಾರೆ.

ಈ ಸಂದರ್ಭದಲ್ಲಿ ತರಬೇತುದಾರ ಮಂಜು ಭಜಂತ್ರಿಯವರಿಗೆ ಹಾಗೂ ಮಕ್ಕಳಿಗೆ ಪಾಲಕರು ಹಾಗೂ ಗದಗ ಜಿಲ್ಲಾ ಸ್ಕ್ವಾಯ್ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನುವಾದಕರು ಸಾಂಸ್ಕೃತಿಕ ರಾಯಭಾರಿಗಳಿದ್ದಂತೆ:ಎಸ್.ಜಿ.ಎಸ್‌
9.5 ಲಕ್ಷ ಲಂಚ ಪಡೆದ ಕೇಂದ್ರ ವಿದ್ಯುತ್‌ಸಂಸ್ಥೆ ಜಂಟಿ ನಿರ್ದೇಶಕ ಸಿಬಿಐ ಬಲೆಗೆ