ನೆಲಮಂಗಲ: ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ತಹಸೀಲ್ದಾರ್ ಮಲ್ಲೇಶ್ ಬೀರಪ್ಪ ಪೂಜಾರ್ ತಿಳಿಸಿದರು.
ನೆಲಮಂಗಲ: ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ತಹಸೀಲ್ದಾರ್ ಮಲ್ಲೇಶ್ ಬೀರಪ್ಪ ಪೂಜಾರ್ ತಿಳಿಸಿದರು.
ನಗರಸಭೆ ವ್ಯಾಪ್ತಿಯ ಕೆಂಪಲಿಂಗನಹಳ್ಳಿ ಗ್ರಾಮದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಸಂದೀಪ್ ಸೇವಾ ನಿಲಯಂ, ಪರಸ್ಪರ ಟ್ರಸ್ಟ್, ಜೀವನಾಲಯ ಮಕ್ಕಳಮನೆ ಸಂಸ್ಥೆ ಸಹಯೋಗದಲ್ಲಿ ರಾಷ್ಟ್ರೀಯ ಹತ್ತು ಮಾಸಾಚರಣೆ ಹಾಗೂ ಪೋಷಕತ್ವ ಅರಿವು ಕಾರ್ಯಕ್ರಮದಲ್ಲಿ ಪ್ರತಿಜ್ಞೆ ಸ್ವೀಕರಿಸಿ ಮಾತನಾಡಿದ ಅವರು, ಮಕ್ಕಳ ಕಲ್ಯಾಣಕ್ಕಾಗಿ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದ್ದು ಅವುಗಳನ್ನು ಸರ್ಕಾರಿ ಇಲಾಖೆ ಜತೆಗೆ ಸರ್ಕಾರೇತರ ಸಂಘ ಸಂಸ್ಥೆಗಳು ತಲುಪಿಸುವ ಕಾರ್ಯ ಮಾಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮಕ್ಕಳ ಮೇಲೆ ಕೆಲ ಶೋಷಣೆಗಳು ನಡೆಯುತ್ತಿದ್ದು ಸ್ಥಳೀಯವಾಗಿ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಗಮನಸಿ ಕಾನೂನು ಪ್ರಕಾರ ಕ್ರಮಕ್ಕೆ ಮುಂದಾಗಬೇಕಿದೆ. ಮಕ್ಕಳ ದತ್ತು ಸ್ವೀಕಾರವೂ ಕಾನೂನು ಅಡಿಯಲ್ಲೇ ಸ್ವೀಕರಿಸಬೇಕು. ಅದನ್ನು ಸಾರ್ವಜನಿಕರಿಗೆ ಅಧಿಕಾರಿಗಳು ಅರಿವು ಮೂಡಿಸಬೇಕು. ಮಕ್ಕಳ ಶ್ರೇಯೋಭಿವೃದ್ಧಿಗೆ ಮಹಿಳಾ ಮತ್ತು ಮಕ್ಕಳ ಇಲಾಖೆ ಜತೆಗೆ ಸಂದೀಪ್ ಸೇವಾ ನಿಲಯಂ ನಿರಂತರವಾಗಿ ಶ್ರಮಿಸುತ್ತಿದ್ದು ಸಂತೋಷಕರ ಸಂಗತಿ ಎಂದರು.
ತಾಲೂಕು ಸಮನ್ವಯ ಸಮಿತಿ ಸಭೆ: 3 ತಿಂಗಳಿಗೊಮ್ಮ ಸರ್ಕಾರ 32 ಇಲಾಖೆಯ ಸಹಯೋಗದಲ್ಲಿ ಸಮನ್ವಯ ಸಮಿತಿ ಸಭೆಯ ನಡೆಸುತ್ತಿದ್ದ ಮಕ್ಕಳ ಮೇಲೆ ಲೈಂಗಿಕ ದೌರ್ಬಲ್ಯ , ಗರ್ಭಿಣಿ ಮಹಿಳೆಯರಿಗೆ ಪೌಷ್ಠಿಕ ಆಹಾರ,
ಬಾಲ ಕಾರ್ಮಿಕ, ಬಾಲ ವಿವಾಹ ಶೋಷಣೆ ತಡೆ ಕುರಿತು ಸಭೆ ನಡೆಸಿ ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಕೆಲಸ ಮಾಡಲಾಗುತ್ತಿದೆ. ಯಾರೊಬ್ಬರ ಗಮನಕ್ಕೆ ಮಕ್ಕಳ ಮೇಲಿನ ಶೋಷಣೆಗಳು ಕಂಡು ಬಂದಲ್ಲಿ ತಾಲೂಕು ಆಡಳಿತಕ್ಕೆ ಹಾಗೂ ಮಹಿಳಾ ಮಕ್ಕಳು ಅಭಿವೃದ್ಧಿ ಇಲಾಖೆಗೆ ಮಾಹಿತಿ ನೀಡಬೇಕೆಂದು ತಹಸೀಲ್ದಾರ್ ಪೂಜಾರ್ ತಿಳಿಸಿದರು.
ಪರಸ್ಪರ ಟ್ರಸ್ಟ್ ನಿರ್ದೇಶಕಿ ಗೀತಾ ಮಾತನಾಡಿ, ಹಿಂದೆ ಸಂಬಂಧಿಕರ ಅಥವಾ ತಮಗೆ ಬೇಕಾದವರ ಬಳಿ ಮಕ್ಕಳನ್ನು ದತ್ತು ಪಡೆದು ಸಾಕುತ್ತಿದ್ದರು. ಈಗ ಕಾನೂನು ಬದಲಾಗಿದೆ. ಎಲ್ಲವೂ ಕಾನೂನಿನ ಪ್ರಕಾರವೇ ಮಾಡಬೇಕಾಗಿದೆ. ಇತ್ತೀಚಿನ ದಿನಮಾನಗಳಲ್ಲಿ ಕೇವಲ ಸಂಬಂಧಿಕರ, ಹತ್ತಿರದವರ ಮಕ್ಕಳನ್ನು ಮಾತ್ರವಲ್ಲದೆ ಅನಾಥ ಮಕ್ಕಳನ್ನು ದತ್ತು ಪಡೆಯುವ ಪ್ರಕ್ರಿಯೆ ಜಾರಿಗೆ ಬಂದಿದೆ. ಕಾನೂನಿನ ಮೂಲಕವೇ ಮಕ್ಕಳನ್ನು ದತ್ತು ಪಡೆದು ಪರಿಪಾಲನೆ ಮಾಡಬೇಕು. ಅನಧಿಕೃತವಾಗಿ ದತ್ತು ಪಡೆಯುವುದು ಅಪರಾಧವಾಗುತ್ತದೆ ಎಂದರು.
ಸಂದರ್ಭದಲ್ಲಿ ಟಿಎಪಿಸಿಎಂಎಸ್ ನಿರ್ದೇಶಕ ಹನುಮಂತರಾಜು, ಮಕ್ಕಳ ಕಲ್ಯಾಣ ಸಮಿತಿ ಜಿಲ್ಲಾ ಸದಸ್ಯ ಧನಂಜಯ್, ಸಂದೀಪ್ ಸೇವಾ ನಿಲಯಂ ಸಂಸ್ಥಾಪಕ ಸಾಮ್ಯೂಯಲ್‌ಪ್ರಭಾಕರ್, ಕಾರ್ಯದರ್ಶಿ ಲಿಲ್ಲಿ ಸಾಮ್ಯೂಯಲ್, ಜೀವನಾಲಯ ಮಕ್ಕಳ ಮನೆ ನಿರ್ದೇಶಕಿ ರೋಸ್‌ಮೇರಿ ಮತ್ತಿತರರು ಉಪಸ್ಥಿತರಿದ್ದರು.
ಪೊಟೊ-26 ಕೆ ಎನ್ ಎಲ್ ಎಮ್ 4-
ನೆಲಮಂಗಲ ನಗರಸಭೆ ವ್ಯಾಪ್ತಿಯ ಕೆಂಪಲಿಂಗನಹಳ್ಳಿಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಸಂದೀಪ್ ಸೇವಾ ನಿಲಯಂ, ಪರಸ್ಪರ ಟ್ರಸ್ಟ್, ಜೀವನಾಲಯ ಮಕ್ಕಳಮನೆ ಸಂಸ್ಥೆ ಸಹಯೋಗದಲ್ಲಿ ರಾಷ್ಟ್ರೀಯ ಹತ್ತು ಮಾಸಾಚರಣೆ ಹಾಗೂ ಪೋಷಕತ್ವ ಅರಿವು ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಮಲ್ಲೇಶ್‌ಬೀರಪ್ಪ ಪೂಜಾರ್ ಪ್ರತಿಜ್ಞೆ ಸ್ವೀಕರಿಸಿ ಮಾತನಾಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.