ಹೆಣ್ಣು ತಾನು ಉರಿದು ಜಗ ಬೆಳಗಿಸುವ ದೀಪದಂತೆ. ಅವಳು ತನ್ನ ತ್ಯಾಗಕ್ಕೆ ಪ್ರತಿಯಾಗಿ ಏನೂ ಬಯಸುವುದಿಲ್ಲ
ಕನ್ನಡ ಪ್ರಭ ಯರಗಟ್ಟಿ ಪ್ರಾಚೀನ ಕಾಲದಿಂದಲೂ ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇಂದೂ ಸ್ತ್ರೀ - ಪುರುಷರ ನಡುವಿನ ತಾರತಮ್ಯ ಹೆಚ್ಚಿದ್ದು, ಈ ಕುರಿತು ಜಾಗೃತಿ ಮೂಡಿಸಬೇಕು ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಐ.ಆರ್.ಗಂಜಿ ಹೇಳಿದರು.
ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಈಚೆಗೆ ನಡೆದ ರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆಯಲ್ಲಿ ಮಾತನಾಡಿದರು. ಹೆಣ್ಣು ತಾನು ಉರಿದು ಜಗ ಬೆಳಗಿಸುವ ದೀಪದಂತೆ. ಅವಳು ತನ್ನ ತ್ಯಾಗಕ್ಕೆ ಪ್ರತಿಯಾಗಿ ಏನೂ ಬಯಸುವುದಿಲ್ಲ. ಎಲ್ಲರ ಪ್ರೀತಿ ವಿಶ್ವಾಸವೇ ಅವಳ ಧೈರ್ಯ. ತನ್ನ ಸ್ವಾರ್ಥಕ್ಕಾಗಿ ಹಂಬಲಿಸದೆ ಕುಟುಂಬದ ಹಿತಕ್ಕಾಗಿ ತನ್ನ ಬದುಕನ್ನು ಮುಡುಪಾಗಿಡುತ್ತಾಳೆ. ಹೆಣ್ಣು ಮನೆ ನಂದಾದೀಪ, ಬೆಳಗಲಿ ಬಿಡಿ ಆ ಹೆಣ್ಣು ಮಗುವನ್ನು ಉಳಿಸಿ ಬೆಳೆಸಿ ಓದಿಸಿ ಗೌರವಿಸಬೇಕು ಎಂದು ಡಾ. ಬಸವರಾಜ ನರೇಗಲ್ ಹೇಳಿದರು. ಕಾರ್ಯಕ್ರಮದಲ್ಲಿ ಡಾ.ಬಿ.ಎಸ್.ಬಳ್ಳೂರ, ಡಾ.ಮಡಿವಾಳೇಶ್ವರ, ಡಾ. ರಮಾಶ್ರೀ ಕಣಗಲಿ, ಡಾ.ಸುಧಾರಾಣಿ ಹಳ್ಳಿ, ಎನ್.ಎಂ. ಹಾರೂಗೊಪ್ಪ, ಮಂಜುಳಾ ಈರಗಾರ ಮತ್ತು ಆರೋಗ್ಯ ಸಿಬ್ಬಂದಿ ಹಾಗೂ ಅಂಗನವಾಡಿ ಆಶಾ ಕಾರ್ಯಕರ್ತೆಯರು, ತಾಯಂದಿರು ಇದ್ದರು. ಈ ವೇಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ ತಾಯಿಗೆ ಸಿಹಿ ಹಂಚಿದರು. ನಿರ್ಮಲಾ ಹಾರೂಗೊಪ್ಪ ವಂದಿಸಿದರು, ಮಂಜುಳಾ ಈರಗಾರ ನಿರೂಪಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.