ಮಾರ್ಚ್‌ ವೇಳೆಗೆ 7ನೇ ರಾಷ್ಟ್ರೀಯ ಹೆದ್ದಾರಿ ಸಂಚಾರಕ್ಕೆ ಮುಕ್ತ: ಸಂಸದ ಜಿಣಜಿಣಗಿ

KannadaprabhaNewsNetwork |  
Published : Jul 08, 2026, 03:00 AM IST
ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೀಕ್ಷಿಸಿದ ಸಂಸದ ರಮೇಶ ಜಿಗಜಿಣಗಿ. | Kannada Prabha

ಸಾರಾಂಶ

₹957.09 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ವಿಜಯಪುರ ನಗರಕ್ಕೆ 7ನೇ ರಾಷ್ಟ್ರೀಯ ಹೆದ್ದಾರಿ 2027ರ ಮಾರ್ಚ್‌ಗೆ ಪೂರ್ಣಗೊಂಡು ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಸಂಸದ ರಮೇಶ ಜಿಗಜಿಣಗಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

₹957.09 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ವಿಜಯಪುರ ನಗರಕ್ಕೆ 7ನೇ ರಾಷ್ಟ್ರೀಯ ಹೆದ್ದಾರಿ 2027ರ ಮಾರ್ಚ್‌ಗೆ ಪೂರ್ಣಗೊಂಡು ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಸಂಸದ ರಮೇಶ ಜಿಗಜಿಣಗಿ ತಿಳಿಸಿದರು.

ನಿರ್ಮಾಣ ಹಂತದಲ್ಲಿರುವ ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಿಸಿದಂತೆ ವಿವಿಧ ಕ್ಷೇತ್ರಗಳನ್ನು ವೀಕ್ಷಿಸಿ ಸಂಬಂಧಿಸಿದ ಅಭಿಯಂತರ ಜೊತೆ ಚರ್ಚೆ ನಡೆಸಿದ ಬಳಿಕ ಸಂಸದರು ಈ ವಿಷಯ ತಿಳಿಸಿದರು.

ನೆರೆಯ ಮಹಾರಾಷ್ಟ್ರ ರಾಜ್ಯದ ಮುರುಮ್‌ ನಿಂದ ವಿಜಯಪುರದ ಸುಭಾಷಚಂದ್ರ ಬೋಸ್ ವೃತ್ತದವರೆಗೆ ನಿರ್ಮಾಣಗೊಳ್ಳುತ್ತಿರುವ ಈ ಹೊಸ ರಾಷ್ಟ್ರೀಯ ಹೆದ್ದಾರಿ (ಎನ್‌ ಎಚ್‌‌ 548ಬಿ)ಯ ಕಾಮಗಾರಿ ಶೇ.65ರಷ್ಟು ಪೂರ್ಣಗೊಂಡಿದ್ದು, ಬಾಕಿ ಕಾಮಗಾರಿ ಪ್ರಗತಿಯಲ್ಲಿದ್ದು, ಮಾರ್ಚ್‌ 2027ಕ್ಕೆ ಪೂರ್ಣಗೊಳ್ಳಲಿದೆ. 2025 ಜನವರಿ 16ರಂದು ಕಾರ್ಯಾರಂಭವಾಗಿದ್ದ ಹೆದ್ದಾರಿ ಕಾಮಗಾರಿ ಎರಡು ವರ್ಷದಲ್ಲಿ ಪೂರ್ಣಗೊಳ್ಳಬೇಕಿತ್ತು. ಆದರೆ ಕಾರಣಾಂತರಗಳಿಂದ ಅದು 2027ರ ಮಾರ್ಚ್‌ ನಲ್ಲಿ ಪೂರ್ಣಗೊಳ್ಳಲಿದೆ ಎಂದವರು ತಿಳಿಸಿದ್ದಾರೆ.

ಮಹಾರಾಷ್ಟ್ರದ ಮುರಮ್‌ ನಿಂದ ಐಬಿ ವೃತ್ತದ ವರೆಗೆ 1,02,303 ಕಿಮೀ. ಉದ್ದದ ರಾಷ್ಟ್ರೀಯ ಹೆದ್ದಾರಿಗೆ ಒಟ್ಟು ₹957.09 ಕೋಟಿ ಮಂಜೂರಾಗಿದೆ. ಮಹಾರಾಷ್ಟ್ರದ ಕರಜಗಿ, ಮಾಶ್ಯಾಳ, ಇಂಡಿ, ರೂಗಿ, ಅಥರ್ಗಾ ಹಾಗೂ ನಾಗಠಾಣ ಸೇರಿದಂತೆ 7 ಬೈಪಾಸ್ ಮೂಲಕ ಈ ಹೆದ್ದಾರಿ ನಿರ್ಮಾಣಗೊಳ್ಳುತ್ತಿದೆ. ಈ ಹೆದ್ದಾರಿಯುದ್ದಕ್ಕೂ ನಾಲ್ಕು ಬೃಹತ್‌ ಸೇತುವೆ ಜೊತೆಗೆ, ಒಂದು ರೈಲ್ವೆ ಮೇಲ್ಸೇತುವೆ ನಿರ್ಮಾಣಗೊಳ್ಳಲಿದೆ. ಶೇ.65ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಬಾಕಿ ಕಾಮಗಾರಿ ಭರದಿಂದ ಸಾಗಿದೆ ಎಂದು ತಿಳಿಸಿದ ಅವರು, ಈ ಹೆದ್ದಾರಿ, ವಿಜಯಪುರ ನಗರಕ್ಕೆ 7ನೇ ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆಗೊಳ್ಳಲಿದೆ ಎಂದವರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವಿಭಾಗದ ಕಾರ್ಯಪಾಲಕ ಅಭಿಯಂತರ ವಿಜಯ ಪಾಟೀಲ, ಯೋಜನಾ ವ್ಯವಸ್ಥಾಪಕ ಮಾರುತಿರಾವ ಶಿಂದೆ, ಸಹಾಯಕ ಕಾರ್ಯಪಾಲಕ ಅಭಿಯಂತರ ವಿವೇಕ ಮಠ ಬಿಜೆಪಿ ಜಿಲ್ಲಾ ಮಾಧ್ಯಮ ಸಂಚಾಲಕ ವಿಜಯ ಜೋಶಿ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಲಘಟಗಿಯರಂತೆ ದೇಶಭಕ್ತರಾದರೇ ಸಮೃದ್ಧ ರಾಷ್ಟ್ರ ನಿರ್ಮಾಣ
ಕೃಷ್ಣಾ ನದಿಗೆ 1.08 ಲಕ್ಷ ಕ್ಯುಸೆಕ್‌ ನೀರು