ಲೋಗೋ ಬಿಡುಗಡೆಗೊಳಿಸಿದ ಸಂಸದೆ ಡಾ.ಪ್ರಭಾ, ಎಸ್‌ಪಿ ಉಮಾ ಪ್ರಶಾಂತ್ - - -
ಕನ್ನಡಪ್ರಭ ವಾರ್ತೆ ದಾವಣಗೆರೆ ನಗರದಲ್ಲಿ ಪ್ರಥಮ ಬಾರಿಗೆ ಜೂನ್ 22 ರಿಂದ 30ರವರೆಗೆ ರಾಷ್ಟ್ರಮಟ್ಟದ ಹಿರಿಯರ, ಕಿರಿಯರ, ಪುರುಷರ ಹಾಗೂ ಮಹಿಳೆಯರ ಪವರ್ ಲಿಫ್ಟಿಂಗ್ ಸ್ಪರ್ಧೆಗಳ ಚಾಂಪಿಯನ್‌ಶಿಪ್ ಆಯೋಜಿಸಲಾಗಿದೆ. ಈ ಕುರಿತ ಲೋಗೋವನ್ನು ಭಾನುವಾರ ಸಂಸದರ ಗೃಹ ಕಚೇರಿಯಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಮತ್ತು ಜಿಲ್ಲಾ ಎಸ್‌ಪಿ ಉಮಾ ಪ್ರಶಾಂತ್ ಬಿಡುಗಡೆಗೊಳಿಸಿದರು.ಗ್ರೂಫ್ ಆಫ್ ಐರನ್ ಗೇಮ್ಸ್ ದಾವಣಗೆರೆ ಮತ್ತು ಕರ್ನಾಟಕ ಪವರ್ ಲಿಫ್ಟಿಂಗ್ ಅಸೋಸಿಯೇಷನ್ ಸಹಭಾಗಿತ್ವದಲ್ಲಿ ಹಳೇ ಪಿ.ಬಿ. ರಸ್ತೆಯ ಎಕೆಎಸ್ ಕನ್ವೆಂಷನ್ ಹಾಲ್‌ನಲ್ಲಿ ರಾಷ್ಟ್ರಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ವಿವಿಧ ರಾಜ್ಯಗಳಿಂದ ಆಗಮಿಸುವ ಸುಮಾರು 1500 ಸ್ಪರ್ಧಿಗಳಿಗೆ ಮತ್ತು 200 ತೀರ್ಪುಗಾರರಿಗೆ, 100 ಜನ ಕ್ರೀಡಾ ಸಹಾಯಕರಿಗೆ ವಸತಿ, ಊಟ ಸೇರಿದಂತೆ ಇತರೆ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗಿದೆ ಎಂದು ಈ ಸಂದರ್ಭ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಲಾಯಿತು.
ಸ್ಪರ್ಧೆ ವಿಜೇತರು ಅರ್ಹತೆಯ ಆಧಾರದಲ್ಲಿ ಆ.29ರಿಂದ ಸೆ.7 ರವರೆಗೆ ಉತ್ತರ ಅಮೇರಿಕಾದ ಸನ್‌ಜೋಷ್ ಕೋಸ್ಟಾರಿಕದಲ್ಲಿ ನಡೆಯುವ ಅಂತರ ರಾಷ್ಟ್ರೀಯ ಪವರ್ ಲಿಫ್ಟಿಂಗ್ ಸ್ಪರ್ಧೆಗೆ ಆಯ್ಕೆಯಾಗಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.ಪವರ್ ಲಿಫ್ಟಿಂಗ್ ಸ್ಪರ್ಧೆಯ ರಾಷ್ಟ್ರೀಯ ಅಧ್ಯಕ್ಷ ಸತೀಶ್ ಕುಮಾರ್ ಕುದ್ರೋಳಿ, ಪಾಲಿಕೆ ಆಯುಕ್ತೆ ರೇಣುಕಾ, ಎಚ್.ದಾದಾಪೀರ್, ಅಕಾಡೆಮಿಯ ಅಧ್ಯಕ್ಷ ರಜ್ವಿಖಾನ್ ಇತರರು ಇದ್ದರು.
- - -(ಟಾಪ್ ಕೋಟ್) ವಿವಿಧ ರಾಜ್ಯಗಳಿಂದ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವವರಿಗೆ ದಾವಣಗೆರೆಯ ಪ್ರವಾಸಿ ತಾಣಗಳನ್ನು ವೀಕ್ಷಿಸಲು ಮತ್ತು ಬೆಣ್ಣೆ ದೋಸೆ ಸವಿಯಲು ಸಂಬಂಧಪಟ್ಟ ಅಧಿಕಾರಿಗಳು ವ್ಯವಸ್ಥೆ ಕಲ್ಪಿಸಿಕೊಟ್ಟು, ನಮ್ಮ ದಾವಣಗೆರೆಯ ಹೆಸರು ಅವರ ಮನದಲ್ಲಿ ಚಿರಸ್ಥಾಯಿ ಆಗುವಂತೆ ಮಾಡಬೇಕು - ಡಾ. ಪ್ರಭಾ ಮಲ್ಲಿಕಾರ್ಜುನ್, ಸಂಸದೆ
- - --13ಕೆಡಿವಿಜಿ39:
ದಾವಣಗೆರೆಯಲ್ಲಿ ನಡೆಯುವ ರಾಷ್ಟ್ರಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆ ಲೋಗೋವನ್ನು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್, ಎಸ್‌ಪಿ ಉಮಾ ಪ್ರಶಾಂತ್ ಬಿಡುಗಡೆ ಮಾಡಿದರು.