ಕನ್ನಡಪ್ರಭ ವಾರ್ತೆಚಾಮರಾಜನಗರ
ನಗರದ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ಹಾಗೂ ನಗರಸಭೆ ಸಂಯುಕ್ತಾಶ್ರಯದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ೧೩೪ನೇ ಜನ್ಮ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಅಂಬೇಡ್ಕರ್‌ರವರ ವಿಚಾರಧಾರೆಗಳ ಕುರಿತು ಆಯೋಜಿಸಿದ್ದ ವಿಚಾರ ಸಂಕೀರ್ಣ ಉದ್ಘಾಟಿಸಿ ಮಾತನಾಡಿದರು.
ಅಂಬೇಡ್ಕರ್ ಅವರು ಹೊಂದಿದ್ದ ಸಮಾಜಮುಖಿ ಸರ್ವತೋಮುಖ ಬೆಳವಣಿಗೆಯ ಚಿಂತನೆಗಳು ಎಲ್ಲಾ ಕಾಲಕ್ಕೂ ಅಗತ್ಯವಾಗಿವೆ. ಅಂದೇ ಅವರು ಚಿಂತನೆಯ ಬೀಜಗಳನ್ನು ಮೆದುಳಿನಲ್ಲಿ ಬಿತ್ತಿದ್ದರು. ಅವರ ಸಾಧನೆ ಹೋರಾಟವೆಲ್ಲವನ್ನು ನಾವು ಸದಾ ಸ್ಮರಿಸಬೇಕು ಎಂದು ಹೇಳಿದರು.ಡಾ. ಬಿ.ಆರ್ ಅಂಬೇಡ್ಕರ್ ಅವರ ಬಗ್ಗೆ ದಿನ ನಿತ್ಯವೂ ಕಲಿಯುವುದು ಸಾಕಷ್ಟಿದೆ. ಅಂಬೇಡ್ಕರ್ ಕುರಿತು ಪರಿಪೂರ್ಣವಾಗಿ ಎಲ್ಲವೂ ನನಗೆ ತಿಳಿದಿದೆ ಎಂದೂ ಹೇಳಲೂ ಸಾಧ್ಯವಿಲ್ಲ. ಮಹಾನ್ ಪ್ರತಿಭೆ, ವಿಶ್ವಜ್ಞಾನಿ ಅಂಬೇಡ್ಕರ್ ಬಗ್ಗೆ ಪ್ರತಿನಿತ್ಯವೂ ತಿಳಿದುಕೊಳ್ಳಬೇಕಾದ ವಿಷಯಗಳು ಬಹಳಷ್ಟಿವೆ ಎಂದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಡಾ. ಕಲ್ಯಾಣ ಸಿರಿ ಭಂತೇಜಿ ಅವರು ಮಾತನಾಡಿ, ಶಿಕ್ಷಣದ ಪ್ರತಿರೂಪವಾಗಿ ಡಾ. ಬಿ. ಆರ್. ಅಂಬೇಡ್ಕರ್ ಅವರು ಜಗತ್ತಿನ ಮುಂದೆ ನಿಂತಿದ್ದಾರೆ. ಶಿಕ್ಷಣದ ಜೊತೆ ಪ್ರಜ್ಞೆ ಸಹ ಅವಶ್ಯಕವಾಗಿದೆ ಯಾವುದು ಸತ್ಯ ಯಾವುದು ಸುಳ್ಳು ಎನ್ನುವುದನ್ನು ಅರಿಯುವುದೆ ಪ್ರಜ್ಞೆ. ಮಾನವೀಯತೆ ಮನುಷ್ಯತ್ವವನ್ನು ಗುಣಗಳನ್ನು ಪ್ರತಿಯೊಬ್ಬರು ಹೊಂದಬೇಕಿದೆ ಎಂದರು.
ಡಾ. ಬಿ. ಆರ್ ಅಂಬೇಡ್ಕರ್ ಮತ್ತು ಬೌದ್ದ ತಾತ್ವಿಕತೆ ವಿಷಯ ಕುರಿತು ಮಾತನಾಡಿದ ತುಮಕೂರಿನ ಬೌದ್ದ ಚಿಂತಕರು ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಡಾ. ಎಸ್ ನಟರಾಜ ಬೂದಾಳು ಅವರು, ಬೌದ್ದ ಧರ್ಮ, ವಿಜ್ಞಾನ, ಪ್ರಜಾಸತ್ತೆಗೆ ಸಮಾನವಾದ ಸಂಬಂಧಗಳಿವೆ. ಸಮಾಜಕ್ಕೆ ಓಳಿತು ಮಾಡಬೇಕೆಂದು ಬೌದ್ದರು ಹೇಳಿದ್ದಾರೆ. ಜಗತ್ತಿನಲ್ಲಿ ಪ್ರಶ್ನಿಸದೇ ಯಾವುದನ್ನು ಒಪ್ಪಿಕೊಳ್ಳಬಾರದು ನನ್ನನೂ ಸೇರಿದಂತೆ ಯಾರನ್ನು ಓಪ್ಪಿಕೊಳ್ಳಬೇಡ ಎಂದು ಬುದ್ದ ಹೇಳಿದ್ದಾರೆ ಎಂದರು.
ಇದೆ ವೇಳೆ ೨೦೨೫ನೇ ಸಾಲಿನ ರಾಜ್ಯ ಮಟ್ಟದ ಡಾ. ಬಿ. ಆರ್. ಅಂಬೇಡ್ಕರ್ ಪ್ರಶಸ್ತಿಗೆ (ಜನಪದ) ಆಯ್ಕೆಯಾಗಿರುವ ಜಿಲ್ಲೆಯ ಹೊನ್ನೂರು ಗೌರಮ್ಮ ಅವರನ್ನು ಜಿಲ್ಲಾಡಳಿತದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಕೂಡಲೇ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ವೇದಿಕೆಯಲ್ಲಿಯೇ ಪ್ರತಿಕ್ರಿಯಿಸಿ ಪ್ರಶಸ್ತಿಯಿಂದ ನಮ್ಮ ಜಿಲ್ಲೆಗೆ ಹೆಮ್ಮೆ ಕೀರ್ತಿ ತಂದಿದ್ದೀರಿ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಿಗೆ ಪ್ರಸ್ತಾವನೆ ಸಲ್ಲಿಸಲು ತಿಳಿಸಿದ್ದೇನೆ. ಮನೆ ಹಾಗೂ ನಿವೇಶನ ವ್ಯವಸ್ಥೆ ಮಾಡಿಕೊಡಲಿದ್ದೇವೆ ಎಂದರು.