ಅರಿವು ಎಂಬುದು ಗ್ರಹಿಕೆ, ಭಾವನೆಯ ನಂಬಿಕೆ

KannadaprabhaNewsNetwork |  
Published : Sep 25, 2026, 03:00 AM IST
1 | Kannada Prabha

ಸಾರಾಂಶ

ದೃಷ್ಟಿಯು ಕೇವಲ ದುಳಿನಿಂದಲ್ಲದೆ ಪ್ರಜ್ಞೆಯಿಂದ ಉದ್ಭವಿಸುವ ಪ್ರೇರಕ

ಕನ್ನಡಪ್ರಭ ವಾರ್ತೆ ಮೈಸೂರುಅರಿವು ಎಂಬುದು ವಾಕ್ಯ ರಚನೆಗೆ ಸೀಮಿತವಾಗದೆ ಅದನ್ನು ಮೀರಿದೆ. ಅದು ಸರಿಯಾದ ಭಾವನೆ, ಗ್ರಹಿಕೆ, ದೃಢ ನಂಬಿಕೆ ಮತ್ತು ಪರಿಕಲ್ಪನೆ ಒಳಗೊಂಡಿದೆ ಎಂದು ಅಲಹಾಬಾದ್‌ ನ ಐಐಐಟಿ ಮಾಜಿ ನಿರ್ದೇಶಕ ಮತ್ತು ವಿಗ್ನುನ್‌ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಡಾ.ಪಿ. ನಾಗಭೂಷಣ್‌ ಅಭಿಪ್ರಾಯಪಟ್ಟರು.ನಗರದ ಜೆಎಸ್‌ಎಸ್‌ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ (ಜೆಎಸ್‌ಎಸ್‌ ಎಸ್‌.ಟಿ.ಯು) ಕಂಪ್ಯೂಟರ್‌ ಸೈನ್ಸ್‌ ಮತ್ತು ಎಂಜಿನಿಯರಿಂಗ್‌ ವಿಭಾಗದ ವತಿಯಿಂದ ಜೆಎಸ್‌ಎಸ್‌ ಎಸ್‌.ಟಿಯುನ ಸುವರ್ಣ ಮಹೋತ್ಸವ ಭವನದ ಸಮಿನಾರ್‌ ಸಭಾಂಗಣದಲ್ಲಿ ಎರಡು ದಿನಗಳ ಡೀಪ್‌ ಲರ್ನಿಂಗ್‌ ಹಾರಿಜನ್ಸ್‌: ಭಾಷೆಯಿಂದ ದೃಷ್ಟಿ ಮತ್ತು ಭದ್ರತೆಯವರೆಗೆ ಎಂಬ ವಿಷಯ ಕುರಿತು ರಾಷ್ಟ್ರ ಮಟ್ಟದ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ವಿಚಾರ ಸಂಕಿರಣದ ಆಶಯವು ಅತ್ಯಂತ ಪಸ್ತುತ ಮತ್ತು ಚಿಂತನ ಪ್ರೇರಕವಾಗಿದೆ. ಕಾದಂಬರಿ ಓದುವಾಗ ಮನಸ್ಸಿನಲ್ಲಿ ಮೂಡುವ ಕಲ್ಪನಾತ್ಮಾಕ ದೃಶ್ಯೀಕರಣದ ಉದಾಹರಣೆ ಮೂಲಕ ವಿವರಿಸಿದ ಅವರು, ದೃಷ್ಟಿಯು ಕೇವಲ ದುಳಿನಿಂದಲ್ಲದೆ ಪ್ರಜ್ಞೆಯಿಂದ ಉದ್ಭವಿಸುವ ಪ್ರೇರಕವಾಗಿದೆ ಎಂದರು.ಕೃತಕ ಬುದ್ಧಿಮತ್ತೆಯ (ಎಐ) ಸಾಧನಗಳು ಮಾನವನ ದೃಷ್ಟಿ ಮತ್ತು ದೃಷ್ಟಿಕೋನ ಮಾರ್ಗದರ್ಶನಗಳಲ್ಲಿ ಕಾರ್ಯನಿರ್ವಹಿಸಬೇಕೇ ಹೊರತು ಅದಕ್ಕೆ ವಿರುದ್ಧವಾಗಿ ಅಲ್ಲ ಎಂದು ಅವರು ಕಿವಿಮಾತು ಹೇಳಿದರು.ಜೆಎಸ್‌ಎಸ್‌ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಕುಲಪತಿ ಡಾ.ಎ.ಎನ್‌. ಸಂತೋಷ್‌ ಅಧ್ಯಕ್ಷತೆ ವಹಿಸಿದ್ದರು. ಕಂಪ್ಯೂಟರ್‌ ಸೈನ್ಸ್‌ಮತ್ತು ಎಂಜಿನಿಯರಿಂಗ್‌ ವಿಭಾಗದ ಮುಖ್ಯಸ್ಥ ಪ್ರೊ. ಅನಿಲ್‌ ಕುಮಾರ್‌ ಮಾತನಾಡಿದರು. ಸಹ ಪ್ರಾಧ್ಯಾಪಕಿ ಡಾ.ಎಂ.ಎ. ಅನುಸೂಯ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಂಪ್ರದಾಯಿಕ ಬೇರುಗಳಿಲ್ಲದೆ ಆರೋಗ್ಯಕರ ರಾಷ್ಟ್ರ ನಿರ್ಮಾಣ ಅಸಾಧ್ಯ
ಹಿಂದುಳಿದವರು ಜಾಗತೀಕರಣದ ಲಾಭ ಪಡೆಯಲಾಗುತ್ತಿಲ್ಲ