ಹುಬ್ಬಳ್ಳಿ:
ನೈಋತ್ಯ ರೈಲ್ವೆ ತಂಡವು ಒಟ್ಟು 7 ಸ್ಪರ್ಧಿಗಳನ್ನು ಒಳಗೊಂಡಿತ್ತು, ಅದರಲ್ಲಿ ನಾಲ್ವರಾದ ವೆಂಕಪ್ಪ ಕೆ, ಮೇಘಾ ಗುಗಾಡ್, ಕಾವೇರಿ ಮುರಾನಾಳ್ ಮತ್ತು ಚೈತ್ರಾ ಬೋರ್ಜಿ ಅವರನ್ನೊಳಗೊಂಡ ತಂಡ 60 ಕಿಮೀ ಮಿಶ್ರ ತಂಡ ರಿಲೇ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆಯಿತು.
ವೈಯಕ್ತಿಕ ಸಾಧನೆ:ಬಾಗಲಕೋಟೆಯಲ್ಲಿ ಕಮರ್ಷಿಯಲ್ ಕ್ಲರ್ಕ್ ಕಮ್ ಟಿಕೆಟ್ ಕಲೆಕ್ಟರ್ ಆಗಿರುವ ವೆಂಕಪ್ಪ ಕೆ. 60 ಕಿಮೀ ಮಿಶ್ರ ತಂಡ ರಿಲೇ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ, ಹುಬ್ಬಳ್ಳಿಯಲ್ಲಿ ಕಮರ್ಷಿಯಲ್ ಕ್ಲರ್ಕ್ ಕಮ್ ಟಿಕೆಟ್ ಕಲೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಕಾವೇರಿ ಮುರಾನಾಳ್ 60 ಕಿಮೀ ವೈಯಕ್ತಿಕ ರೋಡ್ ರೇಸ್ ಮತ್ತು 60 ಕಿಮೀ ಮಿಶ್ರ ತಂಡ ರಿಲೇ ಸೈಕ್ಲಿಂಗ್ ಸ್ಪರ್ಧೆಯಲ್ಲಿ 2 ಚಿನ್ನದ ಪದಕ ಪಡೆದರು.
ಹುಬ್ಬಳ್ಳಿಯಲ್ಲಿ ಕ್ಲರ್ಕ್ ಆಗಿರುವ, ಮೇಘಾ ಗುಗಾಡ್ 30 ಕಿಮೀ ವೈಯಕ್ತಿಕ ಟೈಮ್ ಟ್ರಯಲ್ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಮತ್ತು 60 ಕಿಮೀ ಮಿಶ್ರ ತಂಡ ರಿಲೇ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದರು. ಚೈತ್ರಾ ಬೋರ್ಜಿ 60 ಕಿಮೀ ಮಿಶ್ರ ತಂಡ ರಿಲೇ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ತಂಡದ ಯಶಸ್ಸಿಗೆ ಕೊಡುಗೆ ನೀಡಿದರು. ಒಟ್ಟಾರೆ 2023-24ರ ಪಂದ್ಯಾವಳಿಯ ಅತ್ಯುತ್ತಮ ಸೈಕ್ಲಿಸ್ಟ್ ಪ್ರಶಸ್ತಿಯನ್ನು ನೀಡಲಾಯಿತು.ತರಬೇತುದಾರ ನಿಜಪ್ಪ ವೈ. (ಹುಬ್ಬಳ್ಳಿ ವಿಭಾಗದ ಉಪಮುಖ್ಯ ಟಿಕೆಟ್ ಪರಿವೀಕ್ಷಕ) ಮಾರ್ಗದರ್ಶನದಲ್ಲಿ ತಂಡವು ಸಾಧನೆ ಸಾಧ್ಯವಾಯಿತು. ನೈಋತ್ಯ ರೈಲ್ವೆಯ ಜನರಲ್ ಮ್ಯಾನೇಜರ್ ಅರವಿಂದ್ ಶ್ರೀವಾಸ್ತವ್ ವಿಜೇತರಿಗೆ ಅಭಿನಂದನೆ ಸಲ್ಲಿಸಿದರು.