ಮಂಗಳೂರು ನಗರ ಸಂಚಾರ ಪೊಲೀಸ್, ಸಾರಿಗೆ ಇಲಾಖೆ ಮತ್ತು ಭಾರತ್ ಸ್ಕೌಟ್-ಗೈಡ್ಸ್ ಸಹಯೋಗದಲ್ಲಿ ಗುರುವಾರ ನಡೆದ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ-2024 ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ಮಂಗಳೂರು
ಪ್ರತಿಯೊಬ್ಬರೂ ಸಂಚಾರ ನಿಯಮ ಪಾಲಿಸುವ ದೃಢ ಸಂಕಲ್ಪ ಕೈಗೊಂಡಾಗ ಮಾತ್ರ ವಾಹನ ಅಪಘಾತ ನಿಯಂತ್ರಣ ಸಾಧ್ಯ ಎಂದು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್‌ವಾಲ್ ಹೇಳಿದರು.ನಗರದ ಟಿಎಂಎ ಪೈ ಸಭಾಂಗಣದಲ್ಲಿ ಮಂಗಳೂರು ನಗರ ಸಂಚಾರ ಪೊಲೀಸ್, ಸಾರಿಗೆ ಇಲಾಖೆ ಮತ್ತು ಭಾರತ್ ಸ್ಕೌಟ್-ಗೈಡ್ಸ್ ಸಹಯೋಗದಲ್ಲಿ ಗುರುವಾರ ನಡೆದ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ-2024 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ ಪ್ರತಿವರ್ಷ 1.60 ಲಕ್ಷ ಮಂದಿ ಅಪಘಾತದಿಂದಲೇ ಸಾಯುತ್ತಿದ್ದಾರೆ. ಈ ವರ್ಷದ ಸಪ್ತಾಹ ಕಾರ್ಯಕ್ರಮದಲ್ಲಿ ಆದಷ್ಟು ಘಟನೆಗಳ ವಿಡಿಯೋಗಳನ್ನು ತೋರಿಸಿಯೇ ಜಾಗೃತಿ ಮೂಡಿಸಲಾಗುತ್ತಿದೆ. ಯುವ ಸಮುದಾಯ ದೇಶದ ಆಸ್ತಿಯಾಗಿದ್ದು, ಒಂದು ತಪ್ಪು, ಕೆಲವೇ ಕ್ಷಣಗಳ ದುಡುಕುತನ ಜೀವನ ಪರ್ಯಂತ ವೈಯಕ್ತಿಕವಾಗಿ, ಕುಟುಂಬಿಕರನ್ನು ದುಃಖದ ಮಡುವಿಗೆ ತಳ್ಳುವಂತೆ ಮಾಡುತ್ತದೆ. ಮನೆಯಿಂದಲೇ ರಸ್ತೆ ನಿಯಮ ಜಾಗೃತಿ ಮೂಡಲಿ. ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸುವ ಮೂಲಕ ನಮ್ಮ ಜೀವವನ್ನು ರಕ್ಷಿಸಬಹುದಾಗಿದೆ. ಅಪಘಾತ ನಿಯಂತ್ರಣಕ್ಕೆ ಶಾಲಾ-ಕಾಲೇಜುಗಳಲ್ಲಿ ಹೆಚ್ಚು ಹೆಚ್ಚು ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದರು.
ಯೇನೆಪೋಯ ವಿವಿಯ ಉಪಕುಲಪತಿ ಡಾ.ವಿಜಯ ಕುಮಾರ್ ಮಾತನಾಡಿ, ಕಾನೂನು ಪಾಲನೆ ಮಾಡಿದಾಗ ಅಪಘಾತಗಳು ಸಂಭವಿಸಲು ಸಾಧ್ಯವಿಲ್ಲ. ಜೀವನ ಮೌಲ್ಯಗಳನ್ನು ರೂಪಿಸಿಕೊಂಡು ನಮ್ಮಲ್ಲಿ ನಾವು ಶಿಸ್ತು ರೂಪಿಸುವ ಕೆಲಸ ಮಾಡಬೇಕು ಎಂದರು.
ವೆನ್ಲಾಕ್ ಆಸ್ಪತ್ರೆಯ ಆರ್‌ಎಂಒ ಡಾ. ಸುಧಾಕರ್ ಅವರು ಮುಂಜಾಗ್ರತಾ ಕ್ರಮಗಳ ಬಗ್ಗೆ ವಿವರ ನೀಡಿದರು.
ನಗರ ಸಂಚಾರ ಮತ್ತು ಅಪರಾಧ ವಿಭಾಗದ ಡಿಸಿಪಿ ದಿನೇಶ್ ಕುಮಾರ್ ಪ್ರಾಸ್ತಾವಿಕ ಮಾತನಾಡಿ, ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ವರ್ಷಕ್ಕೆ 600-800 ರಸ್ತೆ ಅಪಘಾತ ಪ್ರಕರಣಗಳು ದಾಖಲಾಗುತ್ತಿದ್ದು, 100-125 ಮಂದಿ ರಸ್ತೆ ಅಪಘಾತದಿಂದ ಸಾವಿಗೀಡಾಗುತ್ತಿದ್ದಾರೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ರಸ್ತೆ ಸುರಕ್ಷತಾ ಸಪ್ತಾಹ ಆಚರಿಸಲಾಗುತ್ತಿದೆ ಎಂದರು.ಈ ಸಂದರ್ಭ ರಸ್ತೆ ಸುರಕ್ಷತೆ ಬಗೆಗಿನ ಪೋಸ್ಟರ್‌ನ್ನು ಬಿಡುಗಡೆಗೊಳಿಸಲಾಯಿತು.
ಸಿಎಆರ್ ಘಟಕ ಉಪ ಪೊಲೀಸ್ ಆಯುಕ್ತ ಉಮೇಶ್, ಹಿರಿಯ ಸಾರಿಗೆ ಅಧಿಕಾರಿ ಶ್ರೀಧರ್ ಕೆ. ಮಲ್ಲಾಡ್, ಭಾರತ್ ಸ್ಕೌಡ್-ಗೈಡ್ಸ್ ಜಿಲ್ಲಾ ಕಾರ್ಯದರ್ಶಿ ಎಂ.ಜಿ. ಕಜೆ ಇದ್ದರು.
ಟ್ರಾಫಿಕ್ ವಾರ್ಡನ್‌ಗಳಾದ ಫ್ರಾನ್ಸಿಸ್ ಮ್ಯಾಕ್ಸಿಂ ಮೋರಸ್, ರೋಷನ್ ರಾಯ್ ಸಿಕ್ವೇರಾ, ರಮೇಶ್ ಕಾವೂರು, ಸಂಚಾರ ಠಾಣೆಯ ಇನ್‌ಸ್ಪೆಕ್ಟರ್‌ಗಳಾದ ಗೋಪಾಲಕೃಷ್ಣ ಭಟ್, ಮೊಹಮ್ಮದ್ ಶರೀಫ್, ರಮೇಶ್ ಹಾನಾಪುರ್, ಕೃಷ್ಣಾನಂದ ನಾಯ್ಕ್ ಇವರನ್ನು ಸನ್ಮಾನಿಸಲಾಯಿತು. ಸಂಚಾರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತೆ ಗೀತಾ ಕುಲಕರ್ಣಿ ಅವರು ಅಪಘಾತಗಳ ಕುರಿತು ವಿಡಿಯೋ ಸಹಿತ ಜಾಗೃತಿ ಮೂಡಿಸಿದರು.
ಆರ್.ಜೆ. ಪ್ರಸನ್ನ ಮತ್ತು ಅಕ್ಷತಾ ಶೆಣೈ ನಿರೂಪಿಸಿದರು. ಸೈಂಟ್ ಆಗ್ನೇಸ್ ಹಾಗೂ ಚೇತನಾ ವಿಶೇಷ ಶಾಲಾ ವಿದ್ಯಾರ್ಥಿಗಳನ್ನು ಈ ಸಂದರ್ಭ ಗೌರವಿಸಲಾಯಿತು. ನಗರದ ವಿವಿಧ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳು
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.