ಹಿರಿಯ ನಾಗರಿಕರ ಮಾರ್ಗದರ್ಶನದಿಂದ ದೇಶದ ಸುಭದ್ರತೆ: ಎ.ಎಂ.ವರ್ಗೀಸ್

KannadaprabhaNewsNetwork |  
Published : Jan 15, 2024, 01:46 AM IST
ಹಿರಿಯ ನಾಗರೀಕರ ಮಾರ್ಗದರ್ಶನದಿಂದ ದೇಶದ ಸುಭದ್ರತೆಃ ಎ.ಎಂ.ವರ್ಗೀಸ್  | Kannada Prabha

ಸಾರಾಂಶ

ವಿಕಸನ ಸಂಸ್ಥೆ ಯಿಂದ 35ನೇ ವಾರ್ಷಿಕೋತ್ಸವ ಅಂಗವಾಗಿ ವಿಕಸನ ಸಂಸ್ಥೆ ಮಾನವ ಅಭಿವೃದ್ದಿ ಸಂಪನ್ಮೂಲ ಕೇಂದ್ರದಲ್ಲಿ ಏರ್ಪಡಿಸಿದ್ದ ಹಿರಿಯ ನಾಗರಿಕರ ಸಬಲೀಕರಣ ಕಾರ್ಯಕ್ರಮದಲ್ಲಿ ವಿಕಸನ ಸಂಸ್ಥೆ ಅಧ್ಯಕ್ಷ ಎ.ಎಂ.ವರ್ಗೀಸ್ ಕ್ಲೀಟಸ್ ಮಾತನಾಡಿ ಹಿರಿಯ ನಾರೀಕರ ಮಾರ್ಗದರ್ಶನದಿಂದ ದೇಶದ ಸುಭದ್ರತೆ ಹಾಗೂ ಅವರ ಸಂಘಟನೆ ಅಗತ್ಯವಾಗಿದೆ ಎಂದರು.

ಕನ್ನಡಪ್ರಭ ವಾರ್ತೆ, ತರೀಕೆರೆ

ಹಿರಿಯ ನಾರೀಕರ ಮಾರ್ಗದರ್ಶನದಿಂದ ದೇಶದ ಸುಭದ್ರತೆ ಹಾಗೂ ಅವರ ಸಂಘಟನೆ ಅಗತ್ಯವಾಗಿದೆ ಎಂದು ಪಟ್ಟಣದ ವಿಕಸನ ಸಂಸ್ಥೆ ಅಧ್ಯಕ್ಷ ಎ.ಎಂ.ವರ್ಗೀಸ್ ಕ್ಲೀಟಸ್ ಹೇಳಿದ್ದಾರೆ.

ವಿಕಸನ ಸಂಸ್ಥೆ ಯಿಂದ 35ನೇ ವಾರ್ಷಿಕೋತ್ಸವ ಅಂಗವಾಗಿ ವಿಕಸನ ಸಂಸ್ಥೆ ಮಾನವ ಅಭಿವೃದ್ದಿ ಸಂಪನ್ಮೂಲ ಕೇಂದ್ರದಲ್ಲಿ ಏರ್ಪಡಿಸಿದ್ದ ಹಿರಿಯ ನಾಗರಿಕರ ಸಬಲೀಕರಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಹಿರಿಯ ನಾಗರಿಕರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳ ಮಾಹಿತಿ ಕೊಡುವ ಜೊತೆಗೆ ಅವುಗಳನ್ನು ಕೊಡಿಸುವಂತಹ ಸೇವೆ ಮಾಡುವುದು ಅಗತ್ಯ ಮತ್ತು ಹಿರಿಯ ನಾಗರಿಕರ ಸಂಘಟನೆ ಅಥವಾ ಒಕ್ಕೂಟ ಆಗುವುದು ಒಳ್ಳೆಯದು, ಈ ಒಕ್ಕೂಟದ ಮೂಲಕ ಸರ್ಕಾರದ ಯೋಜನೆ ಪಡೆಯುವುದು, ಹಿರಿಯ ನಾಗರಿಕರಲ್ಲಿ ಮಾನಸಿಕ ಸ್ಥ್ಯರ್ಯ ನೀಡಿ ಅವರಿಗೆ ಅಗಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಮಾತ್ರ ಸಾಧ್ಯವಾಗುತ್ತದೆ ಎಂದು ಹೇಳಿದರು.

ತಾಲೂಕು ಪಂಚಾಯಿತಿ ನಿವೃತ್ತ ಕಾರ್ಯನಿರ್ವಹಣಾಧಿಕಾರಿ ವಿಶಾಲಾಕ್ಷಮ್ಮ ಮಾತನಾಡಿ ಹಿರಿಯ ನಾಗರಿಕರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳು ಮತ್ತು ಅವರ ಸಂಘಟನೆ ಮಾಡುವುದು ಅಗತ್ಯವಾಗಿದೆ. ಅವರ ಕುಟುಂಬಗಳಲ್ಲಿ ಸಿಗುವ ಪ್ರೀತಿ ವಾತ್ಸಲ್ಯ ಅವರಿಗೆ ಸಿಗಬೇಕು ಮತ್ತು ಹಿರಿಯ ನಾಗರಿಕರೆಲ್ಲರೂ ಒಟ್ಟಾಗಿ ಸೇರಿ ಕೆಲಸ ಮಾಡಬೇಕು ಎಂದು ತಿಳಿಸಿದರು.

ವಿಕಸನ ಸಂಸ್ಥೆ ಸಂಯೋಜಕ ಶ್ರೀನಿವಾಸ್ ಮಾತನಾಡಿ ಹಿರಿಯ ನಾಗರಿಕರಿಗೆ ಕಾರ್ಡು ಪಡೆಯುವ ಬಗ್ಗೆ, ವೃದ್ದಾಪ್ಯ ವೇತನ, ಸಂಧ್ಯಾ ಸುರಕ್ಷಾ ಯೋಜನೆ ಮತ್ತು ಆರೋಗ್ಯ ಇಲಾಖೆಯಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.

ಬೆಂಗಳೂರು ಕೇರ್ ವಿಮಾ ಸಂಸ್ಥೆ ಗುರುಪ್ರಸಾದ್, ಗಿರೀಶ್, ಶಿವಮೊಗ್ಗದ ಗ್ರೀನ್ ಪ್ಯಾನೆಟ್ ಬಯೋ ಪ್ರಾಡೆಕ್ಟ್ ಸಂಸ್ಥೆ ಶ್ರೀಧರ್, ಎಸ್.ಟಿ.ಸಮುದಾಯದ ಮಾಜಿ ಜಿಲ್ಲಾ ಸದಸ್ಯ ರಾಮಪ್ಪ, ನಿವೃತ್ತ ಶಿಕ್ಷಕರಾದ ಮಂಜುನಾಥ್ ಅವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.ವಿಕಸನ ಸಂಸ್ಥೆ ಸಿಬ್ಬಂದಿ ವರ್ಗದವರಿಂದ ಸಂಸ್ಥೆ ಅಧ್ಯಕ್ಷ ಎ.ಎಂ.ವರ್ಗೀಸ್ ಕ್ಲೀಟಸ್ ಮತ್ತು ಲಿಲ್ಲಿ ವರ್ಗೀಸ್ ಅವರನ್ನು ಸನ್ಮಾನಿಸಲಾಯಿತು.

ವಿಕಸನ ಸೆಂಸ್ಥೆ ಮುಕುಂದ್ ಇದ್ದರು.14ಕೆಟಿಆರ್.ಕೆ.09ಃ

ತರೀಕೆರೆಯಲ್ಲಿ ವಿಕಸನ ಸಂಸ್ಥೆಯಿಂದ ಏರ್ಪಡಿಸಿದ್ದ ಹಿರಿಯ ನಾಗರಿಕರ ಸಬಲೀಕರಣ ಕಾರ್ಯಕ್ರಮದಲ್ಲಿ ವಿಕಸನ ಸಂಸ್ಥೆ ಅಧ್ಯಕ್ಷ ಎ.ಎಂ.ವರ್ಗೀಸ್ ಕ್ಲೀಟಸ್, ತಾಪಂ ನಿವೃತ್ತ ಇ.ಒ.ವಿಶಾಲಾಕ್ಷಮ್ಮ ಮತ್ತಿತರರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾ.11ರಿಂದ ಸರ್ಕಾರಿ ಆಸ್ಪತ್ರೆ ಒಪಿಡಿ ಬಂದ್‌ : ಎಚ್ಚರ
ಬೆಂಗಳೂರಲ್ಲಿ ಏಷ್ಯಾದ 2ನೇ ದೊಡ್ಡ 5 ಎಕರೆ ಅಮೆಜಾನ್‌ ಕಚೇರಿ : 7000 ನೌಕರರಿಗೆ ಸ್ಥಳಾವಕಾಶ