ಕನ್ನಡಪ್ರಭ ವಾರ್ತೆ ವಿಜಯಪುರ: ನಗರ ಸಿದ್ದೇಶ್ವರ ದೇವಸ್ಥಾನ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಸಿದ್ದೇಶ್ವರ ಸಂಸ್ಥೆಯ ಶಿವಾನುಭವ ಸಮುದಾಯ ಭವನ ವಾಸ್ತು ಶಾಂತಿ ಕಾರ್ಯಕ್ರಮ ಸಂಸ್ಥೆ ಅಧ್ಯಕ್ಷ ಬಸನಗೌಡ ಪಾಟೀಲ ಯತ್ನಾಳ ಅವರ ನೇತೃತ್ವದಲ್ಲಿ ಭಾನುವಾರ ನಡೆಯಿತು.

ಹಿಂದೂಗಳ ಹೊಸ ವರ್ಷ ಯುಗಾದಿ ಪಾಡ್ಯ ಅಂಗವಾಗಿ ಬಸನಗೌಡ ಪಾಟೀಲ ಯತ್ನಾಳರು ಮತ್ತು ಪತ್ನಿ ಶೈಲಜಾ ಪಾಟೀಲ ಸಿದ್ದೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಗೋ ಪೂಜೆ ಸಲ್ಲಿಸಿ, ಸಿಹಿ ತಿನಿಸಿ ಶಿವಾನುಭವ ಸಮುದಾಯ ಭವನ ಪ್ರವೇಶಿಸಿದರು. ವಾಸ್ತು ಶಾಂತಿ ಅಂಗವಾಗಿ ಹೋಮ ಹವನ, ನವಗ್ರಹ ಪೂಜೆ, ಅಷ್ಟ ದಿಕ್ಪಾಲಕ, ಮಹಾಲಕ್ಷ್ಮೀ ಪೂಜೆ ನೆರವೇರಿಸಲಾಯಿತು. ಇದೇ ವೇಳೆ 500ಕ್ಕೂ ಹೆಚ್ಚು ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಿತು. ಮಾಜಿ ಸಚಿವ ದಿ.ಬಿ.ಎಂ.ಪಾಟೀಲ ಹೆಸರಿನ ಪ್ರಸಾದ ನಿಲಯ, ಮಾಜಿ ಶಾಸಕ ದಿ.ಆರ್.ಆರ್.ಕಲ್ಲೂರ ಹೆಸರಿನ ಅಕ್ಷತಾ ಮಂಟಪದಲ್ಲಿಯೂ ಪೂಜೆ ನಡೆಸಲಾಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.