ಕನ್ನಡಪ್ರಭ ವಾರ್ತೆ ಕೆ.ಆರ್. ನಗರ
ಆಡಳಿತ ಮಂಡಳಿಯ ನಿರ್ದೇಶಕರ 13 ಸ್ಥಾನಗಳಿಗೆ ಜ. 31ರಂದು ನಡೆದ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸಿದ 13 ಮಂದಿಯೂ ಅವಿರೋಧವಾಗಿ ಆಯ್ಕೆಯಾದರು. ಗುರುವಾರ ಪಟ್ಟಣದ ಬ್ಯಾಂಕಿನ ಆಡಳಿತ ಕಚೇರಿಯಲ್ಲಿ ವರಿಷ್ಠರ ಆಯ್ಕೆಯನ್ನು ನಿಗದಿ ಪಡಿಸಿದ್ದು ಅಧ್ಯಕ್ಷ ಸ್ಥಾನಕ್ಕೆ ಕೆ.ಎನ್. ಬಸಂತ್ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಎಸ್. ಮಹದೇವಯ್ಯ ಹೊರತು ಪಡಿಸಿ ಬೇರಾರು ಸ್ಪರ್ಧಿಸದ ಹಿನ್ನೆಲೆ ಅವರು ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿ ಮೈಸೂರಿನ ಸಹಕಾರ ಸಂಘಗಳ ಜಂಟಿ ನಿಬಂಧಕರ ಕಚೇರಿಯ ಎಂ.ಎನ್. ಸೋಮಶೇಖರ್ ಪ್ರಕಟಿಸಿದರು.
ಚುನಾವಣಾ ಸಭೆಯಲ್ಲಿ ನಿರ್ದೇಶಕರಾದ ಎಚ್.ಎಸ್. ಲೋಕೇಶ್, ಕೆ.ಎನ್. ರಮೇಶರಾವ್ ಕದಂ, ಅಶೋಕ ಕುಮಾರ್, ಸಿ.ಪಿ.ಎಸ್.ಲೋಕೇಶ್, ಎಚ್.ಟಿ. ಗೋಪಾಲೇಗೌಡ, ಜೆ. ವೆಂಕಟೇಶ್, ಡಾ.ಎಂ.ಪಿ. ಸುಮತಿ, ವೀಣಾ ಕುಮಾರ್, ಮರಿಲಿಂಗಾಚಾರ್, ಚೇತನ, ಎಲ್. ರಂಗನಾಥ್, ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಸಿ. ಸುರೇಶ್, ವ್ಯವಸ್ಥಾಪಕ ಎಂ.ಪಿ. ಸುಹಾಸ್ ಗೌಡ ಇದ್ದರು.ಒಂದು ಸಾವಿರ ಕೋಟಿಗೆ ಬೆಳೆಸಲು ಶ್ರಮಿಸುತ್ತೇನೆ
ಬ್ಯಾಂಕ್‌ನ್ನು ಬೇರೆ ಬೇರೆ ತಾಲೂಕುಗಳಿಗೂ ವಿಸ್ತರಿಸುವ ಗುರಿ ಹೊಂದಲಾಗಿದೆ, ಅಲ್ಲದೆ ಎಟಿಎಂ ಗಳನ್ನು ಹೆಚ್ಚಿಸುವುದು ಸ್ವಂತ ಆಪ್ ಅಭಿವೃದ್ಧಿ ಪಡಿಸಿ ಗ್ರಾಹಕ ಸ್ನೇಹಿಯಾಗುವುದು, ಸಣ್ಣ ಪುಟ್ಟ ವ್ಯಾಪಾರಿಗಳು, ಸಣ್ಣ ಉದ್ಯಮಿಗಳಿಗೆ ಸಾಲ ಸೌಲಭ್ಯಗಳನ್ನು ನೀಡಿ ಆರ್ಥಿಕ ಅಭಿವೃದ್ಧಿಗೆ ಶ್ರಮಿಸುವ ಮೂಲಕ ಬ್ಯಾಂಕಿನ ದ್ಯೇಯೋದ್ದೇಶಗಳನ್ನು ಈಡೇರಿಸಲಾಗುವುದು ಎಂದು ಭರವಸೆ ನೀಡಿದರು.ನೂತನ ಆಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಬ್ಯಾಂಕಿನ ಆಡಳಿತ ಮಂಡಳಿಯ ನಿರ್ದೇಶಕರು, ಸಿಬ್ಬಂದಿಗಳು, ಸ್ನೇಹಿತರು ಹಾಗೂ ಅಭಿಮಾನಿಗಳು ಅಭಿನಂದಿಸಿದರು.