ಕನ್ನಡಪ್ರಭ ವಾರ್ತೆ ಶೃಂಗೇರಿ
ಶೃಂಗೇರಿ ಬುಕುಡಿಬೈಲು ಸಮೀಪ ಹೆಮ್ಮಿಗೆ ಚಂದ್ರಕಾಂತ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರು ಪಡಿಸಲಾಗಿತ್ತು. ನ್ಯಾಯಾಧೀಶ ಜೀತು.ಆರ್.ಎಸ್ ವಿಚಾರಣೆ ನಡೆಸಿ ಪ್ರಕರಣವನ್ನು ಜುಲೈ 16 ಕ್ಕೆ ಮುಂದೂಡಿದರು. ಆರೋಪಿ ಪರ ವಕೀಲ ವಿ.ಆರ್.ನಟಶೇಖರ್ ಹಾಜರಿದ್ದರು.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಬುಕುಡಿಬೈಲು ಸಮೀಪದ ಬಿ.ಜಿ.ಕೃಷ್ಣಮೂರ್ತಿ ವಿರುದ್ದ ಕರ್ನಾಟಕ, ಕೇರಳ, ತಮಿಳುನಾಡು ರಾಜ್ಯಗಳಲ್ಲಿ ಒಟ್ಟು 53 ಪ್ರಕರಣಗಳಿದ್ದು, ಶೃಂಗೇರಿ ನ್ಯಾಯಾಲಯದಲ್ಲಿ 3 ಪ್ರಕರಣಗಳು ಇವೆ. ಚಿಕ್ಕಮಗಳೂರು, ಉಡುಪಿ, ಶಿವಮೊಗ್ಗ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ನಡೆದ ಹಲವು ನಕ್ಸಲ್ ಚಟುವಟಿಕೆಗಳಲ್ಲಿ ಕೃಷ್ಣಮೂರ್ತಿ ವಿರುದ್ಧ ಪ್ರಕರಣಗಳು ದಾಖಲಾಗಿವೆ. 2021 ರ ನವೆಂಬರ್ ನಲ್ಲಿ ಕೇರಳ ಪೊಲೀಸರು ವಯನಾಡು ಜಿಲ್ಲೆಯಲ್ಲಿ ಬಂಧಿಸಿದ್ದರು. ಕುಟುಂಬದವರೊಡನೆ ಭೇಟಿ: ತಾಯಿ ಹಾಗೂ ಕುಟುಂಬದವರನ್ನು ಭೇಟಿ ಮಾಡಿ ಮಾತನಾಡಲು ನ್ಯಾಯಾಧೀಶರ ಅನುಮತಿ ಪಡೆದ ಅವರು ನ್ಯಾಯಾಲಯದ ಕಕ್ಷಿಕಾರರ ಕೊಠಡಿಯಲ್ಲಿ ಕೆಲ ಹೊತ್ತು ತಾಯಿ ಹಾಗೂ ಸಹೋದರಿಯರು, ಕುಟುಂಬಸ್ಥರೊಡನೆ ಮಾತುಕತೆ ನಡೆಸಿದರು.ತಾಯಿಯೊಡನೆ ಭೋಜನ ಮಾಡಿದ ನಂತರ ಮತ್ತೆ ಬಿಗಿ ಭದ್ರತೆ ನಡುವೆ ಕೇರಳದ ವಿಯೂರ್ ಜೈಲಿಗೆ ಕರೆದೊಯ್ಯಲಾಯಿತು.3 ಶ್ರೀ ಚಿತ್ರ 1-ಶೃಂಗೇರಿ ನ್ಯಾಯಾಲಯಕ್ಕೆ ಶುಕ್ರವಾರ ನಕ್ಸಲ್ ನಾಯಕ ಬಿ.ಜಿ,ಕೃಷ್ಣಮೂರ್ತಿ ಹಾಜರು