ನಕ್ಸಲ್ ಮುಂಡಗಾರು ಲತಾ ಪ್ರಕರಣ: ಗುರುತು ಪತ್ತೆ ಪ್ರಕ್ರಿಯೆ

KannadaprabhaNewsNetwork |  
Published : Nov 05, 2026, 02:45 AM IST
ಬಳ್ಳಾರಿ ನಗರದಲ್ಲಿ ಲಾರಿಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಆಗ್ರಹಿಸಿ ಸಾರ್ವಜನಿಕರು ಎಪಿಎಂಸಿ ವೃತ್ತದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಮಾಜಿ ಸಚಿವ ಬಿ.ಶ್ರೀರಾಮುಲು, ಮಾಜಿ ಶಾಸಕ ಜಿ.ಸೋಮಶೇಖರರೆಡ್ಡಿ ಭಾಗವಹಿಸಿದ್ದರು.  | Kannada Prabha

ಸಾರಾಂಶ

2018ರ ಜನವರಿಯಲ್ಲಿ ನಕ್ಸಲ್ ತಂಡವೊಂದು ಶಿರಾಡಿ ಗ್ರಾಮದ ಮಿತ್ತಮಜಲು ಎಂಬಲ್ಲಿ ಮನೆಗೆ ಭೇಟಿ ನೀಡಿ ಆಹಾರ ಧಾನ್ಯಗಳನ್ನು ಕೇಳಿ ಜನತೆಯಲ್ಲಿ ಭೀತಿಯನ್ನು ಮೂಡಿಸಿದ್ದ ಪ್ರಕರಣದಲ್ಲಿ ಆರೋಪಿಯಾಗಿದ್ದ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಮುಂಡಗಾರು ನಿವಾಸಿ ಲತಾ ಎಂಬಾಕೆ ಪ್ರಕರಣದ ವಿಚಾರಣೆ ಸಲುವಾಗಿ ಉಪ್ಪಿನಂಗಡಿ ಪೊಲೀಸ್ ವಶದಲ್ಲಿದ್ದು, ನ. 4ರಂದು ಘಟನೆಯ ಸಾಕ್ಷಿದಾರರಿಂದ ಗುರುತು ಪತ್ತೆ ಪ್ರಕ್ರಿಯೆ ನಡೆಯಿತು.

ಉಪ್ಪಿನಂಗಡಿ: 2018ರ ಜನವರಿಯಲ್ಲಿ ನಕ್ಸಲ್ ತಂಡವೊಂದು ಶಿರಾಡಿ ಗ್ರಾಮದ ಮಿತ್ತಮಜಲು ಎಂಬಲ್ಲಿ ಮನೆಗೆ ಭೇಟಿ ನೀಡಿ ಆಹಾರ ಧಾನ್ಯಗಳನ್ನು ಕೇಳಿ ಜನತೆಯಲ್ಲಿ ಭೀತಿಯನ್ನು ಮೂಡಿಸಿದ್ದ ಪ್ರಕರಣದಲ್ಲಿ ಆರೋಪಿಯಾಗಿದ್ದ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಮುಂಡಗಾರು ನಿವಾಸಿ ಲತಾ ಎಂಬಾಕೆ ಪ್ರಕರಣದ ವಿಚಾರಣೆ ಸಲುವಾಗಿ ಉಪ್ಪಿನಂಗಡಿ ಪೊಲೀಸ್ ವಶದಲ್ಲಿದ್ದು, ನ. 4ರಂದು ಘಟನೆಯ ಸಾಕ್ಷಿದಾರರಿಂದ ಗುರುತು ಪತ್ತೆ ಪ್ರಕ್ರಿಯೆ ನಡೆಯಿತು.ಬೆಂಗಳೂರು ಕಾರಾಗೃಹದಲ್ಲಿದ್ದ ಲತಾಳನ್ನು ಮಂಗಳವಾರ ಕಡಬ ಸಂಚಾರಿ ನ್ಯಾಯಾಲಯದ ಮೂಲಕ ಅಂದಿನ ಘಟನಾವಳಿಯ ಮಹಜರು ಸಲುವಾಗಿ ಉಪ್ಪಿನಂಗಡಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. 2018ರಲ್ಲಿ ಶಿರಾಡಿ ಗ್ರಾಮದ ಮಿತ್ತಮಜಲು ಎಂಬಲ್ಲಿ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಲತಾಳನ್ನು ಗುರುತಿಸಿದ್ದ 3 ಮಂದಿ ಸಾಕ್ಷಿದಾರರನ್ನು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ಕರೆಸಿ ಅವರಿಂದ ಆರೋಪಿತೆಯ ಗುರುತು ಪತ್ತೆ ಹಚ್ಚಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶಿರಾಡಿ ಗ್ರಾಮದ ಮಿತ್ತಮಜಲು ಎಂಬಲ್ಲಿ ಕಾಡಿನ ಮೂಲಕ ಬಂದಂತಹ ಸಶಸ್ತ್ರಧಾರಿ ನಕ್ಸಲ್ ಗುಂಪು ಅಲ್ಲಿನ ನಿವಾಸಿಯೋರ್ವರ ಮನೆಯ ಬಾಗಿಲು ಬಡಿದು ಮನೆಯಲ್ಲಿದ್ದ ಆಹಾರ ಪದಾರ್ಥ ಸೇವಿಸಿ, ಕಾಡಿನಲ್ಲಿ ಬಳಕೆಗಾಗಿ ಅವರ ಮನೆಯಿಂದ ಆಹಾರ ಧಾನ್ಯಗಳನ್ನು ಕೊಂಡೊಯ್ದಿದ್ದರು. ಈ ಪ್ರಕರಣ ಪರಿಸರದಲ್ಲಿ ಜನತೆಗೆ ಭೀತಿಯನ್ನು ಮೂಡಿಸಿತ್ತು. ಮಾತ್ರವಲ್ಲದೆ ಘಟನಾ ಸ್ಥಳಕ್ಕೆ ನಕ್ಸಲ್ ನಿಗ್ರಹ ಪಡೆ ಆಗಮಿಸಿ ಕೂಂಬಿಂಗ್ ಕಾರ್ಯಾಚರಣೆಯನ್ನೂ ಕೈಗೊಂಡಿತ್ತು. ಘಟನೆಗೆ ಸಂಬಂಧಿಸಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿತ್ತು. ಈ ಮಧ್ಯೆ ನಕ್ಸಲ್ ವಿರೋಧಿ ಕಾರ್ಯಾಚರಣೆಯನ್ನು ಬಿರುಸುಗೊಳಿಸಿ ದೇಶದ ಹಲವು ಕಡೆಯಲ್ಲಿ ನಕ್ಸಲ್ ನಾಯಕರನ್ನು ಸಂಹಾರ ಮಾಡಿದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯದಲ್ಲಿ ಹಲವು ನಕ್ಸಲರು ರಾಜ್ಯ ಸರ್ಕಾರಕ್ಕೆ ಶರಣಾಗಿದ್ದರು. ಅಂತವರಲ್ಲಿ ಲತಾ ಶಿರಾಡಿ ಗ್ರಾಮದಲ್ಲಿ ನಕ್ಸಲರು ಕಾಣಿಸಿಕೊಂಡ ಪ್ರಕರಣದಲ್ಲಿ ಪೊಲೀಸ್ ತನಿಖೆಗೆ ಬೇಕಾಗಿದ್ದು, ಈ ಕಾರಣಕ್ಕೆ ಆಕೆಯನ್ನು ಉಪ್ಪಿನಂಗಡಿ ಪೊಲೀಸರು ಕಸ್ಟಡಿಗೆ ಪಡೆದುಕೊಂಡು ಅಂದಿನ ಘಟನೆಗೆ ಸಂಬಂಧಿಸಿ ಮಹಜರು ಪ್ರಕ್ರಿಯೆಯನ್ನು ನಡೆಸಿದರು.

ಇಂದು ನ್ಯಾಯಾಲಯಕ್ಕೆ ಹಾಜರು:

ಪೊಲೀಸ್ ವಶದಲ್ಲಿರುವ ಲತಾಳನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಮತ್ತು ಗುರುತು ಪತ್ತೆ ಪ್ರಕ್ರಿಯೆ ಈಗಾಗಲೇ ನಡೆದಿರುತ್ತದೆ. ಮಹಜರು ಪ್ರಕ್ರಿಯೆ ನಡೆಸಿ ನ. 5ರಂದು ಗುರುವಾರ ಆಕೆಯನ್ನು ಪುತ್ತೂರು ನ್ಯಾಯಾಲಯಕ್ಕೆ ಒಪ್ಪಿಸಲಾಗುವುದು ಎಂದು ಉಪ್ಪಿನಂಗಡಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸುತೇಶ್ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಗಳನ್ನು ಲವ್‌ ಮಾಡಿದ್ದಕ್ಕೆ ಕೆಲಸಗಾರನ ಹತ್ಯೆ
ಡೇಟಿಂಗ್‌ ಆ್ಯಪಲ್ಲಿ ಪರಿಚಯವಾದಯುವಕನ ದರೋಡೆ: ನಾಲ್ವರ ಸೆರೆ