3.5 ಕೋಟಿ ವೆಚ್ಚದ ಗುರುಭವನಕ್ಕೆ ಅಗತ್ಯ ಅನುದಾನ: ಆನಂದ್‌

KannadaprabhaNewsNetwork |  
Published : Dec 02, 2023, 12:45 AM IST
1ಕೆಕೆೆೆೆೆಡಿಯು1 | Kannada Prabha

ಸಾರಾಂಶ

3.5 ಕೋಟಿ ವೆಚ್ಚದ ಗುರುಭವನಕ್ಕೆ ಅಗತ್ಯ ಅನುದಾನ: ಆನಂದ್‌

ಕಡೂರು ಗುರುಭವನ ನಿರ್ಮಾಣಕ್ಕೆ ಭೂಮಿ ಪೂಜೆಕನ್ನಡಪ್ರಭ ವಾರ್ತೆ, ಕಡೂರು

ಪಟ್ಟಣದಲ್ಲಿ 3.5 ಕೋಟಿ ರು. ವೆಚ್ಚದ ಗುರುಭವನ ನಿಮಾಣಕ್ಕೆ ಸರ್ಕಾರದಿಂದ ಅಗತ್ಯ ಅನುದಾನ ತರುವುದಾಗಿ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.

ಶಾಸಕರ ಸರ್ಕಾರಿ ಮಾದರಿ ಶಾಲೆ ಮುಂಭಾಗದಲ್ಲಿ ಶುಕ್ರವಾರ ಶಿಕ್ಷಣ ಇಲಾಖೆ ,ಶಿಕ್ಷಕರ ಸಂಘಟನೆಗಳ ಸಹಯೋಗದಲ್ಲಿ ಗುರುಭವನ ನಿಮಾಣಕ್ಕೆ ಚಾಲನೆ, ಸರ್ಕಾರಿ ಶಿಕ್ಷಕ ನೌಕರರ ಸಹಕಾರ ಸಂಘ ಉದ್ಘಾಟನೆ ಮತ್ತು ಶಿಕ್ಷಕರ ಭವನದ ಕಟ್ಟಡ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬೀರೂರು ಪಟ್ಟಣದಲ್ಲಿ ಉತ್ತಮ ಗುರುಭವನ ನಿರ್ಮಾಣವಾಗಿದ್ದು, ಅದರಂತೆ ಕಡೂರು ವಲಯದ ಶಿಕ್ಷಕರ ಬಹುದಿನದ ಕನಸಾದ ಗುರುಭವನ ನಿಮಾಣಕ್ಕೆ ನನ್ನ ಅ‍ವಧಿಯಲ್ಲಿ ಯೋಗ ಕೂಡಿ ಬಂದಿದೆ. ಭೂಮಿ ಪೂಜೆ ಕಾರ್ಯಕ್ಕೆ ಶಿಕ್ಷಣ ಸಚಿವರನ್ನು ಆಹ್ವಾನಿಸಲಾಗಿತ್ತು. ಅದರೆ ಸಚಿವರು ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ತೆರಳಿದ ಕಾರಣ ಬಂದಿಲ್ಲ. ಬರುವ ದಿನಗಳಲ್ಲಿ ಸಚಿವರನ್ನು ಕರೆಸಿ ಶಿಕ್ಷಕರಿಗೆ ಒಂದು ಕಾರ್ಯಾಗಾರ ಮಾಡಲು ಸೂಚಿಸಿದ್ದು, ಗುರುಭವನ ನಿರ್ಮಾಣಕ್ಕೆ ಉತ್ಸಾಹದಿಂದ ಭೂಮಿ ಪೂಜೆ ನೆರವೇರಿಸುತ್ತಿದ್ದೇನೆ ಎಂದರು.

3.50 ಕೋಟಿ ರು. ವೆಚ್ಚ ಗುರುಭವನ ಕಾಮಗಾರಿಗೆ ಅಗತ್ಯವಿದೆ ಎಂಬ ಮಾಹಿತಿಯಿದ್ದು, ಸುಂದರ ಹಾಗೂ ಆಧುನಿಕ ಕಟ್ಟಡ ನಿರ್ಮಿಸಲು ಸಲಹೆ ನೀಡಿದ್ದಾಗಿ ತಿಳಿಸಿದರು.

ಶಿಕ್ಷಣ ಇಲಾಖೆ ಸರ್ಕಾರಿ ನೌಕರರ ಸಹಕಾರ ಸಂಘ.ಕಾರ್ಯಾರಂಭ ಮಾಡಲಿದ್ದು ಇದರಿಂದ ಶಿಕ್ಷಕರ ಆರ್ಥಿಕ ಬೆಳವಣಿಗೆಗೆ ಸಹಕಾರವಾಗಲಿದೆ. ಶಿಕ್ಷಕ ಎಂ.ಬಿ.ಮಂಜುನಾಥ್ ಅಧ್ಯಕ್ಷತೆಯಲ್ಲಿ ನಿರ್ದೇಶಕರ ಸಹಕಾರದಲ್ಲಿ ಆಡಳಿತ ನಡೆಯಲಿದ್ದು ಆಡಳಿತ ಮಂಡಳಿ ಉತ್ತಮ ಸೇವೆ ನೀಡಲಿ ಎಂದರು.

ಕ್ಷೇತ್ರದಲ್ಲಿನ ಶಿಕ್ಷಕರ ಯಾವುದೇ ಸಮಸ್ಯೆಗಳಿದ್ದರೂ ಬಗೆಹರಿಸುವ ಪ್ರಯತ್ನ ಮಾಡುವುದಾಗಿ ಹೇಳಿದ ಅವರು ಅನೇಕ ಭಾಗಗಳಲ್ಲಿ ಶೌಚಾಲಯ ಇಲ್ಲದಿರುವುದು ಗಮನಕ್ಕೆ ಬಂದಿದೆ. ಸರ್ಕಾರ, ಸಂಘ ಸಂಸ್ಥೆಗಳ ಸಹಕಾರದಲ್ಲಿ ಶೌಚಾಲಯ ನಿರ್ಮಿಸಿಕೊಳ್ಳಿ ಎಂದು ಸೂಚನೆ ನೀಡಿದರು. ಅನೇಕ ಭಾಗಗಳಲ್ಲಿ ಶಿಕ್ಷಕರೇ ಮುಂದಾಗಿ ಸಣ್ಣ, ಪುಟ್ಟ ಸಮಸ್ಯೆ ಬಗೆಹರಿಸಿಕೊಳ್ಳುವುದು ಅಭಿನಂದನೀಯ ಎಂದರು.

ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ ಮಾಜಿ ಶಾಸಕ ಬೆಳ್ಳಿಪ್ರಕಾಶ್ ಗುರುಭವನ ನಿರ್ಮಾಣಕ್ಕೆ ಸ್ಥಳ ನೀಡಲು ಶ್ರಮಿಸಿದ್ದರು, ಇಂದಿನ ಶಾಸಕ ಆನಂದ್ ರವರು ಭೂಮಿಪೂಜೆ ನೆರವೇರಿಸಿ, ಭವನ ನಿರ್ಮಾಣಕ್ಕೆ ಅನುದಾನ ತೆರಲಿದ್ದಾರೆ. ನಿರ್ಮಾಣಕ್ಕೆ ಪುರಸಭೆ ಕೂಡ ಕೈಜೊಡಿಸಲಿದೆ. ಈಗಾಗಲೇ ಶಿಕ್ಷಕ ಸಂಘದ ಕಟ್ಟಡಕ್ಕೆ ಪುರಸಭೆಯಿಂದ 5 ಲಕ್ಷ ರು. ನೀಡಿದ್ದೇವೆ ಎಂದು ತಿಳಿಸಿದರು.

ಪುರಸಭಾ ಸದಸ್ಯ ತೋಟದ ಮನೆ ಮೋಹನ್ ಮಾತನಾಡಿ ಗುರುಭವನ ಸೇರಿದಂತೆ ಶಿಕ್ಷಕರ ಸಮಸ್ಯೆಗಳಿಗೆ, ಶಾಲೆಗಳಲ್ಲಿನ ಸೌಲಭ್ಯಗಳಿಗೆ ಸ್ಪಂದಿಸುವ ಶಾಸಕರು ಸಿಕ್ಕಿದ್ದಾರೆ. ಶಿಕ್ಷಕರು ಯಾವುದೇ ಸಮಸ್ಯೆ ಗಳಿದ್ದರೆ ಬಗೆಹರಿಸುವ ಕಾರ್ಯ ಮಾಡುತ್ತಾರೆ ಎಂದರು.

ಸರ್ಕಾರಿ ಶಿಕ್ಷಕ ನೌಕರರ ಸಹಕಾರಿ ಸಂಘದ ಅಧ್ಯಕ್ಷ ಎಂ.ಬಿ. ಮಂಜುನಾಥ್ , ಕ್ಷೇತ್ರ ಶಿಕ್ಷಾಣಾಧಿಕಾರಿ ಸಿದ್ದರಾಜ ನಾಯ್ಕ, ಪುರಸಭೆ ಸದಸ್ಯ ಶ್ರೀಕಾಂತ್, ಶಿಕ್ಷಕರ ಸಂಘದ ಅಧ್ಯಕ್ಷ ಲಿಂಗರಾಜು, ಸ.ಹಿ.ಪ್ರಾ . ಶಾಲಾ ಶಿಕ್ಷಕ ಸಂಘದ ಜಿಲ್ಲಾಧ್ಯಕ್ಷ ಭೈರೇಗೌಡ, ಶಿಕ್ಷಕರ ಸಂಘದ ಉಪಾಧ್ಯಕ್ಷ ಹರೀಶ್, ಪದಾಧಿಕಾರಿ ಗಳಾದ ಎಂ.ಚಂದ್ರಶೇಖರ್, ತಿಮ್ಮಯ್ಯ,ಆನಂದ್, ರೇಣುಕಮ್ಮ ನಾಗರತ್ನ, ಸೇರಿದಂತೆ ನೂರಾರು ಶಿಕ್ಷಕರು ಇದ್ದರು.ಬಾಕ್ಸ್ ಸುದ್ದಿಗೆ- ಸಕ್ರಿಯ ರಾಜಕಾರಣದಲ್ಲಿ ಶಿಕ್ಷಕರ ಪಾತ್ರ ಬಹು ಮುಖ್ಯವಾಗಿರುತ್ತದೆ ಎಂದು ಭಂಡಾರಿ ಶ್ರೀನಿವಾಸ್ ಪ್ರಸ್ತಾಪಿಸಿ ಹೇಳಿದಾಗ ಶಿಕ್ಷಕರು ಮಾಡುವಷ್ಟು ರಾಜಕಾರಣವನ್ನು ನಾವು ಮಾಡಲು ಸಾದ್ಯವಾಗುವುದಿಲ್ಲ. ತಮ್ಮಪುರಸಭಾ ಚುನಾವಣೆಯಿಂದ ಹಿಡಿದು ವಿಧಾನಸಭೆ ಚುನಾವಣೆಯಲ್ಲೂ ಶಿಕ್ಷಕರ ಪಾತ್ರವೇ ಹೆಚ್ಚಾಗಿ ಇರುತ್ತದೆ ಎಂದಾಗ,ಶಾಸಕ ಕೆ .ಎಸ್. ಆನಂದ್‌ ದನಿಗೂಡಿಸಿ ನಿಜ ಎಂದಾಗ ಶಿಕ್ಷಕರ ಮುಖದಲ್ಲಿ ನಗೆ ಮೂಡಿತು.

1ಕೆಕೆಡಿಯು1.

ಕಡೂರು ಪಟ್ಟಣದ ಶಾಸಕರ ಮಾದರಿ ಸರ್ಕಾರಿ ಶಾಲೆಯ ಮುಂಭಾಗದಲ್ಲಿ ಗುರುಭವನ ನಿರ್ಮಾಣಕ್ಕೆ ಶಾಸಕ ಕೆ.ಎಸ್.ಆನಂದ್ ಭೂಮಿ ಪೂಜೆ ನೆರವೇರಿಸಿದರು,ಪುರಸಭೆ ಮಾಜಿ ಆಧ್ಯಕ್ಷ ಭಂಡಾರಿ ಶ್ರೀನಿವಾಸ್, ಬಿಇಒ ಸಿದ್ದರಾಜನಾಯ್ಕ ಮತ್ತಿತರರು ಇದ್ದರು.

1ಕೆಕೆಡಿಯು1ಎ..

ಕಡೂರು ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಮೀಪದಲ್ಲಿ ಆರಂಭಗೊಂಡ ಸರಕಾರಿ ಶಿಕ್ಷಕ ನೌಕರರ ಸಹಕಾರಿ ಸಂಘವನ್ನು ಶಾಸಕ ಕೆ.ಎಸ್.ಆನಂದ್ ಉಧ್ಘಾಟಿಸಿದರು. ಸಂಘದ ಅಧ್ಯಕ್ಷ ಎಂ.ಬಿ.ಮಂಜುನಾಥ್, ಪುರಸಭೆ ಮಾಜಿ ಆಧ್ಯಕ್ಷ ಭಂಡಾರಿಶ್ರೀನಿವಾಸ್,ಬಿಇಒ ಸಿದ್ದರಾಜನಾಯ್ಕ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ