ಜಯಂತಿಗಳ ಆಚರಣೆಗೆ ಅಗತ್ಯ ಸಿದ್ಧತೆ ಇರಲಿ: ಎಡಿಸಿ ಹೊನಕೇರಿ

KannadaprabhaNewsNetwork |  
Published : Feb 19, 2026, 03:30 AM IST
ಬೆಳಗಾವಿ  | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆಬೆಳಗಾವಿ ಸರ್ಕಾರದ ನಿರ್ದೇಶನದಂತೆ ರೇಣುಕಾಚಾರ್ಯ ಜಯಂತಿ ಮಾ.1 ರಂದು ಹಾಗೂ ಶ್ರೀಯೋಗಿ ನಾರೇಯಣ ಯತಿಂದ್ರ ಜಯಂತಿ ಮಾ.15 ರಂದು ನಗರದ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ಆಚರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ ತಿಳಿಸಿದರು.

ಕನ್ನಡಪ್ರಭ ವಾರ್ತೆಬೆಳಗಾವಿ

ಸರ್ಕಾರದ ನಿರ್ದೇಶನದಂತೆ ರೇಣುಕಾಚಾರ್ಯ ಜಯಂತಿ ಮಾ.1 ರಂದು ಹಾಗೂ ಶ್ರೀಯೋಗಿ ನಾರೇಯಣ ಯತಿಂದ್ರ ಜಯಂತಿ ಮಾ.15 ರಂದು ನಗರದ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ಆಚರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಬುಧವಾರ ನಡೆದ ರೇಣುಕಾಚಾರ್ಯ ಜಯಂತಿ, ಯೋಗಿ ನಾರೇಯಣ ಯತೀಂದ್ರ ಜಯಂತಿ ಪೂರ್ವ ಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು. ಜಯಂತಿಗಳ ಆಚರಣೆಗೆ ಅವಶ್ಯವಿರುವ ಸಿದ್ಧತೆ ಮಾಡಿಕೊಳ್ಳಬೇಕು. ವೇದಿಕೆ ಕಾರ್ಯಕ್ರಮದಲ್ಲಿ ಉಪನ್ಯಾಸ, ಸಂಗೀತ ಕಾರ್ಯಕ್ರಮ ಸೇರಿದಂತೆ ಇನ್ನಿತರ ಅಗತ್ಯ ಸಿದ್ಧತೆ ಮುಂಚಿತವಾಗಿಯೇ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ ಮಾತನಾಡಿ, ಶ್ರೀ ರೇಣುಕಚಾರ್ಯ ಜಯಂತಿ ಹಾಗೂ ಶ್ರೀ ಯೋಗಿ ನಾರೇಯಣ ಯತೀಂದ್ರ ಜಯಂತಿ ಆಚರಣೆಗೆ ಅಗತ್ಯವಿರುವ ರೂಪರೇಷಗಳ ಕುರಿತು ವಿವರಿಸಿದರು.

ಸಭೆಯಲ್ಲಿ ಸಮಾಜದ ಮುಖಂಡರಾದ ವಿ.ಜಿ.ನಿರಲಗಿ, ಭಾರತಿ ಮಠದ, ಚಂದ್ರಶೇಖರ ಸೌಡಿ ಹಾಗೂ ಅಧಿಕಾರೇತರ ಗಣ್ಯರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಲ್ಲೆ ಖಂಡಿಸಿ ಜಿಲ್ಲಾಸ್ಪತ್ರೆ ಸ್ಪಾಫ್ ನರ್ಸ್‌ ಪ್ರತಿಭಟನೆ
ಪ್ರತಿಭೆ ಗುರುತಿಸಿದರೆ ವ್ಯಕ್ತಿತ್ವಕ್ಕೆ ವ್ಯಾಪಕ ಗೌರವ