ಕನ್ನಡಪ್ರಭ ವಾರ್ತೆ ಬೆಳಗಾವಿ
ಕೆಎಲ್ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆಯ ನೇತ್ರವೈದ್ಯ ಡಾ.ಸ್ಮಿತಾ ಪ್ರಭು ಅವರು ಅಭಿವೃದ್ಧಿ ಪಡಿಸಿದ ಐಕ್ಷಣ ಮೊಬೈಲ್ ಅಪ್ಲಿಕೇಶನ್ ಅನ್ನು ಬಿಡುಗಡೆಗೊಳಿಸಿ ಮಾತನಾಡಿ, ನರಸಮಸ್ಯೆಯಿಂದ ಬಳಲುತ್ತಿರುವ ಚಿಕ್ಕಮಕ್ಕಳು ನೇತ್ರದೋಷ ಹೊಂದಿರುತ್ತಾರೆ. ಅವರು ಸಾಮಾಜಿಕ ಭವಿಷ್ಯಕ್ಕಾಗಿ ಸಂಶೋಧನೆಗಳ ಅಗತ್ಯ ಸಾಕಷ್ಟಿದೆ. ಆದರೆ, ಅವುಗಳ ಕಾರ್ಯರೂಪಕ್ಕೆ ತರುವಲ್ಲಿ ಹಿಂದೆ ಬೀಳುತ್ತಾರೆ. ಅಲ್ಲದೇ ವೈದ್ಯಕೀಯ ದಾಖಲೆಗಳನ್ನು ಸರಿಯಾಗಿ ದಾಖಲಿಸುವುದಿಲ್ಲ. ಇದರಿಂದ ಚಿಕಿತ್ಸೆಯಲ್ಲಿ ತೊಂದರೆ ಅನುಭವಿಸಬೇಕಾಗುತ್ತದೆ. ಆದ್ದರಿಂದ ವೈದ್ಯಕೀಯ ದಾಖಲೆಗಳನ್ನು ಸರಿಯಾಗಿ ದಾಖಲಿಸಿ ಸುರಕ್ಷಿತವಾಗಿಡಿ ಎಂದು ತಿಳಿಸಿದರು.
ಈ ಮೊದಲು ಎಲ್ಲ ವೈದ್ಯಕೀಯ ಉಪಕರಣಗಳನ್ನು ವಿದೇಶದಿಂದ ತರಲಾಗುತ್ತಿತ್ತು. ಇವುಗಳ ಬೆಲೆ ಸಾಮನ್ಯವಾಗಿ ಹೆಚ್ಚು. ಇಂದು ನಮ್ಮಲ್ಲಿಯೇ ಅನೇಕ ವೈದ್ಯರು ಇಂಜಿನಿಯರಗಳಾಗಿದ್ದಾರೆ. ಅದರಂತೆ ಅವುಗಳು ಉತ್ತಮ ರೀತಿಯಿಂದ ಕಾರ್ಯನಿರ್ವಹಿಸಿದರೆ ದೇಶಾದ್ಯಂತ ಪ್ರಾಚಾರ ಮಾಡಿ ಸಾಮಾಜಕ್ಕೆ ನೆರವಾಗುವ ಕಾರ್ಯ ಮಾಡಬೇಕು ಎಂದರು.ಜೆ.ಎನ್.ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎನ್.ಎಸ್.ಮಹಾಂತಶೆಟ್ಟಿ ಮಾತನಾಡಿ, ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಮಾಡುವವರೇ ಹೆಚ್ಚಿದ್ದಾರೆ. ಆದರೆ, ನರಸಮಸ್ಯೆಯಿಂದ ಬಳಲುತ್ತಿರುವ ಚಿಕ್ಕಮಕ್ಕಳ ಕಾಳಜಿವಹಿಸಿ ಅವರ ದೃಷ್ಟಿಯನ್ನು ಮರಳಿ ತರಲು ಪ್ರಯತ್ನಿಸಬೇಕಾಗಿದೆ. ಹೆಚ್ಚಿನ ಅಪಾಯದ ಶಿಶುಗಳನ್ನು ಗುರುತಿಸಲು ಈ ಮೊಬೈಲ್ ಆ್ಯಪ್ ಸಹಾಯ ಮಾಡಲಿದೆ. ಸ್ಕಾಟಿಕಲ್ ದೃಷ್ಟಿಹೀನತೆಯ ಆರಂಭಿಕ ಪತ್ತೆ ಮತ್ತು ಆರಂಭಿಕ ಚಿಕಿತ್ಸೆಯು ಮಕ್ಕಳಿಗೆ ಪ್ರಯೋಜನವಾಗಲಿದೆ. ಮಕ್ಕಳು ಇದರ ಪ್ರಯೋಜನ ಪಡೆಯುತ್ತಾರೆ. ದೃಷ್ಟಿದೋಷವು ಮಕ್ಕಳ ಬೆಳವಣಿಗೆಗೆ ಮತ್ತಷ್ಟು ಅಡ್ಡಿಪಡಿಸುತ್ತದೆ. ಆದ್ದರಿಂದ, ಇಂತ ಸಂಶೋಧನೆಗಳು ಹಾಗೂ ವೈದ್ಯಕೀಯ ಉಪಕರಣಗಳು ಅತ್ಯವಶ್ಯ ಎಂದರು.
ಹಿರಿಯ ತಜ್ಞವೈದ್ಯ ಡಾ.ವಿ.ಡಿ.ಪಾಟೀಲ, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಕರ್ನಲ್ ಎಂ.ದಯಾನಂದ ಮಾತನಾಡಿದರು. ಈ ಸಂದರ್ಭದಲ್ಲಿ ಕುಲಸಚಿವ ಡಾ.ಎಂ.ಎಸ್.ಗಣಾಚಾರಿ, ಉಪಪ್ರಾಚಾರ್ಯ ಡಾ.ರಾಜೇಶ ಪವಾರ, ಡಾ.ಆರಿಫ್ ಮಾಲ್ದಾರ, ತಜ್ಞ ಡಾ.ಅರವಿಂದ ತೆನಗಿ ಹಾಗೂ ಡಾ.ಎಸ್.ಬಿ.ಪಾಟೀಲ, ಡಾ.ಭಾಗ್ಯಜ್ಯೋತಿ, ಡಾ.ಚೇತನಾ, ಮಕ್ಕಳ ನರರೋಗ ತಜ್ಞವೈದ್ಯ ಡಾ.ಮಹೇಶ ಕಮತೆ, ಮಕ್ಕಳ ಮನೋವೈದ್ಯ ಡಾ.ವಿನಾಯಕ ಕೋಪರ್ಡೆ, ನವಜಾತ ಶಿಶುಗಳ ತಜ್ಞವೈದ್ಯ ಡಾ.ರಾಮಚಂದ್ರ ಭಟ್, ಡಾ ಮೀನಾ, ಡಾ.ನೇಹಾ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ವಿಭಾಗದ ಮುಖ್ಯಸ್ಥ ಡಾ.ಶಿವಾನಂದ ಬೂಬನಾಳೆ ಸ್ವಾಗತಿಸಿದರು. ಡಾ. ಸ್ಮಿತಾ ಪ್ರಭು ವಂದಿಸಿದರು.