ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ನೂತನ ಅಧ್ಯಕ್ಷರಿಗೆ ಅಭಿನಂದನೆ
ಕನ್ನಡಪ್ರಭ ವಾರ್ತೆ, ತರೀಕೆರೆಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಅನೇಕ ಯೋಜನೆಗಳಿಗೆ ಚಾಲನ ನೀಡಬೇಕಾಗಿದೆ ಎಂದು ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ದಿ ನೂತನ ಅಧ್ಯಕ್ಷ ಡಾ.ಅಂಶುಮಂತ್ ಗೌಡ ಹೇಳಿದ್ದಾರೆ.
ನೂತನವಾಗಿ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಸರ್ಕಾರದಿಂದ ನೇಮಕಗೊಂಡಿರುವ ಡಾ.ಅಂಶುಮಂತ್ ಗೌಡರನ್ನು ಲಕ್ಕವಳ್ಳಿ ಕುವೆಂಪು ವಿಶ್ವವಿದ್ಯಾನಿಲಯದ ಮಾಜಿ ಸಿಂಡಿಕೇಟ್ ಸದಸ್ಯರು ಹಾಗೂ ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಎಲ್. ಟಿ. ಹೇಮಣ್ಣ, ಮುಖಂಡರಾದ ಫಣಿರಾಜ್ ಜೈನ್, ಎಲ್.ಆರ್. ಹರೀಶ್ ಅವರು ಶಿವಮೊಗ್ಗ ಕೇಂದ್ರ ಕಚೇರಿಯಲ್ಲಿ ಭೇಟಿ ಮಾಡಿ ಅಭಿನಂದಿಸಿದ ಸಂದರ್ಭದಲ್ಲಿ ಅವರು ಮಾತನಾಡುತ್ತಿದ್ದರು.ಭದ್ರಾ ಅಚ್ಚುಕಟ್ಟು ಪ್ರದೇಶಗಳಲ್ಲಿ ಸುಮಾರು 450 ನೀರು ಬಳಕೆದಾರರ ಸಹಕಾರ ಸಂಘಗಳಿದ್ದು ಇವುಗಳಲ್ಲಿ ಲಕ್ಕವಳ್ಳಿ ಮತ್ತು ರಾಣಿಬೆನ್ನೂರು ವ್ಯಾಪ್ತಿ ಪ್ರದೇಶದಲ್ಲಿ ಸಂಘಗಳು ಕ್ರಿಯಾಶೀಲ ಚಟುವಟಿಕೆಯಲ್ಲಿದೆ. ಭದ್ರಾ ಅಣೆಕಟ್ಟಿನಿಂದ ಮುಖ್ಯ ಕಾಲುವೆಯಿಂದ ಉಪ ಕಾಲುವೆಗಳಿಂದ ಸರಬರಾಜಾಗುವ ನೀರು ಪೋಲಾಗದಂತೆ ಸರ್ಕಾರದ ಅನುದಾನಗಳಿಂದ ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ ಭದ್ರಾ ಮೇಲ್ದಂಡೆ ಯೋಜನೆ ತುಂಗಾ ನದಿಯ ತಿರುವು ಯೋಜನೆಯಲ್ಲಿ ಕುಂಠಿತವಾಗಿರುವ ಕಾಮಗಾರಿ ಪೂರ್ಣಗೊಳಿಸಲು ಸರ್ಕಾರದ ಗಮನ ಸೆಳೆಯಲು ಚರ್ಚಿಸಲಾಯಿತು, ಭದ್ರಾ ಕಾಡಾ ವ್ಯಾಪ್ತಿಯ ಪ್ರದೇಶದಲ್ಲಿ ನೀರು ಬಳೆಕೆದಾರರ ಸಹಕಾರ ಸಂಘಗಳ ಚಟುವಟಿಕೆಗಳನ್ನು ಭದ್ರಗೊಳಿಸಿ ರೈತರ ಅನುಕೂಲಕ್ಕಾಗಿ ತರಬೇತಿ ಶಿಬಿರ ವನ್ನು ಆಯೋಜಿಸಬೇಕು. ಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ಪ್ರದೇಶದ ಲಕ್ಕವಳ್ಳಿ ಹಾಗೂ ಹಲಸೂರು ಗ್ರಾಮದಲ್ಲಿ ನೀರು ಸರಬರಾಜು ಕಾಲುವೆಯನ್ನು ತುರ್ತಾಗಿ ರಿಪೇರಿ ಮಾಡಲು ಸರ್ಕಾರದಿಂದ ಸೂಕ್ತ ಅನುದಾನಗಳ ಬಿಡುಗಡೆಗೆ ಪ್ರಯತ್ನ ಮಾಡಬೇಕು. ಕೃಷಿ ಚಟುವಟಿಕೆಗೆ ಹೆಚ್ಚು ಪ್ರೋತ್ಸಾಹ ನೀಡಬೇಕು ಎಂದು ಕಾಡಾ ನೂತನ ಅದ್ಯಕ್ಷ ಡಾ.ಅಂಶುಮಂತ್ ಗೌಡ ಅವರಲ್ಲಿ ಚರ್ಚಿಸಲಾಯಿತು. ಎಂದು ಎಲ್.ಟಿ.ಹೇಮಣ್ಣ ತಿಳಿಸಿದ್ದಾರೆ.30ಕೆಟಿಆರ್.ಕೆ.4ಃ
ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷ ಡಾ.ಅಂಶುಮಂತ್ ಗೌಡರನ್ನು ಅಭಿನಂದಿಸಲಾಯಿತು. ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿಗಳಾದ ಎಲ್.ಟಿ. ಹೇಮಣ್ಣ, ಮುಖಂಡರಾದ ಫಣಿರಾಜ್ ಜೈನ್, ಎಲ್.ಆರ್.ಹರೀಶ್ ಇದ್ದರು.