ಹಂಚಿಹಳ್ಳಿ ಗ್ರಾಪಂಗೆ ಗಾಂಧಿ ಗ್ರಾಮ ಪ್ರಶಸ್ತಿ ಪುರಸ್ಕಾರ

KannadaprabhaNewsNetwork |  
Published : Dec 06, 2025, 01:30 AM IST
ಹಂಚಿಹಳ್ಳಿ ಗ್ರಾಪಂಗೆ ಗಾಂಧಿ ಗ್ರಾಮ ಪ್ರಶಸ್ತಿ ಪುರಸ್ಕಾರ | Kannada Prabha

ಸಾರಾಂಶ

ಗ್ರಾಮೀಣ ಭಾಗದ ಜನರಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನ ಕಲ್ಪಸಿ ತಾಲೂಕಿಗೆ ಮೊದಲನೇ ಸ್ಥಾನದಲ್ಲಿರುವ ಹಂಚಿಹಳ್ಳಿ ಗ್ರಾಪಂ, ಸಾರ್ವಜನಿಕರ ಅನುಕೂಲಕ್ಕೆ ಸರ್ಕಾರದ ಅನೇಕ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಂಡು ಈ ಬಾರಿ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ಎಚ್.ಎನ್.ನಾಗರಾಜು ಕನ್ನಡಪ್ರಭ ವಾರ್ತೆ ಕೊರಟಗೆರೆ

ಗ್ರಾಮೀಣ ಭಾಗದ ಜನರಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನ ಕಲ್ಪಸಿ ತಾಲೂಕಿಗೆ ಮೊದಲನೇ ಸ್ಥಾನದಲ್ಲಿರುವ ಹಂಚಿಹಳ್ಳಿ ಗ್ರಾಪಂ, ಸಾರ್ವಜನಿಕರ ಅನುಕೂಲಕ್ಕೆ ಸರ್ಕಾರದ ಅನೇಕ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಂಡು ಈ ಬಾರಿ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.ತಾಲೂಕಿನ ಹಂಚಿಹಳ್ಳಿ ಗ್ರಾಪಂ ೨೦೨೩-೨೪ ನೇ ಸಾಲಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಬಳಸಿಕೊಂಡ ಪರಿಣಾಮವಾಗಿ ಅನುಷ್ಠಾನಗೊಳಿಸಿ ಗಣನೀಯವಾದ ಸಾಧನೆ ಮಾಡಿರುವ ಹಂಚಿಹಳ್ಳಿ ಗ್ರಾಪಂ ಅಧ್ಯಕ್ಷರಾದ ಭೀಮರಾಜು ಹಾಗೂ ಪಿಡಿಒ ರಾಘವೇಂದ್ರ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ ಖರ್ಗೆ ಅವರು ಸನ್ಮಾನಿಸಿದರು.

ಸರ್ಕಾರದ ಯೋಜನೆಗಳ ಪ್ರಗತಿ

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳಾದ ವಸತಿ ಸೌಲಭ್ಯ, ಶೌಚಗೃಹ ನಿರ್ಮಾಣ, ಬಯಲು ಶೌಚಮುಕ್ತ ಗ್ರಾಪಂ ಘೋಷಣೆ, ನರೇಗಾ ಯೋಜನೆಯಲ್ಲಿ ಪ್ರಗತಿ, ಶಾಲಾ ಆಟದ ಮೈದಾನ, ಅಂಗನವಾಡಿ, ಮನೆಯ ಸುತ್ತಮುತ್ತ ಸ್ವಚ್ಛತೆ, ದನದ ಕೊಟ್ಟಿಗೆ ನಿರ್ಮಾಣ, ಸಿಸಿ ರಸ್ತೆ, ಚರಂಡಿ, ಕುಡಿಯುವ ನೀರಿನ ವ್ಯವಸ್ಥೆ, ಸೇರಿದಂತೆ ಸಾರ್ವಜನಿಕರಿಗೆ ಬೇಕಾದ ಮೂಲಸೌಕರ್ಯವನ್ನು ಕಲ್ಪಿಸುವಲ್ಲಿ ತಾಲೂಕಿಗೆ ಮೊದಲನೇ ಸ್ಥಾನದಲ್ಲಿರುವ ಹಂಚಿಹಳ್ಳಿ ಗ್ರಾಪಂ ಸ್ವಚ್ಛ ಗ್ರಾಮದೊಂದಿಗೆ ಗ್ರಾಮ ಸ್ವರಾಜ್ಯ ಕನಸನ್ನು ಕಂಡಿದೆ. ಗ್ರಾಮೀಣ ಭಾಗದ ಗ್ರಾಪಂ ಗಳು ಹೆಚ್ಚು ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿಯಾದಂತೆ ಎನ್ನುವ ಉದ್ದೇಶದಿಂದ ರಾಜ್ಯ ಸರ್ಕಾರ ಗಾಂಧಿ ಗ್ರಾಮ ಎನ್ನವ ಪ್ರಶಸ್ತಿ ನೀಡಿ ಗೌರವಿಸುತ್ತಿದೆ. ಇದಕ್ಕೆ ಪೂರಕವಾಗಿ ಗ್ರಾಪಂ ಸರ್ವಸದಸ್ಯರ ಹಾಗೂ ಅಲ್ಲಿನ ಆಡಳಿತ ವರ್ಗ ಶ್ರಮದಿಂದ ಇಂತಹ ಪುರಸ್ಕಾರಗಳು ತಮ್ಮ ಗ್ರಾಪಂ ಗಳಲ್ಲಿ ಸಿಗಲಿದೆ ಎಂದು ಸರ್ಕಾರದ ಯೋಜನೆಯಾಗಿದೆ. ಕೋಟ್;-ಹಂಚಿಹಳ್ಳಿ ಗ್ರಾಪಂ ಗೆ ಬಂದಿರುವ ಗಾಂಧಿ ಗ್ರಾಮ ಪ್ರಶಸ್ತಿ ಸಂತಸ ತಂದಿದ್ದು, ನಮ್ಮ ಗ್ರಾಪಂ ವ್ಯಾಪ್ತಿಗೆ ಬರುವ ಗ್ರಾಮಗಳಲ್ಲಿ ಸರ್ಕಾರ ನೀಡಿದಂತ ಯೋಜನೆಗಳನ್ನು ಪ್ರಾಮಾಣಿಕವಾಗಿ ಜನರಿಗೆ ತಲುಪಿಸುವಂತ ಕೆಲಸವನ್ನು ನಮ್ಮ ಸದಸ್ಯರು ಹಾಗೂ ಆಡಳಿತ ವರ್ಗ ಮಾಡಿರುವ ಪರಿಣಾಮ ಇಂದು ಗಾಂಧಿ ಗ್ರಾಮ ಪುರಸ್ಕಾರ ದೊರತಿದೆ೦೫ ಕೊರಟಗೆರೆ ಚಿತ್ರ೦೧;- ಭೀಮರಾಜು ಹಂಚಿಹಳ್ಳಿ ಗ್ರಾಪಂ ಅಧ್ಯಕ್ಷ.

ಕೋಟ್‌ 2

ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ನೀಡಿರುವ ೩೪ ವಿವಿಧ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನದೊಂದಿಗೆ ಸರ್ಕಾರ ಕೇಳಿದ ಎಲ್ಲಾ ಮಾಹಿತಿಗಳನ್ನು ಯಥಾವತ್ತಾಗಿ ಸರ್ಕಾರಕ್ಕೆ ನೀಡಿರುವ ಹಿನ್ನೆಲೆಯಲ್ಲಿ ಪ್ರಶಸ್ತಿಗೆ ನಮ್ಮ ಗ್ರಾಪಂ ಗೆ ಆಯ್ಕೆಯಾಗಿದ್ದು, ಈ ಪ್ರಶಸ್ತಿಗೆ ಗ್ರಾಪಂ ಅಧ್ಯಕ್ಷರು ಹಾಗೂ ಎಲ್ಲಾ ಸರ್ವಸದಸ್ಯರ ಸಹಕಾರ ಕಾರಣ.೦೫ ಕೊರಟಗೆರೆ ಚಿತ್ರ೦೨;- ರಾಘವೇಂದ್ರ ಪಿ. ಗ್ರಾಪಂ ಪಿಡಿಒ ಹಂಚಿಹಳ್ಳಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ರಾಮಗಳ ಪ್ರಗತಿಯಿಂದ ದೇಶದ ಅಭಿವೃದ್ಧಿ ಸಾಧ್ಯ
ಅಯೋಧ್ಯೆಂತೆ ದತ್ತಪೀಠದಲ್ಲೂ ಧರ್ಮಧ್ವಜ ಹಾರಾಡಲಿ