ಕನ್ನಡಪ್ರಭ ವಾರ್ತೆ ಯಡ್ರಾಮಿ
ದಲಿತ ಸಮನ್ವಯ ಸಮಿತಿಯಿಂದ ತಾಲೂಕಿನ ಮಳ್ಳಿ ಗ್ರಾಮದಲ್ಲಿ ಭಾನುವಾರ ನಡೆದ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ 133 ಜನ್ಮ ದಿನಾಚರಣೆಯಲ್ಲಿ ಮಾತನಾಡಿದ, ಒಂದು ದೇಶ ಸುಭದ್ರವಾಗಿ ನಡೆಯಬೇಕು ಅಂದ್ರೆ ಸಂವಿಧಾನ ಅವಶ್ಯಕ ಅಂತಹ ಸಂವಿಧಾನ ಪ್ರತಿಯೊಬ್ಬರು ಓದಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮ ಉದ್ದೇಶಿಸಿ ಕಬೀರ ಸಿದ್ದ ಮಹಾಸ್ವಾಮಿಗಳು ಚಿಗರಹಳ್ಳಿ ಮಠ ಹಾಗೂ ಶಾಂತಪ್ಪ ಕುಡಲಗಿ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರು ಮಾತನಾಡಿದ, ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತ ದೇಶವು ,ತನ್ನ ಬಹುತ್ವ ಸಂಸ್ಕೃತಿ ಕಾಪಾಡಿಕೊಂಡು, ಸಮಾನತೆಯೊಂದಿಗೆ ಪ್ರಗತಿಸಾಧಿಸುತ್ತಿದೆ. ಈ ಸಾಧನೆಗೆ ದೇಶದ ಸಂವಿಧಾನ ಭದ್ರ ಬುನಾದಿ ಒದಗಿಸಿದೆ.ಈ ವೇಳೆ ಮಲ್ಲನಗೌಡ ಮಾಲಿಪಾಟೀಲ ಕಳಗೇರಿ,ಅರವಿಂದಗೌಡ ಪೊಲೀಸ್ ಪಾಟೀಲ, ದಯಾನಂದ ಹಿರೇಮಠ, ಹಯ್ಯಾಳಪ್ಪ ಗಂಗಾಕರ್, ಗೀರಿಮಲ್ಲಪ್ಪಗೌಡ ಮಾಲಿಪಾಟೀಲ, ಕಿರಣ್ ರಾಠೋಡ, ಸೀತಾರಾಮ್ ಚವ್ಹಾಣ, ಸಂತೋಷ ಯಾದಗಿರಿ, ಕಾದರಬೀ ರಾಜೇಸಾಬ್ ಗುಡಮನಿ ಗ್ರಾಮ ಪಂಚಾಯತಿ ಅಧ್ಯಕ್ಷರು ಮಳ್ಳಿ, ಸುಜಾತಾ ವಾಲಿಕಾರ ಉಪಾಧ್ಯಕ್ಷರು, ಅಮರೇಶ ಸಾಹು, ಈರಣ್ಣ ಕುಂಭಾರ, ರಾಮಣ್ಣ ಪುಜಾರಿ ಇತರರು ಉಪಸ್ಥಿತರಿದ್ದರು.