ಮಡಿಕೇರಿಯಲ್ಲಿ ನೀಮಾ ಬೆಳ್ಳಿ ಮಹೋತ್ಸವ, ಧನ್ವಂತರಿ ಜಯಂತಿ ಆಚರಣೆ

KannadaprabhaNewsNetwork |  
Published : Oct 22, 2025, 01:03 AM IST
ಚಿತ್ರ : 21ಎಂಡಿಕೆ2 : ನೀಮಾ ಬೆಳ್ಳಿ ಮಹೋತ್ಸವ  ಅಂಗವಾಗಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.  | Kannada Prabha

ಸಾರಾಂಶ

ನೀಮಾ ಕೊಡಗು ಜಿಲ್ಲಾ ಘಟಕದ ವತಿಯಿಂದ ಧನ್ವಂತರಿ ಜಯಂತಿ ಮತ್ತು ಬೆಳ್ಳಿಮಹೋತ್ಸವ ಸಮಾರಂಭ ನಡೆಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್ ನ (ನೀಮಾ) ಕೊಡಗು ಜಿಲ್ಲಾ ಘಟಕದ ವತಿಯಿಂದ ಧನ್ವಂತರಿ ಜಯಂತಿ ಮತ್ತು ಬೆಳ್ಳಿ ಮಹೋತ್ಸವ ಸಮಾರಂಭ ಮಡಿಕೇರಿಯಲ್ಲಿ ಅರ್ಥಪೂರ್ಣವಾಗಿ ನಡೆಯಿತು. ನಗರದ ಶ್ರೀ ಲಕ್ಷ್ಮೀ ನರಸಿಂಹ ಕಲ್ಯಾಣ ಮಂಟಪದಲ್ಲಿ ಬೆಳಿಗ್ಗೆ ಗಣಪತಿ ಹೋಮ ಮತ್ತು ಧನ್ವಂತರಿ ಹವನ ಶ್ರದ್ಧಾಭಕ್ತಿಯಿಂದ ನಡೆಯಿತು. ಸಹಸ್ರಾಕ್ಷ, ಉಕ್ಕಿನಡ್ಕ ಡಾ.ಜಯ ಗೋವಿಂದ ಯು. ‘ಸಮಾಜದ ಮೇಲೆ ನೀಮಾ’ದ ಪ್ರಭಾವ ಎಂಬ ವಿಷಯದ ಕುರಿತು ಮಾತನಾಡಿದರು. ಅಲ್ಲದೆ ‘ನೀಮಾ’ ಬೆಳ್ಳಿ ಮಹೋತ್ಸವದ ಸ್ಮರಣ ಸಂಚಿಕೆಯನ್ನೂ ಬಿಡುಗಡೆ ಮಾಡಿದರು. ಬೆಂಗಳೂರು ಕೆಎಯುಪಿಯ ಡಾ.ಎಂ.ಡಿ.ರಫಿ ಹಕೀಂ ಹಾಗೂ ಕೆಎಸ್‌ಬಿ ನೀಮಾ ಅಧ್ಯಕ್ಷರು ಮಾತನಾಡಿದರು. ಸನ್ಮಾನ: ನೀಮಾ ಅಧ್ಯಕ್ಷ ಡಾ.ರಾಜಾರಾಮ ಎ.ಆರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಯೋಗ ಗುರು ಕೆ.ಕೆ.ಮಹೇಶ್, ತಣಲ್ ಸಂಸ್ಥೆಯ ಮಹಮ್ಮದ್, ವನ್ಯಜೀವಿ ಪಶುವೈದ್ಯ ಡಾ.ಬಿ.ಸಿ.ಚಿಟ್ಟಿಯಪ್ಪ, ಲೀಡ್ ಬ್ಯಾಂಕ್ ನ ನಿವೃತ್ತ ವ್ಯವಸ್ಥಾಪಕ ಆರ್.ಕೆ.ಬಾಲಚಂದ್ರ, ಲೇಖನಿ ಮೂಲಕ ಶಾಂತಿ ಸಾರುವ ಕೆ.ಟಿ.ವತ್ಸಲಾ, ಕೊಡಗು ರಕ್ತದಾನಿಗಳ ಸಂಘದ ಎಂ.ಎ.ರಫೀಕ್, ಕಾಮಧೇನು ಗೋ ಶಾಲೆಯ ಕಾವಾಡಿ ಕಾನ ಕೃಷ್ಣ ಭಟ್, ಪಕ್ಷಿ ಮತ್ತು ವನ್ಯಜೀವಿ ಸಂರಕ್ಷಣೆಯ ಅಭಿಯಾನದ ಡಾ.ಎಸ್.ವಿ.ನರಸಿಂಹನ್, ಮೇಕೇರಿಯ ಸಾಯಿ ಮಂದಿರದ ಅಧ್ಯಕ್ಷ ಸೋಮಣ್ಣ, ಅಂತರಾಷ್ಟ್ರೀಯ ಬ್ಯಾಡ್ಮಿಂಟನ್ ಕೋಚ್ ಜ್ಯೋತಿ ಸೋಮಯ್ಯ, ನೀಮಾ ಹರ್ಬಲ್ ಗಾರ್ಡನ್ ನ ಭೂದಾನಿ ಗಜರಾಜ ನಾಯ್ಡು, ಲಯನ್ಸ್ ಬಿಲ್ಡಿಂಗ್ ಸಮಿತಿಯ ಅಧ್ಯಕ್ಷ ಅಂಬೆಕಲ್ ನವೀನ್ ಕುಶಾಲಪ್ಪ, ಅಕ್ಷಯ ಡಿಸ್ಟಿಬ್ಯೂಟರ್ಸ್ನ ಚಂದ್ರಶೇಖರ್ ಭಟ್, ಪ್ರಮುಖರಾದ ಆಮಿಲ್, ಚರಕ್ ಫಾರ್ಮ, ಡಾ.ಮಹೇಶ್ ಶರ್ಮ, ಡಾ.ಮಮತ ಕೆ.ವಿ, ಡಾ.ಪುಷ್ಪಕಲಾ ಬದರಿ ನಾರಾಯಣ, ಡಾ.ಅದ್ವೈತ್ ಗೋಹಿಲ್, ಡಾ.ಕೀರ್ತನ, ಡಾ.ನವೀನ್ ವರ್ಗೀಸ್, ಡಾ.ರವಿ ಪ್ರಕಾಶ್ ಕಜೆ, ಡಾ.ದೀಪಾಮಾಲ ತ್ರಿಪತಿ ಹಾಗೂ ಡಾ.ಮುಮ್ತಾಜ್ ಆಲಿ ಅವರನ್ನು ಸನ್ಮಾನಿಸಲಾಯಿತು.

ಮಧ್ಯಾಹ್ನ ಕೊಡಗು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದೊಂದಿಗೆ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಹಿರಿಯ ಸ್ತ್ರೀ ರೋಗ ತಜ್ಞೆ ಡಾ.ಜಯಲಕ್ಷ್ಮೀ ಪಾಟ್ಕರ್ ಹಾಗೂ ಕೆವಿಜಿ ಪ್ರಾಂಶುಪಾಲ ಡಾ.ಡಿ.ವಿ.ಲೀಲಾಧರ್ ಪಾಲ್ಗೊಂಡಿದ್ದರು. ‘ವೈದ್ಯಕೀಯ ನಿರ್ಲಕ್ಷ್ಯ ಮತ್ತು ವೈದ್ಯರ ಅರಿವು’ ವಿಷಯದ ಕುರಿತು ಕೊಡಗು ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶ ಸಿ.ಕೆ.ಬಸವರಾಜ್ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿ ಶುಭ ಮಾತನಾಡಿದರು. ನಂತರ ನೀಮಾ ಕೊಡಗು ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು. ವೈದ್ಯರು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸುಳ್ಯದ ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜ್ ನ ಸಹಯೋಗದೊಂದಿಗೆ ‘ಆಯುರ್ವೇದ ಆರೋಗ್ಯ ಶಿಬಿರ’ ನಡೆಯಿತು. ಆಯುರ್ವೇದಿಕ್ ಪೋಸ್ಟರ್ಸ್, ಸ್ಟಾಲ್ಸ್ ಮತ್ತು ಔಷಧೀಯ ಸಸ್ಯಗಳ ಪ್ರದರ್ಶನ ಕೂಡ ಗಮನ ಸೆಳೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಡಿದ್ದು ಬೆಳಗಾವಿಯಲ್ಲಿ ಪಂಚಮಸಾಲಿ ಹೋರಾಟ
ಹುಟ್ಟು ಸಾವಿನ ಮಧ್ಯೆ ಸಾಧನೆ ಮಹತ್ವದ್ದು: ಡಾ.ಮುರುಗೇಶ ನಿರಾಣಿ