ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ ನಡೆಸಿದ ನೀಟ್ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಕಾರ್ಕಳದ ಕ್ರಿಯೇಟಿವ್ ಕಾಲೇಜಿನ ವಿದ್ಯಾರ್ಥಿಗಳು ಅತ್ಯುನ್ನತ ಅಂಕಗಳಿಸುವ ಮೂಲಕ ಅದ್ಭುತ ಸಾಧನೆಗೈದಿದ್ದಾರೆ.
ಕನ್ನಡಪ್ರಭ ವಾರ್ತೆ ಕಾರ್ಕಳ
ದೇಶದ ಪ್ರತಿಷ್ಟಿತ ವೈದ್ಯಕೀಯ ವಿಶ್ವವಿದ್ಯಾನಿಲಯಗಳಿಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ ನಡೆಸಿದ ನೀಟ್ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಕಾರ್ಕಳದ ಕ್ರಿಯೇಟಿವ್ ಕಾಲೇಜಿನ ವಿದ್ಯಾರ್ಥಿಗಳು ಅತ್ಯುನ್ನತ ಅಂಕಗಳಿಸುವ ಮೂಲಕ ಅದ್ಭುತ ಸಾಧನೆಗೈದಿದ್ದಾರೆ.ವಿದ್ಯಾರ್ಥಿಗಳಾದ ಸುಮಂತ ಗೌಡ ಎಸ್.ಡಿ 99.923686 ಪರ್ಸಂಟೈಲ್‌ನೊಂದಿಗೆ 596 ಅಂಕಗಳನ್ನು ಗಳಿಸಿ ರಾಷ್ಟ್ರಮಟ್ಟದಲ್ಲಿ 1623ನೇ ರ‍್ಯಾಂಕ್, ಪ್ರಜ್ವಲ್ ಎಸ್.ಎನ್. 99.686435 ಪರ್ಸಂಟೈಲ್‌ನೊಂದಿಗೆ 588 ಅಂಕಗಳನ್ನು ಗಳಿಸಿ, ರಾಷ್ಟ್ರಮಟ್ಟದಲ್ಲಿ 2483ನೇ ರ‍್ಯಾಂಕ್, ರಾಜೇಶ್ ಎಚ್.ಎ. 99.857286 ಪರ್ಸಂಟೈಲ್‌ನೊಂದಿಗೆ 583 ಅಂಕಗಳಿಸಿ ರಾಷ್ಟ್ರಮಟ್ಟದಲ್ಲಿ 3025ನೇ ರ‍್ಯಾಂಕ್ ಪಡೆದು ಸಾಧನೆಗೈದಿದ್ದಾರೆ.ಇತರ ವಿದ್ಯಾರ್ಥಿಗಳಾದ ಸಾತ್ವಿಕ್ ಭಂಡಾರಿ 560, ಹೇಮಂತ್ ಕುಮಾರ್ 551, ಪ್ರಾಪ್ತಿ ಶೆಟ್ಟಿ 541, ಪ್ರಥಮ್ ಪಟೇಲ್ ಎಚ್.ಡಿ. 539, ಸಂಗೀತಾ ಬಿ.ಎಂ. 536, ಶ್ರೀನಿಧಿ ಡಿ. 531, ವಿನಯ್ ಎಸ್. 523, ಸ್ನೇಹಾ ಬಸವರಾಜ್ ಬಿ. 521, ಯುವರಾಜ್ ಪಟೇಲ್ 521, ಗಣೇಶ್ ಜಿ. 519, ಶಕ್ತಿ ಎಸ್. ಗೌಡ 519, ಸೃಷ್ಟಿ ಪಾಟೀಲ್ 515, ಶ್ರೀನಿಧಿ ಪಿ.ಯು 514, ನಿನಾದ್ ಎಚ್.ಎಂ. 513, ಪ್ರಥಮ್ ಎಸ್.ಪಿ. 512, ಧ್ರುವ ಪಿ. 509, ಮೇಘನಾ ಯು.ವೈ. 509, ಅಭಿನಂದನ್ 504 ಅಂಕಗಳನ್ನು ಪಡೆದು ವಿಶಿಷ್ಟ ಸಾಧನೆಗೈದಿದ್ದಾರೆ.
500ರ ಮೇಲೆ 28 ಮತ್ತು 400ರ ಮೇಲೆ 192 ವಿದ್ಯಾರ್ಥಿಗಳು ಅಂಕಗಳನ್ನು ಪಡೆದಿರುತ್ತಾರೆ.ವಿದ್ಯಾರ್ಥಿಗಳ ಈ ಸಾಧನೆಯನ್ನು ಮೆಚ್ಚಿ ಆಡಳಿತ ಮಂಡಳಿ, ಪ್ರಾಂಶುಪಾಲರು, ಸಂಯೋಜಕರಾದ ಲೋಹಿತ್ ಎಸ್.ಕೆ., ಉಪನ್ಯಾಸಕ ವರ್ಗದವರು ಹಾಗೂ ಬೋಧಕೇತರ ವೃಂದದವರು ಶ್ಲಾಘಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.