ಜು. 3ರಿಂದ 5ರವರೆಗೆ ಸ್ಕೌಟ್ಸ್, ಗೈಡ್ಸ್‌ಗಳ ಪರೀಕ್ಷಾ ಶಿಬಿರ ಆರಂಭ

KannadaprabhaNewsNetwork |  
Published : Jun 17, 2025, 01:02 AM ISTUpdated : Jun 17, 2025, 01:03 AM IST
11ಎಚ್‌ಪಿಟಿ1ಹೊಸಪೇಟೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಯ ಕಾರ್ಯದರ್ಶಿ ಪಿ. ಮಂಜುನಾಥಪ್ಪಅಧ್ಯಕ್ಷತೆಯಲ್ಲಿ ಯೋಜನಾ ಸಮಿತಿ ಸದಸ್ಯರ ಸಭೆ ನಡೆಯಿತು. | Kannada Prabha

ಸಾರಾಂಶ

ಸ್ಕೌಟ್ಸ್ ಮತ್ತು ಗೈಡ್ಸ್‌ಗಳ ವಿಶೇಷ ಪರೀಕ್ಷೆಗಳಾದ ತೃತೀಯ ಸೋಪಾನ, ತೃತೀಯ ಚರಣ್, ಸುವರ್ಣ ಪಂಖ್ ಹಾಗೂ ನಿಪುಣ ಪರೀಕ್ಷಾ ಶಿಬಿರಗಳು ಜು. 3ರಿಂದ 5ರವರೆಗೆ ನಡೆಸಲಾಗುತ್ತದೆ.

ಕನ್ನಡಪ್ರಭ ವಾರ್ತೆ ಹೊಸಪೇಟೆ

ಸ್ಕೌಟ್ಸ್ ಮತ್ತು ಗೈಡ್ಸ್‌ಗಳ ವಿಶೇಷ ಪರೀಕ್ಷೆಗಳಾದ ತೃತೀಯ ಸೋಪಾನ, ತೃತೀಯ ಚರಣ್, ಸುವರ್ಣ ಪಂಖ್ ಹಾಗೂ ನಿಪುಣ ಪರೀಕ್ಷಾ ಶಿಬಿರಗಳು ಜು. 3ರಿಂದ 5ರವರೆಗೆ ನಡೆಸಲಾಗುತ್ತದೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆಯ ಕಾರ್ಯದರ್ಶಿ ಪಿ. ಮಂಜುನಾಥಪ್ಪ ತಿಳಿಸಿದರು.

ನಗರದ ಜಿಲ್ಲಾ ಕಚೇರಿಯಲ್ಲಿ ಏರ್ಪಡಿಸಿದ್ದ ಯೋಜನಾ ಸಮಿತಿ ಸದಸ್ಯರ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾಲೂಕು ಮತ್ತು ಜಿಲ್ಲಾ ಹಂತದಲ್ಲಿ ನಡೆಯುವ ಪರೀಕ್ಷಾ ಶಿಬಿರಗಳಿಗೆ ಎಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್‌ಗಳು ಸಕ್ರಿಯವಾಗಿ ಭಾಗವಹಿಸಬೇಕು. ಈಗಾಗಲೇ ಬ್ಯಾಡ್ಜ್ ಸಮಿತಿ ರಚಿಸಲಾಗಿದ್ದು, ಜಿಲ್ಲಾ ಮತ್ತು ತಾಲೂಕು ಹಂತದಲ್ಲಿ ನಡೆಯುವ ಪರೀಕ್ಷೆಗಳಿಗೆ ಮಕ್ಕಳು ಪರಿಪೂರ್ಣ ಜ್ಞಾನ ಹೊಂದಲು ಪ್ರಾವಿಣ್ಯತಾ ಪದಕದ ಪ್ರಮಾಣ ಪತ್ರ ಜೊತೆಗೆ ಜಿಲ್ಲಾ ಪದಕಗಳನ್ನು ಆಯಾ ಸಮಿತಿ ನೇಮಕ ಮಾಡಿರುವ ಪರೀಕ್ಷಕರಿಂದ ಪಡೆದುಕೊಳ್ಳಲು ಉತ್ತೇಜನ ನೀಡಬೇಕಿದೆ ಎಂದರು.

ಇದೇ ವೇಳೆ ರಾಜ್ಯ ಸಂಸ್ಥೆಯವರು ಸ್ಥಳೀಯ ಸಂಸ್ಥೆಗಳಿಗೆ ಅನುದಾನ ನೀಡಿರುವ ಲೆಕ್ಕಪತ್ರಗಳನ್ನು ಕೂಡಲೇ ಜಿಲ್ಲಾ ಸಂಸ್ಥೆಗೆ ನೀಡುವುದು. ಬೇಸಿಗೆ ಶಿಬಿರದ ಮಕ್ಕಳ ಪಟ್ಟಿಯನ್ನು ಹಾಗೂ ರಾಜ್ಯ ಪುರಸ್ಕಾರ ಅರ್ಜಿ ಸಲ್ಲಿಸಿದ ಮಕ್ಕಳ ಪಟ್ಟಿಯನ್ನು ಮತ್ತು ತೃತೀಯ ಸೋಪಾನ ಅರ್ಹರಾದ ಸ್ಕೌಟ್ಸ್‌ಗಳ ಪಟ್ಟಿಯನ್ನು 2024-25ನೇ ಸಾಲಿನಲ್ಲಿ ಗ್ರಾಪಂ, ತಾಪಂಗಳಿಂದ ಸಂಗ್ರಹಿಸಿದ ವಂತಿಗೆ ಮಾಹಿತಿಯನ್ನು ವಾರ್ಷಿಕ ವರದಿಯನ್ನು ಸಭೆಗೆ ಸಲ್ಲಿಸಲಾಯಿತು.

ಸಭೆಯಲ್ಲಿ ಯೋಜನಾ ಸಮಿತಿ ಸದಸ್ಯರಾದ ಮಂಗಳಗೌರಿ, ಜಿ.ಎಂ. ರಾಜಶೇಖರ್, ಶೆರಿನಾ, ಗೀತಾಂಜಲಿ ಗೌಡ, ಶ್ರೀನಿವಾಸ್‌ ಜಿ.ಜೋಷಿ, ನಾಗಭೂಷಣ್, ಸ್ಥಳೀಯ ಸಂಸ್ಥೆಗಳ ಕಾರ್ಯದರ್ಶಿಗಳಾದ ತಿಂದಪ್ಪ, ಮಾದೇಶ, ಎಲ್.ಮೂರ್ತಿ, ಬನ್ನಿಗೌಡ, ತಿಪ್ಪೇಸ್ವಾಮಿ, ದಳನಾಯಕರಾದ ಕುಮಾರಸ್ವಾಮಿ, ಜಿಲ್ಲಾ ಸಂಘಟಕ ಜಿ.ಬಿ.ಸಿ ಪಾಟೀಲ್ ಮತ್ತಿತರರಿದ್ದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ