ಕೈ ಬೆಂಬಲಿತ ಅಭ್ಯರ್ಥಿಗೆ ಮಾತ್ರ ಬೆಂಬಲ

KannadaprabhaNewsNetwork |  
Published : Jun 17, 2025, 01:01 AM ISTUpdated : Jun 17, 2025, 01:02 AM IST
೧೬ಕೆಎಲ್‌ಆರ್-೨ಕೋಲಾರದ ಜಿಪಂ ಆವರಣದಲ್ಲಿ ಸೋಮವಾರ ಕೋಮುಲ್ ಚುನಾವಣೆಗೆ ವೇಮಗಲ್ ಭಾಗದಿಂದ ಚಂಜಿಮಲೆ ರಮೇಶ್ ನೈರುತ್ಯ ಕ್ಷೇತ್ರಕ್ಕೆ ನಾಗನಾಳ ಸೋಮಣ್ಣ ನಾಮಪತ್ರ ಸಲ್ಲಿಸುತ್ತಿರುವುದು. | Kannada Prabha

ಸಾರಾಂಶ

ಕೋಲಾರ ಉತ್ತರ ಮಹಿಳಾ ಮೀಸಲು ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ಮಹಾಲಕ್ಷ್ಮೀ ನಾಮಪತ್ರ ಸಲ್ಲಿಸಿದ್ದಾರೆ. ಆದರೆ ಕಾಂಗ್ರೆಸ್‌ ಹೈಕಮಾಂಡ್ ಅವರಿಗೆ ಒಪ್ಪಿಗೆ ಕೊಟ್ಟಿಲ್ಲ, ಮಹಾಲಕ್ಷ್ಮೀ ಅವರು ಪತಿ ಪ್ರಸಾದ್‌ಬಾಬು ಅವರು ಕೋಲಾರ ಮಹಿಳಾ ಉತ್ತರ ಮೀಸಲು ಕ್ಷೇತ್ರಕ್ಕೆ ತಮ್ಮ ಪತ್ನಿಯನ್ನು ಕಣಕ್ಕಿಳಿಸುವುದಾಗಿ ಪ್ರಸ್ತಾಪ ಮಾಡಿದ್ದರು. ಆಗಲೂ ಪಕ್ಷ ಒಪ್ಪಿಗೆ ನೀಡಿರಲಿಲ್ಲ

ಕನ್ನಡಪ್ರಭ ವಾರ್ತೆ ಕೋಲಾರಕಾಂಗ್ರೆಸ್ ಹೈಕಮಾಂಡ್ ಸೂಚನೆ ಇಲ್ಲದೇ ಯಾರೇ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರೂ ಅವರಿಗೂ ನಮಗೂ ಯಾವುದೇ ಸಂಬಂಧ ಇಲ್ಲ. ಕಾಂಗ್ರೆಸ್ ಬೆಂಬಲಿತ ಅಧಿಕೃತ ಅಭ್ಯರ್ಥಿಗಳ ಪರವಾಗಿ ಚುನಾವಣೆ ಪ್ರಚಾರ ಮಾಡಿ ೧೩ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳತ್ತೇವೆ ಎಂದು ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿದರು.ನಗರದ ಜಿಪಂ ಆವರಣದಲ್ಲಿ ಸೋಮವಾರ ಕೋಮುಲ್ ಚುನಾವಣೆಗೆ ವೇಮಗಲ್ ಭಾಗದಿಂದ ಚಂಜಿಮಲೆ ರಮೇಶ್, ನೈರುತ್ಯ ಕ್ಷೇತ್ರಕ್ಕೆ ನಾಗನಾಳ ಸೋಮಣ್ಣ ಅವರ ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರೊಂದಿಗೆ ಮಾತನಾಡಿ, ಕೋಲಾರ ಜಿಲ್ಲಾ ಕಾಂಗ್ರೆಸ್‌ಗೆ ರಮೇಶ್ ಕುಮಾರ್, ಬೈರತಿ ಸುರೇಶ್, ನಸೀರ್ ಅಹ್ಮದ್ ಹೈಕಮಾಂಡ್ ಇದ್ದಂತೆ. ಅವರ ಒಪ್ಪಿಗೆ ಇಲ್ಲದೆ ಯಾರೇ ನಾಮಪತ್ರ ಹಾಕಿದ್ದರೂ ನಮಗೂ ಪಕ್ಷಕ್ಕೂ ಸಂಬಂಧವಿಲ್ಲ ಎಂದರು.ಮಹಾಲಕ್ಷ್ಮೀ ನಾಮಪತ್ರಕ್ಕೆ ವಿರೋಧ

ಕೋಲಾರ ಉತ್ತರ ಮಹಿಳಾ ಮೀಸಲು ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ಮಹಾಲಕ್ಷ್ಮೀ ನಾಮಪತ್ರ ಸಲ್ಲಿಸಿದ್ದಾರೆ. ಇದಕ್ಕೆ ನಮ್ಮ ವಿರೋಧವಿದೆ, ನಮ್ಮ ಹೈಕಮಾಂಡ್ ಅವರಿಗೆ ಒಪ್ಪಿಗೆ ಕೊಟ್ಟಿಲ್ಲ, ಮಹಾಲಕ್ಷ್ಮೀ ಅವರು ಪತಿ ಪ್ರಸಾದ್‌ಬಾಬು ಅವರು ಕೋಲಾರ ಮಹಿಳಾ ಉತ್ತರ ಮೀಸಲು ಕ್ಷೇತ್ರಕ್ಕೆ ತಮ್ಮ ಪತ್ನಿಯನ್ನು ಕಣಕ್ಕಿಳಿಸುವುದಾಗಿ ನನ್ನ ಬಳಿ ಪ್ರಸ್ತಾಪ ಮಾಡಿದ್ದರು. ಅದಕ್ಕೆ ಪಕ್ಷ ಒಪ್ಪಿಗೆ ನೀಡಿರಲಿಲ್ಲ ಎಂದು ಹೇಳಿದರು.ಕೋಲಾರ ಮಹಿಳಾ ಉತ್ತರ ಮೀಸಲು ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಯಾರು ಅನ್ನೋದು ಇನ್ನೂ ತೀರ್ಮಾನವಾಗಿಲ್ಲ. ಮೂರು ತಾಲೂಕಿನ ಕಾಂಗ್ರೆಸ್ ಪಕ್ಷದ ಮುಖಂಡರು ಒಪ್ಪಿಗೆ ನೀಡಬೇಕು, ಮಹಾಲಕ್ಷ್ಮೀ ಅವರನ್ನ ಯಾರು ಒಪ್ಪಿಲ್ಲ, ಆ ಕಾರಣದಿಂದ ಶೀಘ್ರದಲ್ಲೇ ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿಯನ್ನು ಘೋಷಣೆ ಮಾಡುತ್ತೇವೆ ಎಂದರು.ಕಾಂಗ್ರೆಸ್‌ ಬೆಂಬಲಿತರಿಗೆ ಅಧಿಕಾರ

ಎಂಎಲ್ಸಿ ಅನಿಲ್ ಕುಮಾರ್ ಮಾತನಾಡಿ, ನಮಗೆ ಹೈಕಮಾಂಡ್ ಸೂಚನೆ ನೀಡದಂತೆ ಕೆಲಸ ಮಾಡತ್ತೇವೆ. ಕೋಚಿಮುಲ್ ಆಡಳಿತ ಮಂಡಳಿ ಮೊದಲಿನಿಂದಲೂ ಕಾಂಗ್ರೆಸ್ ವಶದಲ್ಲಿ ಇದ್ದು ಈ ಚುನಾವಣೆಯಲ್ಲಿ ಸಹ ಕಾಂಗ್ರೆಸ್ ಆಡಳಿತವೇ ಅಧಿಕಾರಕ್ಕೆ ಬರುತ್ತದೆ ಎಂದರುಕೋಮುಲ್ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಗಳಾದ ನಾಗನಾಳ ಸೋಮಣ್ಣ, ಚಂಜಿಮಲೆ ರಮೇಶ್ ಮುಖಂಡರಾದ ಖಾಜಿಕಲ್ಲಹಳ್ಳಿ ಮುನಿರಾಜು ಬ್ಯಾಟಪ್ಪ, ಮೈಲಾಂಡಹಳ್ಳಿ ಮುರಳಿ, ಉರಟಾಗ್ರಹಾರ ಚೌಡರೆಡ್ಡಿ, ವೈ.ಶಿವಕುಮಾರ್ ಇದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ