ಕಾಂಗ್ರೆಸ್‌ ಆಡಳಿತದಲ್ಲಿ ವಾಲ್ಮೀಕಿಗಳ ನಿರ್ಲಕ್ಷ್ಯ: ಮಾಜಿ ಶಾಸಕ ಎಸ್.ವಿ.ರಾಮಚಂದ್ರಪ್ಪ

KannadaprabhaNewsNetwork |  
Published : Oct 06, 2025, 01:00 AM IST
ಕ್ಯಾಪ್ಷನ5ಕೆಡಿವಿಜಿ35 ದಾವಣಗೆರೆಯಲ್ಲಿಂದು ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ನಡೆದ ಬೈಕ್ ರ‍್ಯಾಲಿಗೆ ಮಾಜಿ ಶಾಸಕ ಎಸ್.ವಿ.ರಾಮಚಂದ್ರಪ್ಪ ಚಾಲನೆ ನೀಡಿದರು. ಬಿ.ವೀರಣ್ಣ ಇತರರು ಇದ್ದರು. .........ಕ್ಯಾಪ್ಷನ5ಕೆಡಿವಿಜಿ36 ದಾವಣಗೆರೆಯಲ್ಲಿಂದು ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ನಡೆದ ಬೈಕ್ ರ‍್ಯಾಲಿಯಲ್ಲಿ ಭಾಗವಹಿಸಿದ ಸಮಾಜದ ಮುಖಂಡರು........ಕ್ಯಾಪ್ಷನ5ಕೆಡಿವಿಜಿ37, 38 ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ದಾವಣಗೆರೆಯಲ್ಲಿ ನಡೆದ ಬೈಕ್ ರ‍್ಯಾಲಿಯಲ್ಲಿ ಭಾಗವಹಿಸಿದ ಸಮಾಜ ಬಾಂಧವರು. | Kannada Prabha

ಸಾರಾಂಶ

ನಾನು ಹಿಂದೆ ಬಿಜೆಪಿಯ ಸರ್ಕಾರದಲ್ಲಿ ಕರ್ನಾಟಕ ಮಹರ್ಷಿ ವಾಲ್ಮೀಕಿ ನಿಗಮ ಮಂಡಳಿ ಅದ್ಯಕ್ಷರಾದ ಸಂದರ್ಭದಲ್ಲಿ ಕರ್ನಾಟಕದಲ್ಲಿ ಆನೇಕ ಕೆಲಸ ಕಾರ್ಯಗಳನ್ನ ಮಾಡಿದ್ದೆ. ಅದರೆ ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರ್ಕಾರದಲ್ಲಿ ವಾಲ್ಮೀಕಿ ಸಮುದಾಯಕ್ಕೆ ಯಾವ ಅಭಿವೃದ್ಧ ಯೋಜನೆ ಮಾಡದೆ ನಿರ್ಲಕ್ಷಿಸಲಾಗಿದೆ ಎಂದು ಜಗಳೂರು ಕ್ಷೇತ್ರದ ಮಾಜಿ ಶಾಸಕ ಎಸ್.ವಿ.ರಾಮಚಂದ್ರಪ್ಪ ಬೇಸರ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ನಾನು ಹಿಂದೆ ಬಿಜೆಪಿಯ ಸರ್ಕಾರದಲ್ಲಿ ಕರ್ನಾಟಕ ಮಹರ್ಷಿ ವಾಲ್ಮೀಕಿ ನಿಗಮ ಮಂಡಳಿ ಅದ್ಯಕ್ಷರಾದ ಸಂದರ್ಭದಲ್ಲಿ ಕರ್ನಾಟಕದಲ್ಲಿ ಆನೇಕ ಕೆಲಸ ಕಾರ್ಯಗಳನ್ನ ಮಾಡಿದ್ದೆ. ಅದರೆ ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರ್ಕಾರದಲ್ಲಿ ವಾಲ್ಮೀಕಿ ಸಮುದಾಯಕ್ಕೆ ಯಾವ ಅಭಿವೃದ್ಧ ಯೋಜನೆ ಮಾಡದೆ ನಿರ್ಲಕ್ಷಿಸಲಾಗಿದೆ ಎಂದು ಜಗಳೂರು ಕ್ಷೇತ್ರದ ಮಾಜಿ ಶಾಸಕ ಎಸ್.ವಿ.ರಾಮಚಂದ್ರಪ್ಪ ಬೇಸರ ವ್ಯಕ್ತಪಡಿಸಿದರು.

ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಆಂಗವಾಗಿ ಜನ ಜಾಗೃತಿಗಾಗಿ ಭಾನುವಾರ ದಾವಣಗೆರೆಯ ಜಿಲ್ಲಾ ವಾಲ್ಮೀಕಿನಾಯಕ ಯುವ ಘಟಕದ ವತಿಯಿಂದ ಏರ್ಪಡಿಸಿದ್ದ 8ನೇ ವರ್ಷದ ಬೈಕ್ ರ‍್ಯಾಲಿಗೆ ಇಲ್ಲಿನ ಶ್ರೀ ರಾಜವೀರ ಮದಕರಿನಾಯಕ ವೃತ್ತದಲ್ಲಿ (ಹೊಂಡದ ಸರ್ಕಲ್) ಚಾಲನೆ ನೀಡಿ ಮಾತನಾಡಿದರು.

ದಾವಣಗೆರೆ ಜಿಲ್ಲೆಯ ವಾಲ್ಮೀಕಿ ಸಮಾಜದ ಅಧ್ಯಕ್ಷ ಬಿ.ವೀರಣ್ಣ ಮಾತನಾಡಿ, ಜಿಲ್ಲಾ ವಾಲ್ಮೀಕಿ ನಾಯಕ ಯುವ ಘಟಕದ ಬೈಕ್ ರ‍್ಯಾಲಿ ಮೆರವಣಿಗೆಗೆ ವರ್ಷ ವರ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಸಮಾಜದ ಯುವಕರು ಸೇರುತ್ತಿದ್ದಾರೆ. ಇದು ನಮ್ಮ ಸಮಾಜದ ಸಂಘಟನೆಗೆ ಹೆಚ್ಚು ಆನುಕೂಲ ಆಗುತ್ತದೆ. ಹಾಗೂ ಇತ್ತೀಚೆಗೆ ಸರ್ಕಾರ ಅನ್ಯ ಸಮುದಾಯಗಳನ್ನು ಎಸ್‌ಟಿ ಪಟ್ಟಿಗೆ ಸೇರ್ಪಡೆ ಮಾಡಿರುವುದು ಖಂಡನೀಯ. ಇದಕ್ಕೆ ನಮ್ಮ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾಂದ ಮಹಾಸ್ವಾಮೀಜಿ ಅವರೊಂದಿಗೆ ಚರ್ಚಿಸಿ ಬೆಂಗಳೂರಿನದ್ಯಾಂತ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ವಾಲ್ಮೀಕಿ ನಾಯಕ ಯುವ ಘಟಕದ ಅಧ್ಯಕ್ಷ ಬಸವರಾಜ ತೋಟ, ಮುಖಂಡರಾದ ಶ್ರೀನಿವಾಸ ದಾಸಕರಿಯಪ್ಪ, ಮಾಜಿ ಮೇಯರ್‌ವಿನಾಯಕ ಪೈಲ್ವಾನ್, ಯಶವಂತರಾವ್‌ ಜಾಧವ್‌, ಲಕ್ಷ್ಮಣ ಕೆಟಿಜೆ ನಗರ, ಪ್ರಶಾಂತ, ಶಾಮನೂರು ಪ್ರವೀಣ, ಜಗದೀಶ, ಮಂಜುನಾಥ ಚುಕ್ಕಿ, ಕರುರು ಹನುಮಂತಪ್ಪ, ಲಿಂಗರಾಜ ಫಣಿಯಾಪುರ, ಗೋಶಾಲ ಸುರೇಶ, ಮಂಜು ಗೊಲ್ಲರಹಳ್ಳಿ, ಹದಡಿ ರಾಜಣ್ಣ, ಪರುಶುರಾಮ, ಅಣ್ಣಪ್ಪ, ಹಾಲೋಳ ದುರುಗೇಶ, ಎನ್.ಎಚ್.ಹಾಲೇಶ್, ನಾಗರಾಜ ಜಗಳೂರು, ಅವರಗೆರೆ ಪರುಶುರಾಮ ಸೇರಿ ಆನೇಕ ಸಮಾಜದ ಮುಖಂಡರು ಭಾಗವಹಿಸಿದ್ದರು. ಕ್ಯಾಪ್ಷನ5ಕೆಡಿವಿಜಿ35: ದಾವಣಗೆರೆಯಲ್ಲಿ ಭಾನುವಾರ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ನಡೆದ ಬೈಕ್ ರ‍್ಯಾಲಿಗೆ ಮಾಜಿ ಶಾಸಕ ಎಸ್.ವಿ.ರಾಮಚಂದ್ರಪ್ಪ ಚಾಲನೆ ನೀಡಿದರು. ಬಿ.ವೀರಣ್ಣ ಇತರರು ಇದ್ದರು.

PREV

Recommended Stories

ಪಿಎಸ್‌ಐ 545 ಹುದ್ದೆಗಳ ನೇಮಕ ಆದೇಶಕ್ಕೆ ಕೆಎಟಿ ತಾತ್ಕಾಲಿಕ ತಡೆ
ಕನ್ನಡಿಗ ಪಾಟೀಲ್‌ಗೆ ಅಮೆರಿಕ ಎಐ ಕಂಪನಿಯ ಉನ್ನತ ಹುದ್ದೆ