ಅಕ್ರಮಗಳ ತಡೆಯುವಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ: ಭೀಮುನಾಯಕ

KannadaprabhaNewsNetwork |  
Published : Feb 03, 2024, 01:46 AM IST
ವಡಗೇರಾ ಪಟ್ಟಣದಲ್ಲಿ ಖಾಸಗಿ ಹೋಟೆಲ್ ನಲ್ಲಿ ಕರವೇ ವಡಗೇರಾ ತಾಲೂಕು ಘಟಕದ ಪದಾಧಿಕಾರಿಗಳ ನೇಮಕ ಸಭೆ ನಡೆಯಿತು. | Kannada Prabha

ಸಾರಾಂಶ

ವಡಗೇರಾ ಪಟ್ಟಣದಲ್ಲಿ ಖಾಸಗಿ ಹೋಟೆಲ್‌ನಲ್ಲಿ ಕರವೇ ವಡಗೇರಾ ತಾಲೂಕು ಘಟಕದ ಪದಾಧಿಕಾರಿಗಳ ನೇಮಕ ಸಭೆ ನಡೆಯಿತು. ಇದೆ ಸಂದರ್ಭದಲ್ಲಿ ತಾಲೂಕು ಘಟಕ ಪದಾಧಿಕಾರಿಗಳ ನೇಮಕ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಯಾದಗಿರಿ

ನೂತನ ವಡಗೇರಾ ತಾಲೂಕಿನ ಜಲ್ವಂತ ಸಮಸ್ಯೆಗಳ ಕುರಿತು ಹೋರಾಟಕ್ಕೆ ಮುಂದಾಗಿ ಎಂದು ಕರವೇ ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ ಹೇಳಿದರು.

ಜಿಲ್ಲೆಯ ವಡಗೇರಾ ಪಟ್ಟಣದಲ್ಲಿ ಖಾಸಗಿ ಹೋಟೆಲ್‌ನಲ್ಲಿ ನಡೆದ ಕರವೇ ವಡಗೇರಾ ತಾಲೂಕು ಘಟಕದ ಪದಾಧಿಕಾರಿಗಳ ನೇಮಕ ಸಭೆಯಲ್ಲಿ ಮಾತನಾಡಿ

ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಿದ್ದು, ಎಲ್ಲಾ ಕಡೆ ಅಕ್ರಮ ಮರಳು ದಂಧೆ, ಮಟ್ಕಾ, ಇಸ್ಪೀಟ್ ಇನ್ನಿತರ ಅಕ್ರಮ ಭ್ರಷ್ಟಾಚಾರ ನಡೆಯುತ್ತಿದ್ದರೂ ಅಧಿಕಾರಿಗಳು ಮಾತ್ರ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಆರೋಪಿಸಿದರು. ಆದ್ದರಿಂದ ತಾಲೂಕಿನ ನೂತನ ಪದಾಧಿಕಾರಿಗಳು ಈ ಕುರಿತು ಹೋರಾಟದ ರೂಪುರೇಷೆಗಳ ತಯಾರಿಸುವಂತೆ ಸಲಹೆ ನೀಡಿದರು. ಕರವೇ ವಡಗೇರಾ ತಾಲೂಕಾಧ್ಯಕ್ಷ ಅಬ್ದುಲ್ ಚಿಗಾನೂರ ಮಾತನಾಡಿದರು.

ಪದಾಧಿಕಾರಿಗಳ ಆಯ್ಕೆ: ಶಿವರಾಜ ನಾಡಗೌಡ (ಗೌರವಾಧ್ಯಕ್ಷ), ಸಿದ್ದು ಪೂಜಾರಿ ತುಮಕೂರು ( ಪ್ರಧಾನ ಕಾರ್ಯದರ್ಶಿ), ಅಯ್ಯಣ್ಣ ಜೆರಬಂಡಿ, ಶರಣು ಗೊಂದೇನೂರ್, ಬಸ್ಸಯ್ಯ ಸ್ವಾಮಿ, ಸುರೇಶ ಬಾಡದ (ಉಪಾಧ್ಯಕ್ಷ), ಪೀರಸಾಬ್ ಮರಡಿ, ಭೀಮು ಮಳ್ಳಳ್ಳಿ (ಸಹ ಕಾರ್ಯದರ್ಶಿ), ರಮೇಶ್ ದೇವರೆಡ್ಡಿ, ಫಿಡ್ಡಪ್ಪ ನಾಯಕ (ಸಂಘಟನಾ ಕಾರ್ಯದರ್ಶಿ), ಬಸವಲಿಂಗ ತುಮಕೂರ್, ಅಬ್ದುಲ್ ಖತಾಲಿ (ಪ್ರಧಾನ ಸಂಚಾಲಕರು), ದೇವು ಜಡಿ (ಖಜಾಂಚಿ), ಜುಬಲಪ್ಪ ಕಟ್ಟಿಮನಿ, ಬಸವರಾಜ ಕೊದಡ್ಡಿ, ರಫೀಕ್ ದೇವದುರ್ಗ (ಸಂಚಾಲಕರು), ದೇವು ನಾಯಕ ಬುಸೇನಿ (ಯುವ ಘಟಕದ ತಾಲೂಕಾಧ್ಯಕ್ಷ), ಮಲ್ಲು ಜಡಿ (ವಿದ್ಯಾರ್ಥಿ ಘಟಕ ತಾಲೂಕಾಧ್ಯಕ್ಷ) ಶ್ರೀನಿವಾಸ್ ಮಡಿವಾಳ (ನಗರಾಧ್ಯಕ್ಷ ವಡಗೇರಾ), ಮೊಹ್ಮದ್ ಖತಾಲಿ (ಸಾಮಾಜಿಕ ಜಾಲತಾಣ ಸಂಚಾಲಕ), ಬಸ್ಸು ಬುಸೇನಿ (ವಿದ್ಯಾರ್ಥಿ ಘಟಕದ ಪ್ರಧಾನ ಕಾರ್ಯದರ್ಶಿ), ಸತೀಶ್ ಜಡಿ (ಹೋಬಳಿ ಅಧ್ಯಕ್ಷ), ಸಾಬು ಬೆಂಡೆಬೆಂಬಳಿ (ಹೋಬಳಿ ಅಧ್ಯಕ್ಷ ಬೆಂಡೆಬೆಂಬಳಿ), ಸೋಮು ಕರ್ನಾಲ್ (ಹೋಬಳಿ ಅಧ್ಯಕ್ಷ ಹಯ್ಯಾಳ), ಭರತರಾಜ್ ಯಾದಗಿರಿ (ಹೋಬಳಿ ಪ್ರಧಾನ ಕಾರ್ಯದರ್ಶಿ), ರಾಮಪ್ಪ ನಾಟೆಕಾರ್ (ಹಾಲಗೇರಾ ಗ್ರಾಮ ಘಟಕ ಅಧ್ಯಕ್ಷ), ದೇವಿಂದ್ರಪ್ಪ (ಟಿ. ವಡಗೇರಾ ಗ್ರಾ.ಘ.ಅಧ್ಯಕ್ಷ), ಮಲ್ಲು ದೊರೆ (ಇಟಗಿ. ಗ್ರಾ.ಘ.ಅಧ್ಯಕ್ಷ), ಅಂಬ್ರೆಶ್ ಹೇರುಂಡಿ (ಐಕೂರ್ ಗ್ರಾ.ಘ.ಅಧ್ಯಕ್ಷ), ನೇಮಕ ಮಾಡಲಾಯಿತು.

ಜಿಲ್ಲಾ ಉಪಾಧ್ಯಕ್ಷ ಚೌಡಯ್ಯ ಬಾವುರ್, ಹಣಮಂತ ತೇಕರಾಳ, ವಿಶ್ವರಾಜ್ ಹೋನಾಗೇರ, ಬಸವರೆಡ್ಡಿ ಹಬಿಶಿಹಾಳ, ಜಿಲ್ಲಾ ತಾಲೂಕು ಪದಾಧಿಕಾರಿಗಳು ಹಾಗೂ ಕರವೇ ಕಾರ್ಯಕರ್ತರಿದ್ದರು.

PREV

Recommended Stories

ಗ್ರಾಮೀಣ ಭಜನಾ ಮಂಡಳಿಗಳಲ್ಲಿ ತತ್ವಪದಗಳು ಜೀವಂತ
ರಾಮದುರ್ಗ ಧನಲಕ್ಷ್ಮೀ ಶುಗರ್ ಚುನಾವಣೆ: ಸತತ 4ನೇ ಬಾರಿಗೆ ಯಾದವಾಡರ ನೇತೃತ್ವಕ್ಕೆ ಜಯ