ನೆಹರೂ ಅಪ್ಪಟ ದೇಶ ಪ್ರೇಮ ಹೊಂದಿದ್ದ ನಾಯಕ

KannadaprabhaNewsNetwork |  
Published : May 28, 2025, 12:10 AM IST
ನೆಹರೂ ಅಪ್ಪಟ ದೇಶ ಪ್ರೇಮ ಹೊಂದಿದ್ದ ನಾಯಕ | Kannada Prabha

ಸಾರಾಂಶ

ವಿದೇಶದಲ್ಲಿ ಕಲಿತಿದ್ದರು, ದೇಶದ ಸ್ವಾತಂತ್ರಕ್ಕಾಗಿ ಮಹಾತ್ಮ ಗಾಂಧಿಯೊಂದಿಗೆ ಸೇರಿ ದೇಶಕ್ಕೆ ಸ್ವಾತಂತ್ರ ದೊರಕಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದ ಪಂಡಿತ ಜವಹರಲಾಲ್ ನೆಹರು, ಅಪ್ಪಟ್ಟದೇಶ ಪ್ರೇಮ ಹೊಂದಿದ್ದ ನಾಯಕ ಎಂದು ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕೆಂಚಮಾರಯ್ಯ ಅಭಿಪ್ರಾಯಪಟ್ಟಿದ್ದಾರೆ.

ಕನ್ನಡಪ್ರಭ ವಾರ್ತೆ, ತುಮಕೂರುವಿದೇಶದಲ್ಲಿ ಕಲಿತಿದ್ದರು, ದೇಶದ ಸ್ವಾತಂತ್ರಕ್ಕಾಗಿ ಮಹಾತ್ಮ ಗಾಂಧಿಯೊಂದಿಗೆ ಸೇರಿ ದೇಶಕ್ಕೆ ಸ್ವಾತಂತ್ರ ದೊರಕಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದ ಪಂಡಿತ ಜವಹರಲಾಲ್ ನೆಹರು, ಅಪ್ಪಟ್ಟದೇಶ ಪ್ರೇಮ ಹೊಂದಿದ್ದ ನಾಯಕ ಎಂದು ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕೆಂಚಮಾರಯ್ಯ ಅಭಿಪ್ರಾಯಪಟ್ಟಿದ್ದಾರೆ. ನಗರದ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಆಯೋಜಿಸಿದ್ದ ದೇಶದ ಮೊದಲ ಪ್ರಧಾನಿ ಪಂಡಿತ ಜವಹರಲಾಲ್ ನೆಹರು ಅವರು 61ನೇ ಪುಣ್ಯಸ್ಮರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಅತ್ಯಂತ ಶ್ರೀಮಂತ ಕುಟುಂಬದಲ್ಲಿ ಹುಟ್ಟಿ, ಸಾವಿರಾರು ಕೋಟಿ ರೂಗಳ ಆಸ್ತಿಯನ್ನು ಸರಕಾರಕ್ಕೆ ದಾನ ನೀಡಿ,ದೇಶವನ್ನು ಸುಭೀಕ್ಷವಾಗಿ ಕಟ್ಟಲು ಕಟ್ಟಿಬದ್ದರಾಗಿ ದುಡಿದವರು ಪಂಡಿತ ನೆಹರು.ಪಂಚವಾರ್ಷಿಕ ಯೋಜನೆಗಳು, ಅಲಿಪ್ತ ನೀತಿಯ ಮೂಲಕ ಭಾರತ ಎಲ್ಲ ರಂಗದಲ್ಲಿಯೂ ಉನ್ನತ್ತಿ ಸಾಧಿಸಲು ಕಾರಣರಾದರು. ನೆರೆಯ ರಾಷ್ಟ್ರಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು ಎಂದರು.ಜಿಲ್ಲಾಕಾಂಗ್ರೆಸ್ ಎಸ್ಟಿ ಘಟಕದ ಉಪಾಧ್ಯಕ್ಷ ಎಚ್.ಸಿ.ಹನುಮಂತಯ್ಯ ಮಾತನಾಡಿ,ದೇಶಕ್ಕೆ ಸ್ವಾತಂತ್ರ ಬಂದಾಗ ಬಡತನವನ್ನೇ ಹೊದ್ದು ಮಲಗಿದ್ದ ರಾಷ್ಟ್ರವನ್ನು ತನ್ನ ದೂರದೃಷ್ಠಿ ನಾಯಕತ್ವದಿಂದ ಮುಂದುವರೆದ ರಾಷ್ಟ್ರಗಳ ಪಾಲಿಗೆ ಕೀರ್ತಿ ನೆಹರು ಅವರಿಗೆ ಸಲ್ಲುತ್ತದೆ. ಅಂದು ನೆಹರು ಕುಟುಂಬ ಕಟ್ಟಿದ ಭದ್ರ ತಳಹದಿಯ ಮೇಲೆ, ಇಂದು ಭಾರತ ಒಂದೊಂದೇ ಅಭಿವೃದ್ದಿ ಕಾಣಲು ಸಾಧ್ಯವಾಗಿದೆ ಎಂದರು.ಕಾಂಗ್ರೆಸ್ ಮುಖಂಡರಾದ ಸಿಮೆಂಟ್ ಮಂಜಣ್ಣ, ನರಸೀಯಪ್ಪ, ಷಣ್ಮುಖಪ್ಪ, ಶಿವಾಜಿ ಅವರು ಮಾತನಾಡಿದವರು. ಈ ವೇಳೆ ಹಿರಯರಾದ ರೇವಣ್ಣ ಸಿದ್ದಯ್ಯ, ಸಂಜೀವಕುಮಾರ್, ಸಿದ್ದಲಿಂಗೇಗೌಡ, ತುಮುಲ್ ನಿರ್ದೇಶಕ ನಾಗೇಶಬಾಬು, ಗಂಗಾಧರ್, ಸುಜಾತ, ಆದಿಲ್, ಇರ್ಫಾನ್, ಕವಿತಾ, ಸೌಭಾಗ್ಯ, ಲಕ್ಷ್ಮಿದೇವಮ್ಮ, ಸಿಂಡಿಕೇಟ್ ಸದಸ್ಯ ಶಿವಣ್ಣ, ಓ.ಸಿ.ಕೃಷ್ಣಪ್ಪ, ಕೆಂಪಣ್ಣ, ಕೈದಾಳ ರಮೇಶ್, ಭಾಗ್ಯಮ್ಮ ಸೇರಿದಂತೆ ಹಲವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ