ನೆಲವಾಗಿಲು ಗ್ರಾಪಂ ಅಧ್ಯಕ್ಷ ಗೋಪಾಲಪ್ಪ ಅವಿರೋಧ ಆಯ್ಕೆ

KannadaprabhaNewsNetwork |  
Published : May 29, 2025, 12:23 AM ISTUpdated : May 29, 2025, 12:24 AM IST
ಫೋಟೋ: 28 ಹೆಚ್‌ಎಸ್‌ಕೆ 1ಹೊಸಕೋಟೆ ತಾಲೂಕಿನ ನಂದಗುಡಿ ಹೋಬಳಿಯ ನೆಲವಾಗಿಲು ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷರಾಗಿ ಎಂ. ಗೋಪಾಲಪ್ಪ, ಉಪಾಧ್ಯಕ್ಷರಾಗಿ ವಿ.ಶಿಲ್ಪಶ್ರೀ ಮುನಿರಾಜು ಅವಿರೋಧವಾಗಿ ಅಯ್ಕೆಯಾಗಿದ್ದು ಗ್ರಾಪಂನ ಎಲ್ಲಾ ಸದಸ್ಯರು ಅಭಿನಂದಿಸಿದರು. | Kannada Prabha

ಸಾರಾಂಶ

ಹೊಸಕೋಟೆ: ನಂದಗುಡಿ ಹೋಬಳಿಯ ನೆಲವಾಗಿಲು ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷರಾಗಿ ಚಿಕ್ಕೊಂಡಹಳ್ಳಿಯ ಎಂ.ಗೋಪಾಲಪ್ಪ, ಉಪಾಧ್ಯಕ್ಷರಾಗಿ ಕಾರಹಳ್ಳಿ-ಯಶವಂತಪುರದ ವಿ.ಶಿಲ್ಪಶ್ರೀ ಮುನಿರಾಜು ಅವಿರೋಧವಾಗಿ ಅಯ್ಕೆಯಾಗಿದ್ದಾರೆ.

ಹೊಸಕೋಟೆ: ನಂದಗುಡಿ ಹೋಬಳಿಯ ನೆಲವಾಗಿಲು ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷರಾಗಿ ಚಿಕ್ಕೊಂಡಹಳ್ಳಿಯ ಎಂ.ಗೋಪಾಲಪ್ಪ, ಉಪಾಧ್ಯಕ್ಷರಾಗಿ ಕಾರಹಳ್ಳಿ-ಯಶವಂತಪುರದ ವಿ.ಶಿಲ್ಪಶ್ರೀ ಮುನಿರಾಜು ಅವಿರೋಧವಾಗಿ ಅಯ್ಕೆಯಾಗಿದ್ದಾರೆ.

ನೂತನ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಗೋಪಾಲಪ್ಪ, ಉಪಾಧ್ಯಕ್ಷ ಸ್ಥಾನಕ್ಕೆ ಶಿಲ್ಪಶ್ರೀ ಅವರನ್ನು ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಸಿ.ಎಲ್.ಸತೀಶ್ ಅವಿರೋಧ ಆಯ್ಕೆ ಘೋಷಿಸಿದರು.

ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಬಿ.ವಿ.ರಾಜಶೇಖರಗೌಡ ಮಾತನಾಡಿ, ಅಧ್ಯಕ್ಷ, ಉಪಾಧ್ಯಕ್ಷರು ಇರುವ ಕಡಿಮೆ ಅವಧಿಯಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಅಗತ್ಯ ಮೂಲ ಸೌಲಭ್ಯಗಳಾದ ಕುಡಿಯುವ ನೀರು, ಚರಂಡಿ, ಬೀದಿ ದೀಪ ಸೇರಿದಂತೆ ಸಮರ್ಪಕವಾಗಿ ಸೇವೆ ಒದಗಿಸುವಲ್ಲಿ ಪಕ್ಷ ಬೇಧ ಮರೆತು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ ಜನರ ಋಣ ತೀರಿಸಬೇಕು ಎಂದು ಹೇಳಿದರು.

ನೂತನ ಅಧ್ಯಕ್ಷ ಚಿಕ್ಕೊಂಡಹಳ್ಳಿ ಗೋಪಾಲಪ್ಪ ಮಾತನಾಡಿ, ನಾನು ಗ್ರಾಪಂನಲ್ಲಿ ಕಳೆದ ಎರಡು ಭಾರಿ ಸದಸ್ಯನಾಗಿದ್ದೆ. ಆದರೆ ಮೂರನೇ ಬಾರಿಗೆ ಸದಸ್ಯನಾದ ಸಂದರ್ಭದಲ್ಲಿ ಅಧ್ಯಕ್ಷ ಗಾದಿ ಒಲಿದು ಬಂದಿದೆ. ನನ್ನ ಮೇಲೆ ವಿಶ್ವಾಸವಿಟ್ಟು ಎಲ್ಲಾ ಸದಸ್ಯರು ಅಧ್ಯಕ್ಷನಾಗಿ ಅವಿರೋಧವಾಗಿ ಆಯ್ಕೆಯಾಗಲು ಸಹಕರಿಸಿದ್ದು ಮುಂದಿನ ದಿನಗಳಲ್ಲಿ ಎಲ್ಲಾ ಸದಸ್ಯರ ವಿಶ್ವಾಸದೊಂದಿಗೆ ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಹೇಳಿದರು.

ಈ ವೇಳೆ ಜಿಪಂ ಮಾಜಿ ಅಧ್ಯಕ್ಷೆ ಸವಿತಾ ಗೋಪಾಲ್, ತಾಪಂ ಮಾಜಿ ಸದಸ್ಯ ಬೀರಪ್ಪ, ನೆಲವಾಗಿಲು ಎಸ್‌ಎಫ್‌ಸಿಎಸ್ ನಿರ್ದೇಶಕರಾದ ಎನ್.ಡಿ.ರಮೇಶ್, ಎಚ್.ಕೆ.ನಾರಾಯಣಗೌಡ, ಎಚ್.ಎನ್.ಧರ್ಮೇಶ್, ಸಿ.ಎಂ.ನಾರಾಯಣಸ್ವಾಮಿ, ದಿನೇಶ್, ಮಾಜಿ ಅಧ್ಯಕ್ಷ ಎನ್. ಶ್ರೀನಿವಾಸ್, ಪಿಡಿಒ ಎಂ.ಕಾಂತರಾಜು, ಗ್ರಾಪಂ ಸದಸ್ಯರಾದ ವಸಂತ ಲೋಕೇಶ್, ಪದ್ಮಾನಾಗೇಶ್, ವಿ.ರುಕ್ಮಿಣಿ ಮಂಜುನಾಥ್, ಸೊಣ್ಣೇಗೌಡ, ಮಧುಸೂದನ್, ರವಿ, ಬಸವರಾಜು, ಮುನಿರತ್ನಮ್ಮ, ಸುಮಾ, ಕವಿತಾ, ಆಶಾ, ಮಾಲಾ, ಮಂಜುಳ, ಸುರೇಶ್, ಎನ್.ಎನ್.ಮಂಜುನಾಥ್, ಸವಿತಾ ಬೈರೇಗೌಡ ಎಂಪಿಸಿಎಸ್ ಮಾಜಿ ಅಧ್ಯಕ್ಷ ಜಿ.ಮೂರ್ತಿ ಹಾಗೂ ಕಾರ್ಯಕರ್ತರು ಹಾಜರಿದ್ದರು.ಫೋಟೋ: 28 ಹೆಚ್‌ಎಸ್‌ಕೆ 1

ಹೊಸಕೋಟೆ ತಾಲೂಕಿನ ನಂದಗುಡಿ ಹೋಬಳಿಯ ನೆಲವಾಗಿಲು ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷ ಎಂ.ಗೋಪಾಲಪ್ಪ, ಉಪಾಧ್ಯಕ್ಷೆ ವಿ.ಶಿಲ್ಪಶ್ರೀ ಮುನಿರಾಜು ಅವರನ್ನು ಮುಖಂಡರು, ಸದಸ್ಯರು ಅಭಿನಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ