ಶೃಂಗೇರಿಬಿರುಕು ಬಿಟ್ಟ ಗೋಡೆ, ಮಳೆಗೆ ಸೋರುವ ಜತೆಗೆ ಗೋಡೆಯ ಮೇಲಿಂದ ನೀರು ಇಳಿದು ನೆಲವೆಲ್ಲ ಒದ್ದೆ ನೀರು ಸೋರುವ ಕಡೆ ಬಕೀಟು ಇಟ್ಟು ಸಿಬ್ಬಂದಿ ಕಾಯಬೇಕಾದ ಅನಿವಾರ್ಯತೆ.
- ಅಂಚೆ ಕಚೇರಿಯ ದುಸ್ಥಿತಿ
-ಸೋರುವ ನೀರಿನ ಮಧ್ಯೆ ಕೆಲಸ ಮಾಡುವ ಸ್ಥಿತಿ । ಕಾಲುಶತಮಾನ ಕಳೆದರೂ ಸುಣ್ಣಬಣ್ಣ ಕಂಡಿಲ್ಲ
- ನೆಮ್ಮಾರ್ ಅಬೂಬಕರ್
ಕನ್ನಡಪ್ರಭ ವಾರ್ತೆ, ಶೃಂಗೇರಿ
ಬಿರುಕು ಬಿಟ್ಟ ಗೋಡೆ, ಮಳೆಗೆ ಸೋರುವ ಜತೆಗೆ ಗೋಡೆಯ ಮೇಲಿಂದ ನೀರು ಇಳಿದು ನೆಲವೆಲ್ಲ ಒದ್ದೆ ನೀರು ಸೋರುವ ಕಡೆ ಬಕೀಟು ಇಟ್ಟು ಸಿಬ್ಬಂದಿ ಕಾಯಬೇಕಾದ ಅನಿವಾರ್ಯತೆ.
ಇದು ನೆಮ್ಮಾರು ಪಂಚಾಯಿತಿ ವ್ಯಾಪ್ತಿಯ ಶಿಥಿಲಾವಸ್ಥೆಯಲ್ಲಿರುವ ನೆಮ್ಮಾರು ಅಂಚೆ ಕಚೇರಿ ಕಟ್ಟಡದ ದುಸ್ಥಿತಿ.
ಈ ಕಟ್ಟಡ ನಿರ್ಮಾಣವಾಗಿ ಸುಮಾರು 30 ವರ್ಷಗಳಿಗೂ ಹೆಚ್ಚು ಸಮಯವಾಗಿದೆ. ಒಮ್ಮೆಯೂ ದುರಸ್ತಿ ಭಾಗ್ಯ ಕಂಡಿಲ್ಲ. ಛಾವಣಿ ಹಾಳಾಗಿ ಹೆಂಚಿನ ಮೇಲೆಲ್ಲ ಹುಲ್ಲು ಬೆಳೆದು ನಿಂತಿದೆ. ಜೋರಾಗಿ ಮಳೆ ಬಂದಾಗ ನೀರೆಲ್ಲ ಒಳಗೆ ಸಂಗ್ರಹವಾಗಿ ನಿಲ್ಲುತ್ತದೆ. ಕಚೇರಿಯೊಳಗಿನ ಕಪಾಟುಗಳು, ಟೇಬಲ್ಲು, ಕುರ್ಚಿಗಳು ಒದ್ದೆಯಾಗುತ್ತವೆ. ಈ ಹಿಂದೆ ಬೇರೆ ಕಡೆ ಇದ್ದ ಕಟ್ಟಡದಿಂದ ಸುಮಾರು 30 ವರ್ಷಗಳ ಹಿಂದೆ ಅಂಚೆ ಕಚೇರಿ ಈಗಿರುವ ಕಟ್ಟಡಕ್ಕೆ ಸ್ಥಳಾಂತರಿಸಲಾಗಿತ್ತು. ಹಲವು ವರ್ಷಗಳ ಹಿಂದಿನಿಂದಲೂ ಕಟ್ಟಡಕ್ಕೆ ಈ ದುಸ್ಥಿತಿ ಒದಗಿದರೂ ಈವರೆಗೂ ದುರಸ್ತಿಯೇ ಆಗಿಲ್ಲ.
ಮೇಲ್ಛಾವಣಿ ಸಂಪೂರ್ಣ ಶಿಥಿಲ. ಹುಲ್ಲ ಬೆಳೆದು ಪಾಚಿ ಕಟ್ಟಿರುವುದರಿಂದ ಮಳೆ ನೀರು ಸರಾಗವಾಗಿ ಸಾಗದೇ ಅಲ್ಲಲ್ಲಿ ಸೋರುತ್ತದೆ. ಈ ಅವ್ಯವಸ್ಥೆಯ ಕಟ್ಟಡಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ. ಪಕ್ಕದಲ್ಲಿಯೇ ಗ್ರಾಮಪಂಚಾಯಿತಿ ಕಚೇರಿಯಿದೆ. ಈ ಅಂಚೆ ಕಚೇರಿಗೆ ಇಂತಹ ದುಸ್ಥಿತಿ ಬಂದಿದ್ದರೂ ಸಂಬಂಧಪಟ್ಟ ಇಲಾಖೆಯಾಗಲೀ, ಸರ್ಕಾರವಾಗಲೀ ಈವರೆಗೂ ಗಂಭೀರವಾಗಿ ಪರಿಗಣಿಸಿಲ್ಲ. ಸೋರುವ ಮಳೆ ನೀರಿಗೆ ಬಕೀಟು ಇಡುವ ಸಿಬ್ಬಂದಿ ಮುಂದೆ ಕೊಡೆ ಹಿಡಿದು ಕೆಲಸ ಮಾಡುವ ಪರಿಸ್ಥಿತಿ ಬಂದರೂ ಬರಬಹುದು.
ಕೇವಲ ಅಂಚೆ ಇಲಾಖೆ ನೌಕರ ಸಿಬ್ಬಂದಿಗಲ್ಲದೆ ಇಲ್ಲಿಗೆ ಬರುವ ಜನರಿಗೂ ಕಿರಿಕಿರಿ ಅನುಭವಿಸುವಂತಾಗಿದೆ. ಈಗಾಗಲೇ ಸುಮಾರು 7-8 ವರ್ಷಗಳಿಂದ ಇಲ್ಲಿನ ಅಂಚೆ ಇಲಾಖೆ ಸಿಬ್ಬಂದಿ ಸಂಬಂಧಪಟ್ಟವರ ಗಮನಕ್ಕೆ ತರುತ್ತಿ ದ್ದರೂ ಮನವಿ, ಅಹವಾಲುಗಳಿಗೆ ಯಾವುದೇ ರೀತಿ ಸ್ಪಂದಿಸಿಲ್ಲ. ಈ ಕಟ್ಟಡಕ್ಕೆ ಕಾಯಕಲ್ಪವಾಗಲೀ, ದುರಸ್ತಿ ಭಾಗ್ಯವಾಗಲಿ ಸಿಕ್ಕಿಲ್ಲ. ಮಳೆ ಬರುತ್ತಲೇ ಇದೇ, ನೀರು ಸೋರುತ್ತಲೇ ಇದೆ. ಇಷ್ಟೆಲ್ಲ ಅವ್ಯವಸ್ತೆಯ ಕಟ್ಟಡಕ್ಕೆ ಬಾಗಿಲೂ ಸಹ ಭದ್ರವಾಗಿಲ್ಲ. ಸುಣ್ಣ ಬಣ್ಣವಂತೂ ದೂರದ ಮಾತು.
ಕಾಲು ಶತಮಾನ ದಾಟಿದರೂ ಈ ಕಟ್ಟಡ ಮಾತ್ರ ಹಂತಹಂತವಾಗಿ ಶಿಥಿಲಾವಸ್ಥೆಗೆ ತಲುಪುತ್ತಿದೆಯೆ ವಿನಃ ಸಂಬಂಧ ಪಟ್ಟ ಅಧಿಕಾರಿಗಳು, ಜನಪ್ರತಿನಿದಿಗಳು ಸರ್ಕಾರ ಇತ್ತ ಗಮನಹರಿಸಿ ಇದರ ದುರವಸ್ಥಿ ನೀಗಿಸಲು ಯತ್ನಿಸಿಲ್ಲ ಎಂಬುದು ಅಧಿಕಾರಿಗಳ ಕಾರ್ಯವೈಖರಿಗೆ ಹಿಡಿದ ಕನ್ನಡಿ.
ಕೋಟ್....
ಈ ಕಟ್ಟಡ ಶಿಥಿಲಗೊಳ್ಳುತ್ತಾ 30 ವರ್ಷಗಳೂ ದಾಟಿದರೂ ಇನ್ನೂ ದುರಸ್ತಿ ಮಾಡುತ್ತಿಲ್ಲ. ಸರ್ಕಾರಗಳು ಅನಗತ್ಯವಾಗಿ ಕೆಲ ಕಟ್ಟಡಗಳಿಗೆ ವೆಚ್ಚಮಾಡುತ್ತದೆ. ಆದರೆ ಉಪಯುಕ್ತ ಇಂತಹ ಕಟ್ಚಡದ ದುರಸ್ತಿ ಮಾಡದೇ ನಿರ್ಲಕ್ಷ್ಯ ವಹಿಸಲಾಗುತ್ತಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳಬೇಕು. ಕಟ್ಟಡವನ್ನು ದುರಸ್ತಿ ಪಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು.
-ಕೃಷ್ಣ ಸಾಲ್ಮರ, ನೆಮ್ಮಾರ್.
3 ಶ್ರೀ ಚಿತ್ರ 1-ಶೃಂಗೇರಿ ನೆಮ್ಮಾರು ಅಂಚೆಕಚೇರಿ ಕಟ್ಟಡ ಕಾಯಕಲ್ಪ ಕಾಣದೇ ಶಿಥಿಲಾವಸ್ಥೆಯಲ್ಲಿರುವುದು.
3 ಶ್ರೀ ಚಿತ್ರ 2-ಒಳಗೋಡೆ ಮೇಲೆ ಮಳೆ ನೀರು ಸೋರಿ ಬಿರುಕು ಬಿಟ್ಟಿರುವುದು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.