ಕನ್ನಡಪ್ರಭ ವಾರ್ತೆ, ತುಮಕೂರು
ತಾಲೂಕಿನ ಹೆಬ್ಬಾಕ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಏರ್ಪಡಿಸಿದ್ದ ಪೋಷಣ್ ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಸ್ತುತ ಪೋಷಕರು ಮತ್ತು ಮಕ್ಕಳು ಜಂಕ್ ಫುಡ್‌ಗಳಿಗೆ ಮಾರು ಹೋಗುತ್ತಿದ್ದಾರೆ. ಇದು ಆರೋಗ್ಯಕ್ಕೆ ಹಾನಿಕಾರಕ. ಯಾವುದೇ ಕಾರಣ ಜಂಕ್ ಫುಡ್‌ಗಳನ್ನು ಸೇವಿಸಬಾರದು. ಬದಲಾಗಿ ಪೌಷ್ಟಿಕ ಆಹಾರ ಸೇವನೆಗೆ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.ಪ್ರತಿ ಮನೆಯಲ್ಲೇ ಇರುವ ಬೆಲ್ಲ, ಕಡಲೆಬೀಜ, ಹೆಸರು ಕಾಳುಗಳನ್ನು ಸೇವಿಸಿದರೆ ಪೌಷ್ಟಿಕತೆ ಹೆಚ್ಚುತ್ತದೆ. ಇದರೊಂದಿಗೆ ನವಣೆ ಸೇರಿ ಸಿರಿಧಾನ್ಯ ಆಹಾರದಲ್ಲಿ ಬಳಸುವಂತೆಯೂ ಅವರು ತಿಳಿಸಿದರು.
ನಮ್ಮ ಜೀವನದಲ್ಲಿ ಕೆಟ್ಟ ಅಭ್ಯಾಸಗಳನ್ನು ಬೆಳೆಸಿಕೊಳ್ಳಬಾರದು. ಇದೇ ಆರೋಗ್ಯಕ್ಕೆ ಹಾನಿಕಾರಕ. ಇದರಿಂದ ಒಂದು ಬಾರಿ ಆರೋಗ್ಯ ಹದಗೆಟ್ಟರೆ ಸರಿಪಡಿಸುವುದು ಇಂದು ಬಹಳ ಕಷ್ಟವಾಗುತ್ತಿದೆ. ಆದ್ದರಿಂದ ಯಾರೂ ಸಹ ದುರಭ್ಯಾಸಗಳಿಗೆ ಮಾರು ಹೋಗಬಾರದು ಎಂದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ಅನುಷಾ, ಕೋರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಇಂದು, ಹಿರಿಯ ಪತ್ರಕರ್ತ ಎಚ್.ಎನ್. ಮಲ್ಲೇಶ್, ಹೆಬ್ಬಾಕ ಸಿಎಚ್ಓ ಪ್ರಿಯ, ಅಂಗನವಾಡಿ ಕಾರ್ಯಯಕರ್ತೆಯರಾದ ಲೀಲಾವತಿ, ಕಮಲಮ್ಮ, ಗೀತಾ, ಜಯಲಕ್ಷ್ಮಮ್ಮ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.