: ಸೂರಿಂಜೆ ಬೊಳ್ಳಾರುಗುತ್ತಿನ ಬಾಕಿಮಾರು ಗದ್ದೆಯಲ್ಲಿ ಎ. 2 ರಿಂದ 8 ರ ವರೆಗೆ ಬೊಳ್ಳಾರಗೋಳಿ ಪಂಚ ದೈವಗಳ ನೇಮೋತ್ಸವದ ಸಂಭ್ರಮವು ವಿವಿಧ ಸಾಂಸ್ಕೃತಿಕ ಹಾಗೂ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ನಡೆಯಲಿದೆ ಎಂದು ಬೊಳ್ಳಾರಗೋಳಿ ಪಂಚ ದೈವಗಳ ನೇಮೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ್ ಸೂರಿಂಜೆ
ಮೂಲ್ಕಿ: ಸೂರಿಂಜೆ ಬೊಳ್ಳಾರುಗುತ್ತಿನ ಬಾಕಿಮಾರು ಗದ್ದೆಯಲ್ಲಿ ಎ. 2 ರಿಂದ 8 ರ ವರೆಗೆ ಬೊಳ್ಳಾರಗೋಳಿ ಪಂಚ ದೈವಗಳ ನೇಮೋತ್ಸವದ ಸಂಭ್ರಮವು ವಿವಿಧ ಸಾಂಸ್ಕೃತಿಕ ಹಾಗೂ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ನಡೆಯಲಿದೆ ಎಂದು ಬೊಳ್ಳಾರಗೋಳಿ ಪಂಚ ದೈವಗಳ ನೇಮೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ್ ಸೂರಿಂಜೆ ಹೇಳಿದರು.
ಸುರತ್ಕಲ್ ನ ಸೂರಜ್ ಹೊಟೇಲ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸುಮಾರು 63 ವರ್ಷಗಳ ಬಳಿಕ ಬೊಳ್ಳಾರಗೋಳಿಯಲ್ಲಿ ಪಂಚ ದೈವಗಳ ನೇಮೋತ್ಸವವು ಕುತ್ತೆತ್ತೂರು-ಸೂರಿಂಜೆ ಮಿತ್ತೋಡಿ ಅರಸು ಮನೆ ಅಶೋಕ ಪ್ಯೆವ ಹೆಗ್ಡೆ, ಶಿಬರೂರು ಕೊಡಮಣಿತ್ತಾಯ ದೈವಸ್ಥಾನದ ತಿಬಾರ ಗುತ್ತಿನಾರ್ ಉಮೆಶ್ ಎನ್ ಶೆಟ್ಟಿ, ಪಂಜದ ಗುತ್ತು ಮನೆತನ, ಬೊಳ್ಳಾರುಗುತ್ತು ಕುಟುಂಬಿಕರ ಸಹಕಾರದೊಂದಿಗೆ ವೇದಮೂರ್ತಿ ಶ್ರೀ ಮೂಡಿತ್ತಾಯ ಹಯವದನ ಭಟ್ ಕ್ಯೆಯ್ಯೂರು ನೇತ್ರತ್ವದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಲಿದೆ. ಏ. 2ರ ಮಧ್ಯಾಹ್ನ 3 ಗಂಟೆಗೆ ಪೊನ್ನಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಹೊರೆಕಾಣಿಕೆ ಮೆರವಣಿಗೆ ಹೊರಡಲಿದ್ದು 3 ರ ಸಂಜೆ 3 ಗಂಟೆಗೆ ಪಂಚ ದೈವಗಳ ಭಂಡಾರ ಆಗಮಿಸಿ ರಾತ್ರಿ ಪಂಚ ದೈವಗಳ ದರ್ಶನ., 4 ರ ಬೆಳಿಗ್ಗೆ 10 ಗಂಟೆಗೆ ಶಿಬರೂರು ಶ್ರೀ ಉಳ್ಳಾಯ ದೈವದ ನೇಮೋತ್ಸವ, ಮಧ್ಯಾಹ್ನ ಅನ್ನ ಸಂತರ್ಪಣೆ, ರಾತ್ರಿ 10 ರಿಂದ ಶಿಬರೂರು ಕೊಡಮಣಿತ್ತಾಯ ದೈವದ ನೇಮೋತ್ಸವ, 5ರ ರಾತ್ರಿ 10.30ರಿಂದ ಜಂತಬೆಟ್ಟು ಶ್ರೀ ಬಂಟ-ಸಾರಾಳ ಧೂಮಾವತಿ ದೈವಗಳ ನೇಮೋತ್ಸವ, ರಾತ್ರಿ 2 ರಿಂದ ಕೊಡಪದ ಪಂಜುರ್ಲಿ ನೇಮೋತ್ಸವ. 6 ರ ರಾತ್ರಿ 10.30ರಿಂದ ಕಲ್ಲಂಜ ಬಾಳಿಕೆ ಶ್ರೀ ಕಾಂತೇರಿ ಧೂಮಾವತಿ-ಬಂಟ ದೈವಗಳ ನೇಮೋತ್ಸವ, 7 ರ ರಾತ್ರಿ 10.30ರಿಂದ ಪಂಜ ಪುಂಡು ಜಾರಿಗೆ ಶ್ರೀ ಜಾರಂದಾಯ ಬಂಟ ದೈವಗಳ ನೇಮೋತ್ಸವ, ರಾತ್ರಿ 2 ರಿಂದ ಶ್ರೀ ಕೋಡ್ಡಬ್ಬು-ಜಾರಂದಾಯ ದೈವಗಳ ಭೇಟಿ, 8 ರ ಬೆಳಿಗ್ಗೆ ಭಂಡಾರ ನಿರ್ಗಮನವಾಗಲಿದೆ. ಎಪ್ರಿಲ್ 4 ರಾತ್ರಿ 7 ಗಂಟೆಗೆ ನಡೆಯಲಿರುವ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಉಮಾನಾಥ ಕೋಟ್ಯಾನ್ ವಹಿಸಲಿದ್ದು ಶ್ರೀ ಕ್ಷೇತ್ರ ಕಟೀಲಿನ ಅನುವಂಶಿಕ ಅರ್ಚಕ ಅನಂತಪದ್ಮನಾಭ ಆಸ್ರಣ್ಣರು ಆಶೀರ್ವಚನ ನೀಡಲಿದ್ದಾರೆ. ಡಾ. ಗಣೇಶ್ ಅಮೀನ್ ಸಂಕಮಾರ್ ಧಾರ್ಮಿಕ ಉಪನ್ಯಾಸ ನೀಡಲಿದ್ದು ಎಸ್ ಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷ ಡಾ. ಎಂ ಎನ್ ರಾಜೇಂದ್ರ ಕುಮಾರ್, ಚಲನಚಿತ್ರ ನಟ ರಿಷಭ್ ಶೆಟ್ಟಿ, ಉದ್ಯಮಿಗಳಾದ ಪ್ರಕಾಶ್ ಶೆಟ್ಟಿ, ಭಾಸ್ಕರ ಶೆಟ್ಟಿ ಕುಡ್ತಿಮಾರುಗುತ್ತು, ಕನ್ಯಾನ ಸದಾಶಿವ ಶೆಟ್ಟಿ, ಕರುಣಾಕರ ಶೆಟ್ಟಿ ಮಧ್ಯಗುತ್ತು, ಶಶಿಧರ ಶೆಟ್ಟಿ ಬರೋಡ, ಮನೋಹರ್ ಶೆಟ್ಟಿ, ಸಂತೊಷ್ ಶೆಟ್ಟಿ ಪೂನಾ, ಡಿ ಸುಧಾಕರ ಶೆಟ್ಟಿ, ಸಂಸದ ಕ್ಯಾಪ್ಟನ್ ಬ್ರಜೇಶ್ ಚೌಟ, ಶಾಸಕರಾದ ಡಾ. ವೈ ಭರತ್ ಶೆಟ್ಟಿ, ಗುರ್ಮೆ ಸುರೇಶ್ ಶೆಟ್ಟಿ, ಎಮ್ ಮೋಹನ್ ಆಳ್ವ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ. ನೇಮೋತ್ಸವದ ಅಂಗವಾಗಿ ಪ್ರತಿದಿನ ಸಂಜೆ ಮತ್ತು ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳು , ಭಜನಾ ಸಂಕೀರ್ತನೆಗಳು, ಸಂಗೀತ ರಸಮಂಜರಿ, ಏಪ್ರಿಲ್ 7ರಂದು “ಯಾನೊರಿ ಬರೋಲಿಯಾ " ಎಂಬ ತುಳು ಸಾಮಾಜಿಕ ನಾಟಕ, 8 ರಂದು ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ . ಸುಮಾರು 25000ಕ್ಕೂ ಮಿಕ್ಕಿ ಭಕ್ತರು ಭಾಗವಹಿಸಲಿದ್ದು ಭಕ್ತರಿಗೆ ಫಲಹಾರ, ರಾತ್ರಿ ಸಾರ್ವಜನಿಕ ಅನ್ನಸಂತರ್ಪಣೆಯ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದರು.ಗೋಷ್ಠಿಯಲ್ಲಿ ಬೊಳ್ಳಾರಗೋಳಿ ಪಂಚ ದೈವಗಳ ನೇಮೋತ್ಸವ ಸಮಿತಿ ಅಧ್ಯಕ್ಷ ರಾಜೇಂದ್ರ ಶೆಟ್ಟಿ ಕುಡ್ತಿಮಾರುಗುತ್ತು, ಗೌರವಾಧ್ಯಕ್ಷ ಅನಿಲ್ ಶೆಟ್ಟಿ ತೇವು ಸೂರಿಂಜೆ, ಯೋಗೀಶ್ ಶೆಟ್ಟಿ ಮುಂಬಯಿ, ಕಾರ್ಯಾಧ್ಯಕ್ಷ ಮನೋಹರ ಶೆಟ್ಟಿ ಸೂರಿಂಜೆ, ಸ್ವಾಗತ ಸಮಿತಿ ಸಂಚಾಲಕ ಮೋಹನ್ ದಾಸ್ ಶೆಟ್ಟಿ ಬೊಳ್ಳಾರುಗುತ್ತು, ಮಾಧ್ಯಮ ಸಮಿತಿ ಸಹಸಂಚಾಲಕ ಪುಷ್ಷರಾಜ್ ಶೆಟ್ಟಿ ಮಧ್ಯ ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.