ಕನ್ನಡಪ್ರಭ ವಾರ್ತೆ ಸಿಂಧನೂರು
ಅವರು ಸರ್ಕಾರಿ ಪದವಿ ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸುವರ್ಣ ಸಾಂಸ್ಕೃತಿಕ ಮಹೋತ್ಸವ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲ ಶಾಶ್ವತಸ್ವಾಮಿ ಮುಕ್ಕುಂದಿಮಠರ ‘ಮುನ್ನುಡಿ ಮಣಿ ತೋರಣ’ ಕೃತಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ಗುರುಕುಲ ಪದ್ಧತಿಯ ಶಿಕ್ಷಣ ಎಂಬ ಹೆಸರಿನಲ್ಲಿ ಮತ್ತೆ ಹಳೆಯ ಪದ್ಧತಿಯನ್ನೆ ಮುಂದುವರಿಸುವ, ಮೇಲ್ವರ್ಗದ ಹಿತ ಕಾಯುವ ವ್ಯವಸ್ಥೆ ಅಡಗಿದೆ ಎಂದು ಟೀಕಿಸಿದರು.ದ್ವೇಷದಿಂದ ದೇಶ ಕಟ್ಟಲಾಗುವುದಿಲ್ಲ. ಪ್ರೀತಿಯಿಂದ ಮಾತ್ರ ದೇಶ ಕಟ್ಟಬಹುದು. ಈ ದೇಶದಲ್ಲಿ ಜನಿಸಿದ ಪ್ರತಿಯೊಬ್ಬರು ಈ ಮಣ್ಣಿನ ಮಕ್ಕಳೆ ಆಗಿದ್ದಾರೆ. ಅದನ್ನು ಶರಣರು, ದಾಸರು ಮತ್ತು ಅವಧೂತ ಪರಂಪರೆ ಕಾಯ್ದುಕೊಂಡು ಬಂದಿದೆ. ಇಂದಿನ ದಿನಗಳಲ್ಲಿ ಇಂತಹ ಪರಂಪರೆಯನ್ನು ನಾಶಪಡಿಸುವ ಪ್ರಯತ್ನ ನಡೆಯುತ್ತಿದ್ದು, ಅಂತಹ ಶಕ್ತಿಗಳ ಬಗ್ಗೆ ಸದಾ ಎಚ್ಚರದಿಂದ ಇರಬೇಕು. ಪ್ರಜಾಪ್ರಭುತ್ವ ಮತ್ತು ಜಾತ್ಯಾತೀತ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಲು ಉಪನ್ಯಾಸಕರು ಶ್ರಮಿಸಬೇಕಾಗಿದೆ. ಅಂದರೆ ಮಾತ್ರ ನಾವು ಪಡೆದಿರುವ ಸ್ವಾತಂತ್ರ್ಯಕ್ಕೆ ಸಾರ್ಥಕತೆ ಸಿಗುತ್ತದೆ ಎಂದರು.
ನಿವೃತ್ತ ಪ್ರಾಧ್ಯಾಪಕ ಹನುಮಂತ ಮಾತನಾಡಿ, ಉಪನ್ಯಾಸಕರು ತರಗತಿಗಳಿಗೆ ಹೋಗುವ ಮುನ್ನ ಹೇಳುವ ಪಾಠದ ಬಗ್ಗೆ ಸರ್ವ ಸಿದ್ಧತೆ ಮಾಡಿಕೊಂಡೇ ವಿದ್ಯಾರ್ಥಿಗಳ ಮುಂದೆ ನಿಲ್ಲಬೇಕು ಎಂದು ಸಲಹೆ ನೀಡಿದರು.
ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಮಾತನಾಡಿ, ಸರ್ಕಾರಿ ಕಾಲೇಜು ಪ್ರಾರಂಭವಾಗುವುದಕ್ಕೆ ದಿ.ಮಾಜಿ ಶಾಸಕ ಗದ್ರಟಗಿ ಅಮರೇಗೌಡರ ಶ್ರಮವಿದೆ. ಅವರೊಂದಿಗೆ ಆಗ ತಾವು ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷರಾಗಿದ್ದು, ಸಂಸ್ಥೆಯ ಕಟ್ಟಡವನ್ನು ಕಾಲೇಜು ವಿದ್ಯಾರ್ಥಿಗಳಿಗಾಗಿ ಬಿಟ್ಟು ಕೊಟ್ಟಿದ್ದಲ್ಲದೆ ಅವರನ್ನು ಕಾಲೇಜಿಗೆ ಕರೆ ತರಲು ಪಟ್ಟ ಪ್ರಯತ್ನವನ್ನು ನೆನಪಿಸಿದರು.
ಹಿರಿಯ ಉಪನ್ಯಾಸಕ ಶಿವಯ್ಯ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಪ್ರಹ್ಲಾದ ರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಾಣಿಜ್ಯ ಉಪನ್ಯಾಸಕ ಯಮನೂರ ಸ್ವಾಗತಿಸಿದರು. ಸಹ ಪ್ರಾಧ್ಯಾಪಕ ಬಸವರಾಜ್ ತಡಕಲ್ ನಿರೂಪಿಸಿದರು.