ಬಾಪೂಜಿ ಪತ್ತಿನ ಸೌಹಾರ್ದ ಸಹಕಾರಿ ಬ್ಯಾಂಕಿಗೆ ₹15.32 ಕೋಟಿ ನಿವ್ವಳ ಲಾಭ

KannadaprabhaNewsNetwork |  
Published : Jul 03, 2025, 11:52 PM IST
ಬೀಳಗಿ ತಾಲೂಕಿನ ಬಾಡಗಿ ಗ್ರಾಮದ ಪುನರ್ವಸತಿ ಕೇಂದ್ರದಲ್ಲಿ ಬಾಪೂಜಿ ಪತ್ತಿನ ಸೌಹಾರ್ದ ಸಹಕಾರಿ ಬ್ಯಾಂಕಿನ 125ನೇ ನೂತನ ಶಾಖೆಯನ್ನು ಬಾಪೂಜಿ ಪತ್ತಿನ ಸೌಹಾರ್ದ ಸಹಕಾರಿ ಬ್ಯಾಂಕಿನ ಸಂಸ್ಥಾಪಕ ಅಧ್ಯಕ್ಷರು ಹಾಗೂ ಮಾಜಿ ಸಚಿವರಾದ ಎಸ್.ಆರ್.ಪಾಟೀಲ ಉದ್ಘಾಟಿಸಿದರು. | Kannada Prabha

ಸಾರಾಂಶ

ಬಾಗಲಕೋಟೆ ಜಿಲ್ಲಾ ಕೇಂದ್ರದಲ್ಲಿ 2008ರಲ್ಲಿ ಪ್ರಾರಂಭವಾದ ಬಾಪೂಜಿ ಪತ್ತಿನ ಸೌಹಾರ್ದ ಸಹಕಾರಿ ಬ್ಯಾಂಕ್‌ ಇಂದು ಬ್ಯಾಂಕಿನಲ್ಲಿ 75 ಸಾವಿರ ಸದಸ್ಯರು ಹೊಂದಿದ್ದು, ₹1,340 ಕೋಟಿ ಠೇವುಗಳು, ₹1,400 ಕೋಟಿ ದುಡಿಯುವ ಬಂಡವಾಳ ₹1,180 ಕೋಟಿಯಷ್ಟು ಸಾಲ ವಿತರಣೆ ಮಾಡಿದೆ. ಮಾರ್ಚ್‌ 31ಕ್ಕೆ ನಮ್ಮ ಬ್ಯಾಂಕ್‌ ₹15.32 ಕೋಟಿ ನಿವ್ವಳ ಲಾಭಗಳಿಸಿದೆ ಎಂದು ಬಾಗಲಕೋಟೆ ಬಾಪೂಜಿ ಪತ್ತಿನ ಸೌಹಾರ್ದ ಸಹಕಾರಿ ಬ್ಯಾಂಕಿನ ಸಂಸ್ಥಾಪಕ, ಅಧ್ಯಕ್ಷರು ಹಾಗೂ ಮಾಜಿ ಸಚಿವ ಎಸ್.ಆರ್.ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಬೀಳಗಿ

ಬಾಗಲಕೋಟೆ ಜಿಲ್ಲಾ ಕೇಂದ್ರದಲ್ಲಿ 2008ರಲ್ಲಿ ಪ್ರಾರಂಭವಾದ ಬಾಪೂಜಿ ಪತ್ತಿನ ಸೌಹಾರ್ದ ಸಹಕಾರಿ ಬ್ಯಾಂಕ್‌ ಇಂದು ಬ್ಯಾಂಕಿನಲ್ಲಿ 75 ಸಾವಿರ ಸದಸ್ಯರು ಹೊಂದಿದ್ದು, ₹1,340 ಕೋಟಿ ಠೇವುಗಳು, ₹1,400 ಕೋಟಿ ದುಡಿಯುವ ಬಂಡವಾಳ ₹1,180 ಕೋಟಿಯಷ್ಟು ಸಾಲ ವಿತರಣೆ ಮಾಡಿದೆ. ಮಾರ್ಚ್‌ 31ಕ್ಕೆ ನಮ್ಮ ಬ್ಯಾಂಕ್‌ ₹15.32 ಕೋಟಿ ನಿವ್ವಳ ಲಾಭಗಳಿಸಿದೆ ಎಂದು ಬಾಗಲಕೋಟೆ ಬಾಪೂಜಿ ಪತ್ತಿನ ಸೌಹಾರ್ದ ಸಹಕಾರಿ ಬ್ಯಾಂಕಿನ ಸಂಸ್ಥಾಪಕ, ಅಧ್ಯಕ್ಷರು ಹಾಗೂ ಮಾಜಿ ಸಚಿವ ಎಸ್.ಆರ್.ಪಾಟೀಲ ಹೇಳಿದರು.

ತಾಲೂಕಿನ ಬಾಡಗಿ ಗ್ರಾಮದ ಪುನರ್ವಸತಿ ಕೇಂದ್ರದಲ್ಲಿ ಗುರುವಾರ ನಡೆದ ಬಾಪೂಜಿ ಪತ್ತಿನ ಸೌಹಾರ್ದ ಸಹಕಾರಿ ಬ್ಯಾಂಕಿನ 125ನೇ ನೂತನ ಶಾಖೆ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯ ತುಂಬೆಲ್ಲ ತಾಲೂಕಿನ ಬಾಡಗಿ ಗ್ರಾಮದಲ್ಲಿ ನೂತನವಾಗಿ ತನ್ನ125ನೇ ಶಾಖೆಯನ್ನು ಪ್ರಾರಂಭಿಸಲಾಗಿದ್ದು, ಈ ಭಾಗದ ಜನರ ಜೀವನಾಡಿಯಾಗಿ ಕಾರ್ಯನಿರ್ವಹಿಸಲಿದೆ ಎಂದರು.

ಬೂದಿಹಾಳ ಫಕಿರೇಶ್ವರ ಶ್ರೀಮಠದ ಪ್ರಭು ಮಹಾಸ್ವಾಮಿಗಳು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಎಸ್.ಆರ್.ಪಾಟೀಲರು ತಮ್ಮ ರಾಜಕೀಯ ರಂಗದಲ್ಲಿ ಸಾಕಷ್ಟು ಜನಾನುರಿಯಾಗಿ ಕೆಲಸ ಮಾಡುತ್ತ ಕೃಷ್ಣಾ ಮೇಲ್ದಂಡೆ ಯೋಜನೆಯ ಆಲಮಟ್ಟಿ ಜಲಾಶಯ ಹಿನ್ನಿರೀನ ಬಾದಿತ ಮುಳುಗಡೆ ಸಂತ್ರಸ್ತರ ಬದುಕು ದುಸ್ತರಗೊಂಡಾಗ ಅವರಿಗೆ ಆರ್ಥಿಕವಾಗಿ ಚೈತನ್ಯ ನೀಡಲು ಸಹಕಾರಿ ಕ್ಷೇತ್ರ ಬ್ಯಾಂಕ್‌, ಉದ್ಯೋಗ ನೀಡಲು ಸಕ್ಕರೆ ಕಾರ್ಖಾನೆ, ಉನ್ನತ ಶಿಕ್ಷಣ ಮತ್ತು ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಹೈಟೆಕ್‌ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಹಾಗೂ ತಮ್ಮ ಸ್ವಗ್ರಾಮ ಬಾಡಗಂಡಿಯಲ್ಲಿಯೇ ವೈದ್ಯಕಿಯ ಲೋಕವನ್ನೆ ಸೃಷ್ಟಿಸುವ ವೈದ್ಯಕಿಯ ಮಹಾವಿದ್ಯಾಲಯ ತೆರೆಯುವ ಮೂಲಕ ಈ ಭಾಗದ ಜನರ ಆರೋಗ್ಯ ಸಂಜೀವಿನಿಯಾಗಿದ್ದಾರೆ ಎಂದರು.

ಬಾಡಗಿಯ ಬಕ್ಕೇಶ್ವರ ಮಠದ ಬಕ್ಕಯ್ಯ ಮಹಾಸ್ವಾಮಿಗಳು, ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕಿನ ಉಪಾಧ್ಯಕ್ಷ ಸತ್ಯಪ್ಪ ಮೇಲ್ನಾಡ, ಬಾಡಗಿ ನೂತನ ಶಾಖೆಯ ಸಲಹಾ ಸಮಿತಿ ಅಧ್ಯಕ್ಷ ಅಪ್ಪಸಾಬ್‌ ಸಿ.ದೇಸಾಯಿ, ಕೆ.ಜಿ.ಪಾಟೀಲ, ಬಿ.ಎಸ್.ಮುಕಾಶಿ, ಬಾಬುಗೌಡ ಪಾಟೀಲ, ಎಚ್.ಎಸ್.ಶಿಂಗರಡ್ಡಿ, ಶೇಖಪ್ಪಕೋಟಿ, ಉಪಾಧ್ಯಕ್ಷತೆ ದ್ರಾಕ್ಷಾಯಣಿ ಎಸ್.ಕುಡ್ಲಿ, ಮುಖ್ಯಕಾರ್ಯನಿರ್ವಾಹಕ ಎಸ್.ಸಿ.ಮೋಟಗಿ, ಪ್ರಧಾನ ವ್ಯವಸ್ಥಾಪಕ ವಿಜಯಾನಂದ ಭಟ್ ಹಾಗೂ ಇನ್ನೂ ಅನೇಕರು ಇದ್ದರು.

ಬಾಡಗಿ ಗ್ರಾಮದಲ್ಲಿನ ಬಾಪೂಜಿ ಬ್ಯಾಂಕ ಪ್ರಾರಂಭಿಕ ಹಂತ್ತದಲ್ಲಿಯೇ ₹2 ಕೋಟಿ ಠೇವಣಿ ಹೊಂದಿದ್ದು, ಇಲ್ಲಿಯ ಜನರ ಪ್ರೀತಿ, ವಿಶ್ವಾಸ ಹಾಗೂ ನಂಬಿಕೆ ಇಟ್ಟಿರುವುದರಿಂದ ಇಂದು ಬ್ಯಾಂಕವು ಅಭಿವೃದ್ಧಿಯುತ್ತ ದಾಪುಗಾಲು ಹಾಕುತ್ತಿದೆ. ಬ್ಯಾಂಕಿನಲ್ಲಿ ಸಾಲ ಪಡೆದ ಸಾಲಗಾರರು ಸಕಾಲದಲ್ಲಿ ಮರುಪಾವತಿ ಮಾಡಿದರೇ ಮಾತ್ರ ಇನ್ನೂಬ್ಬರಿಗೆ ಸಾಲ ನೀಡಲು ಅನುಕೂಲವಾಗಲಿದೆ. ನಿಗದಿತ ಅವಧಿಯಲ್ಲಿಯೇ ಸಾಲ ಮರುಪಾವತಿ ಮಾಡಿದರೆ ಹೆಚ್ಚು ಅನುಕೂಲವಾಗಲಿದೆ.

-ಎಸ್.ಆರ್.ಪಾಟೀಲ, ಮಾಜಿ ಸಚಿವರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾಡಿ ಮಕ್ಕಳಿಗೆ ಸೆಗಣಿ ತೆಗೆಯುವ ಕೆಲಸ!
ಮಂಜನಾಡಿ ಗುಡ್ಡ ಕುಸಿತ ಪ್ರಕರಣ: ತಾಂತ್ರಿಕ ತನಿಖೆ ಆರಂಭ