ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಡಿ.ಶಿವಪ್ಪ ಸ್ಮಾರಕ 26ನೇ ವರ್ಷದ ರಾಜ್ಯ ಮಟ್ಟದ ಗೋಲ್ಡ್ ಕಪ್ ಫುಟ್‌ಬಾಲ್ ಟೂರ್ನಿಯ 4ನೇ ದಿನವಾದ ಸೋಮವಾರ ನಡೆದ ಪಂದ್ಯಾವಳಿಯಲ್ಲಿ ನೇತಾಜಿ ಕೊಡಗರಹಳ್ಳಿ ಹಾಗೂ ಇಕೆಎನ್ ಎಫ್.ಸಿ.ಕೋಳಿಕಡಾವು ಇರಟಿ ತಂಡಗಳು ಮುಂದಿನ ಸುತ್ತಿಗೆ ಅರ್ಹತೆ ಪಡೆಯಿತು.ಜಿಯಂಪಿ ಶಾಲಾ ಮೈದಾನದಲ್ಲಿ ಬ್ಲೂಬಾಯ್ಸ್ ಯೂತ್ ಕ್ಲಬ್ ವತಿಯಿಂದ 39ನೇ ವರ್ಷದ ಆಯೋಜಿಸಲಾಗಿರುವ ಪುಟ್ಬಾಲ್ ಮೊದಲನೇ ಪಂದ್ಯಾವಳಿಯು ಅತಿಥೇಯ ಬ್ಲೂ ಬಾಯ್ಸ್ ಯೂತ್ ಕ್ಲಬ್ ಹಾಗೂ ಕೊಡಗರಹಳ್ಳಿ ನೇತಾಜಿ ತಂಡಗಳ ನಡುವೆ ನಡೆದ ಕೊಡಗರಹಳ್ಳಿ ನೇತಾಜಿ ತಂಡದ ಮೊದಲಾರ್ಧದಲ್ಲಿ 12ನೇ ನಿಮೀಷದಲ್ಲಿ ನಾಗೇಶ್ ಒಂದು ಗೋಲು ಬಾರಿಸುವ ಮೂಲಕ ತಂಡಕ್ಕೆ ಮುನ್ನಡೆ ಒದಗಿಸಿಒಕೊಟ್ಟರು. ದ್ವಿತೀಯಾರ್ಧದಲ್ಲಿ 2ನೇ ನಿಮೀಷದಲ್ಲಿ ಕೊಡಗರಹಳ್ಳಿ ನೇತಾಜಿ ತಂಡದ ನಾಗೇಶ್ ಮತ್ತೊಂದು ಗೋಲುಗಳಿಸುವ ಮೂಲಕ ಅತಿಥೇಯ ಬ್ಲೂಬಾಯ್ಸ್ ತಂಡಕ್ಕೆ ಒತ್ತಡವನ್ನು ಹೆಚ್ಚಿಸುತ್ತಿದ್ದಂತೆ ಎದುರಾಳಿ ಬ್ಲೂಬಾಯ್ಸ್ ತಂಡವು ಆಕ್ರಮಣ ಆಟಕ್ಕೆ ಮುಂದಾಗಿ 4ನೇ ನಿಮಿಷದಲ್ಲಿ 1 ಗೋಲುಗಳಿಸುವ ಮೂಲಕ ಗೋಲಿನ ಅಂತರವನ್ನು ಕಡಿಮೆಗೊಳಿಸಿಕೊಂಡರು. ಆದರೆ ನೇತಾಜಿ ಉತ್ತಮ ಆಟವನ್ನು ಪ್ರದರ್ಶಿಸುತ್ತಿರುವ ಸಂದರ್ಭ ಬ್ಲೂ ಬಾಯ್ಸ್ ತಂಡದವರು ಎಸಗಿದ ತಪ್ಪಿನಿಂದ ನೇತಾಜಿ ಟ್ರೈಬ್ರೆಕರ್ ಅವಕಾಶ ದೊರೆತ್ತಿದ್ದು ಅದನ್ನು ಗೋಲಾಗಿ ಪರಿವರ್ತಿಸುವಲ್ಲಿ ಚೇತನ್ ವಿಫಲಗೊಂಡಿದ್ದು ಆಶ್ಚರ್ಯಕ್ಕೆ ಎಡೆಮಾಡಿಕೊಟ್ಟಿತ್ತು. 2-1 ಗೋಲುಗಳಿಂದ ನೇತಾಜಿ ತಂಡವು ಮುಂದಿನ ಸುತ್ತಿಗೆ ಪ್ರವೇಶ ಪಡೆಯಿತು. ದ್ವಿತೀಯ ಪಂದ್ಯಾವಳಿಯು ಶೀತಲ್ ಎಫ್.ಸಿ ಮೈಸೂರು ಹಾಗೂ ಇಕೆಎನ್ ಎಫ್.ಸಿ.ಕೋಳಿಕಡಾವು, ಇರಿಟಿ ತಂಡಗಳ ನಡುವೆ ನಡೆದು ಪ್ರಥಮಾರ್ಧದ ಇಕೆಎನ್ ಎಫ್.ಸಿ.ಕೋಳಿಕಡಾವು 5ನೇ ನಿಮೀಷದಲ್ಲಿ ವಿಷ್ಣು 1 ಗೋಲು ಬಾರಿಸುವ ಮೂಲಕ ಎದುರಾಳಿ ತಂಡಕ್ಕೆ ಒತ್ತಡವನ್ನು ಹೇರಿದರು. ದ್ವಿತೀಯಾರ್ಧದಲ್ಲಿ ಇಕೆಎನ್ ಎಫ್.ಸಿ.ಕೋಳಿಕಡಾವು ತಂಡದ ಮುನ್ನಡೆ ಆಟಗಾರ ಸುಧೀಫ್ 13 ನೇ ನಿಮಿಷದಲ್ಲಿ ಮತ್ತೊಂದು ಗೋಲು ಬಾರಿಸುವ ಮೂಲಕ ತಂಡಕ್ಕೆ ಮತ್ತಷ್ಟು ಮುನ್ನಡೆಯನ್ನು ಒದಗಿಸಿದರು. ಎದುರಾಳಿ ಶೀತಲ್ ತಂಡವನ್ನು 2-0 ಗೋಲುಗಳಿಂದ ಸೋಲಿಸುವ ಮೂಲಕ ಇಕೆಎನ್ ಎಫ್.ಸಿ.ಕೋಳಿಕಡಾವು ಇರಟಿ ತಂಡವು ಮುಂದಿನ ಸುತ್ತಿಗೆ ಪ್ರವೇಶ ಪಡೆಯಿತು. ಈ ಪಂದ್ಯಾವಳಿಯ ಉದ್ಘಾಟನೆಯನ್ನು ಕೊಡಗು ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರರಾದ ಎ.ಲೋಕೇಶ್ ಕುಮಾರ್ ಚಾಲನೆ ನೀಡಿದರು. ಈ ಸಂದರ್ಭ ಕೆ.ಐ.ಶರೀಫ್, ಗ್ರಾ.ಪಂ.ಸದಸ್ಯ ಶಬ್ಬಿರ್ ಮತ್ತಿತರರು ಇದ್ದರು.ಇಂದಿನ ಪಂದ್ಯಾವಳಿಗಳುಮೊದಲ ಪಂದ್ಯ 3 ಗಂ. ನೇತಾಜಿ ಎಫ್.ಸಿ ಮಂಡ್ಯ v/s ಸಿಟಿಜನ್ ಉಪ್ಪಳ
ದ್ವಿತೀಯ ಪಂದ್ಯಾವಳಿ 4.30 ಗಂ. ಆಶೋಕಎಫ್.ಸಿ ಮೈಸೂರು v/s ಪೈರ‍್ಸ್ ಎಫ್.ಸಿ. ಕುತೂಪರಂಬು